ಸೌತ್ ಸೂಪರ್ ಸ್ಟಾರ್ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಲಿಯೋ' ಗುರುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಅದಾಗ್ಯೂ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಪ್ರೇಕ್ಷಕರು ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ.
- " class="align-text-top noRightClick twitterSection" data="">
ಮೊದಲ ದಿನದ ಕಲೆಕ್ಷನ್: 'ಲಿಯೋ' ಸಿನಿಮಾ ಮೊದಲ ದಿನದಂದು ಭಾರತದಲ್ಲಿ 63 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ಹೊರಹೊಮ್ಮಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಮಾಹಿತಿ ಪ್ರಕಾರ, ಲಿಯೋ ಮೊದಲ ದಿನ ಜಾಗತಿಕವಾಗಿ 140 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದಾಗ್ಯೂ, ಸಿನಿಮಾ ತನ್ನ 2ನೇ ದಿನದಂದು ದೇಶೀಯ ಮಾರುಕಟ್ಟೆಯಲ್ಲಿ ಶೇ.48ಕ್ಕೂ ಹೆಚ್ಚು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ.
-
BLOCKBUSTER IS THE WORD💥#LEO in cinemas near you 🔥#BlockbusterLeo pic.twitter.com/hWokOvlyWM
— Seven Screen Studio (@7screenstudio) October 19, 2023 " class="align-text-top noRightClick twitterSection" data="
">BLOCKBUSTER IS THE WORD💥#LEO in cinemas near you 🔥#BlockbusterLeo pic.twitter.com/hWokOvlyWM
— Seven Screen Studio (@7screenstudio) October 19, 2023BLOCKBUSTER IS THE WORD💥#LEO in cinemas near you 🔥#BlockbusterLeo pic.twitter.com/hWokOvlyWM
— Seven Screen Studio (@7screenstudio) October 19, 2023
ಎರಡನೇ ದಿನ ದೊಡ್ಡ ಮಟ್ಟದ ಕುಸಿತ ಸಾಧ್ಯತೆ: ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಲಿಯೋ ಸಿನಿಮಾ ತನ್ನ ಎರಡನೇ ದಿನದಂದು ಭಾರತದಲ್ಲಿ ಸುಮಾರು 32.51 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಎರಡು ದಿನಗಳ ದೇಶೀಯ ಗಲ್ಲಾಪೆಟ್ಟಿಗೆ ಕಲೆಕ್ಷನ್ 95.51 ಕೋಟಿ ರೂಪಾಯಿ ಆಗಲಿದೆ. ಮೊದಲ ದಿನ 63 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ ಎರಡನೇ ದಿನ 32 ಕೋಟಿ ರೂ. ಗಳಿಸಿದರೆ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸರಿಸುಮಾರು ಶೇ. 50 ರಷ್ಟು ಕುಸಿತ ಕಂಡಂತಾಗುತ್ತದೆ. ಚೆನ್ನೈನಲ್ಲಿ ಲಿಯೋ ಸಿನಿಮಾ ಅತಿ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ ಆಗುತ್ತಿದೆ. 1,282 ಪ್ರದರ್ಶನಗಳನ್ನು ಹೊಂದಿದ್ದರೂ, ಸಿನಿಮಾ ಆರಂಭಿಕ ದಿನದ ಗಳಿಕೆ ವೇಗವನ್ನು ಉಳಿಸಿಕೊಳ್ಳಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ
ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿರುವ ಲಿಯೋ ಮಿಶ್ರ ಪ್ರತಿಕ್ರಿಯೆ ಸ್ವಿಕರಿಸಿದೆ. ಅದಾಗ್ಯೂ ಮೊದಲ ದಿನದ ಗಳಿಕೆ ಎಲ್ಲರ ತಲೆ ತಿರುಗುವಂತೆ ಮಾಡಿದೆ. ಮಾಸ್ಟರ್, ಬೀಸ್ಟ್, ಮತ್ತು ವರಿಸು ಬಳಿಕ ಬಂದ ವಿಜಯ್ ನಟನೆಯ ಚಿತ್ರವಿದು. ಕೊನೆಯದಾಗಿ ಮಾಸ್ಟರ್ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಇನ್ನು ತ್ರಿಷಾ ಕೃಷ್ಣನ್ ಜೊತೆ ವಿಜಯ್ 14 ವರ್ಷಗಳ ಬ್ರೇಕ್ ಬಳಿಕ ತೆರೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಗಿಲ್ಲಿ, ಕುರುವಿ, ತಿರುಪಾಚಿ, ಆತಿ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ