ETV Bharat / entertainment

ಟೈಗರ್ 3 ಪಾರ್ಟಿ ಸಾಂಗ್ ಟೀಸರ್ ಔಟ್: ಸಲ್ಮಾನ್​ ಸಿನಿಮಾಗೆ ಅರಿಜಿತ್ ಸಿಂಗ್​ ಸಾಥ್! - ಲೇಕೆ ಪ್ರಭು ಕಾ ನಾಮ್

ಟೈಗರ್ 3 ಚಿತ್ರದ ''ಲೇಕೆ ಪ್ರಭು ಕಾ ನಾಮ್'' ಹಾಡಿನ ಟೀಸರ್ ಇಂದು ಅನಾವರಣಗೊಂಡಿದೆ.

Leke Prabhu Ka Naam
ಲೇಕೆ ಪ್ರಭು ಕಾ ನಾಮ್
author img

By ETV Bharat Karnataka Team

Published : Oct 20, 2023, 2:14 PM IST

Updated : Oct 20, 2023, 2:29 PM IST

ಬಾಲಿವುಡ್​​ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸ್ಟಾರ್​ ನಟಿ ಕತ್ರಿನಾ ಕೈಫ್ ಅಭಿನಯದ ಮುಂದಿನ ಬಹು ನಿರೀಕ್ಷಿತ ಚಿತ್ರ 'ಟೈಗರ್ 3'. ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​​ ಸಿನಿಮಾದ ಮೊದಲ ಹಾಡಿನ ಶಾರ್ಟ್ ಗ್ಲಿಂಪ್ಸ್ ಅನ್ನು ಇಂದು ಅನಾವರಣಗೊಳಿಸಲಾಗಿದೆ. ''ಲೇಕೆ ಪ್ರಭು ಕಾ ನಾಮ್'' (Leke Prabhu Ka Naam) ಶೀರ್ಷಿಕೆಯ ಈ ಟ್ರ್ಯಾಕ್ ಒಂದು ಪಾರ್ಟಿ ಸಾಂಗ್. ಇಂದು ಅನಾವರಣಗೊಂಡಿರುವ ವಿಡಿಯೋ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ, ಕುತೂಹಲ, ಉತ್ಸಾಹವನ್ನು ಹೆಚ್ಚಿಸಿದೆ.

ಸಲ್ಮಾನ್ ಖಾನ್ ಹಾಗೂ ಬಾಲಿವುಡ್​ನ ಹೆಸರಾಂತ ಗಾಯಕ ಅರಿಜಿತ್ ಸಿಂಗ್ ಕಾಂಬೋದ ಹಾಡಿದು. ಶುಕ್ರವಾರ ಅನಾವರಣಗೊಂಡಿರುವ ಟೀಸರ್, ಸಲ್ಮಾನ್ ಮತ್ತು ಕತ್ರಿನಾ ಅವರ ಮನಮೋಹಕ ನೋಟವನ್ನು ಬಹಿರಂಗಪಡಿಸಿದೆ. ನೋಡಲು ಪಾರ್ಟಿ ಸಾಂಗ್​ ಎಂಬಂತೆ ತೋರಿದ್ದು, ಇಬ್ಬರೂ ಸ್ಟಾರ್ಸ್ ಸಖತ್​ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. 'ಲೇಕೆ ಪ್ರಭು ಕಾ ನಾಮ್‌'ಗೆ ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಅವರ ಸಾಹಿತ್ಯವಿದೆ. ಅರಿಜಿತ್ ಸಿಂಗ್ ಮತ್ತು ನಿಖಿತಾ ಗಾಂಧಿ ಕಂಠದಾನ ಮಾಡಿದೆ.

ಸಲ್ಮಾನ್​ ಖಾನ್​ ಹಾಗೂ ಅರಿಜಿತ್ ಸಿಂಗ್ ಕಾಂಬೋ ಬಗ್ಗೆ ಅಭಿಮಾನಿಗಳು ಸಖತ್​​ ಥ್ರಿಲ್ ಆಗಿದ್ದಾರೆ. ಟೀಸರ್ ಕುರಿತು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೀಡಿಯೋ ಸಾಂಗ್​ ವೀಕ್ಷಣೆಗೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬರು, "ಮೊದಲ ಬಾರಿಗೆ ಅರಿಜಿತ್ ಸಿಂಗ್ ಅವರು ಸಲ್ಮಾನ್ ಖಾನ್‌ಗಾಗಿ ಹಾಡುತ್ತಿದ್ದಾರೆ. ಇದೊಂದು ಎಪಿಕ್​​. ಎಂದೆಂದಿಗೂ ಸೆಲೆಬ್ರೇಟ್​ ಮಾಡಬೇಕಾದ ಹಾಡಿದು" ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್​ ಮಾಡಿ, "ಡಬಲ್ ತಡ್ಕಾ, (ಫೈಯರ್ ಎಮೋಜಿಯೊಂದಿಗೆ) ಅರಿಜಿತ್ ಸಿಂಗ್ ಮತ್ತು ಸಲ್ಮಾನ್ ಖಾನ್" ಎಂದು ಹೇಳಿದ್ದಾರೆ. ಅಭಿಮಾನಿಗಳ ರಿಯಾಕ್ಷನ್ಸ್ ಅಂಡ್​​ ಎಕ್ಸ್​​ಪೆಕ್ಟೇಶನ್ಸ್ ಗಮನಿಸಿದರೆ ಈ ಹಾಡು ಸೂಪರ್ ಹಿಟ್ ಆಗಲಿದೆ ಎಂಬುದು ಬಹುತೇಕ ಖಚಿತ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ರಾಜ್​ ಕುಂದ್ರಾ ನಡುವೆ ಬಿರುಕು ವದಂತಿ: ಸಿನಿಮಾ ಪ್ರಚಾರದ ಭಾಗವಾಗಿ ಟ್ವೀಟ್ ಮಾಡಿದ್ರಾ ಉದ್ಯಮಿ?!

ಟೈಗರ್ 3 ಸಿನಿಮಾ ಯಶ್ ರಾಜ್ ಫಿಲ್ಮ್ಸ್‌ ಸ್ಪೈ ಯೂನಿವರ್ಸ್​ನ ಐದನೇ ಚತ್ರ. ಮನೀಶ್ ಶರ್ಮಾ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಸಲ್ಮಾನ್ ಮತ್ತು ಕತ್ರಿನಾ ಕ್ರಮವಾಗಿ ಟೈಗರ್ - ಜೋಯಾ ಆಗಿ ತಮ್ಮ ಪಾತ್ರಗಳನ್ನು (ಟೈಗರ್​ 1 - 2 ಪಾತ್ರಗಳು) ಪುನರಾವರ್ತಿಸಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಟೈಗರ್ 3 ಟ್ರೇಲರ್​​ ನಟ ಇಮ್ರಾನ್ ಹಶ್ಮಿಯನ್ನು ಖಳನಾಯಕನಾಗಿ ತೋರಿಸಿದೆ. ಟೀಸರ್, ಟ್ರೈಲರ್​ಗಳು ಇದೊಂದು ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಎಂದು ಭರವಸೆ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭ, ನವೆಂಬರ್ 12 ರಂದು ಟೈಗರ್​ 3 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್​!

Last Updated : Oct 20, 2023, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.