ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸುವುದರ ಜೊತೆಗೆ ನಟನೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಭದ್ರ ಸ್ಥಾನ ಕಲ್ಪಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಕಾಂತಾರ ಇವರ ಸಿನಿ ಕೆರಿಯರಿಗೆ ದೊಡ್ಡ ಬ್ರೇಕ್ ನೀಡಿದೆ. ಕಾಂತಾರ ಬಳಿಕ ರಿಷಬ್ ಶೆಟ್ಟಿ ಜನಪ್ರಿಯತೆ ದೇಶಾದ್ಯಂತ ಹಬ್ಬಿದೆ. ಹೊರದೇಶಗಳಲ್ಲೂ ಇವರಿಗೆ ಮನ್ನಣೆ ಸಿಗುತ್ತಿದೆ. ರಿಷಬ್ ಶೆಟ್ಟಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ "ಲಾಫಿಂಗ್ ಬುದ್ಧ" ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ.
ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ 'ಲಾಫಿಂಗ್ ಬುದ್ಧ' ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಭದ್ರಾವತಿಯ ಚಂಡಿಕಾ ದುರ್ಗಾ ದೇವಾಲಯದಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
ಲಾಫಿಂಗ್ ಬುದ್ಧ ಸಿನಿಮಾ ಕಥೆ ಪೊಲೀಸ್ ಪೇದೆಯ ಸುತ್ತ ಸುತ್ತುತ್ತದೆ. ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಹೇಗೆ ಸಂತೋಷವನ್ನು ತರುತ್ತಾರೆ ಎಂಬುದೇ ಚಿತ್ರದ ಕಥೆ. ಹಾಸ್ಯದ ಜೊತೆಗೆ ಭಾವನಾತ್ಮಕ ದೃಶ್ಯಗಳು ಸಹ ಸಿನಿಮಾದಲ್ಲಿ ಇರಲಿವೆ ಎಂದಿದೆ ಚಿತ್ರತಂಡ.
ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಪ್ರಮೋದ್ ಶೆಟ್ಟಿ ಮತ್ತು ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ನಟಿಸಿದ್ದಾರೆ. ತೇಜು ಕೊನೆಯದಾಗಿ ಗಂಟುಮೂಟೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಾಮಿಡಿ ಹಾಗೂ ಡ್ಯಾಮಾ ಜಾನರ್ನ ಈ ಚಿತ್ರವನ್ನು ಎಂ. ವಿಷ್ಣು ವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ "ಲಾಫಿಂಗ್ ಬುದ್ಧ" ಚಿತ್ರಕ್ಕಿದೆ. ಶೀಘ್ರದಲ್ಲೇ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: Janhvi Kapoor: ಮಿಂಚುವ ಉಡುಗೆಯಲ್ಲಿ ಮಿನುಗಿದ ಸೌಂದರ್ಯದ ಖನಿ ಜಾನ್ವಿ ಕಪೂರ್ PHOTOS
ಖಳನಟ, ಪೋಷಕ ಪಾತ್ರಗಳಳಿಗೆ ಜೀವ ತುಂಬುವ ಮೂಲಕ ಕನ್ನಡ ಸಿನಿರಂಗದಲ್ಲಿ ಗಮನ ಸೆಳೆದಿರುವ ರಂಗಭೂಮಿ ಕಲಾವಿದ ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟಿ ಹಾಸ್ಯ ಮಿಶ್ರಿತ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ 'ಲಾಫಿಂಗ್ ಬುದ್ಧ' ಸಿನಿಮಾದಲ್ಲಿ ಇವರದ್ದು ಪ್ರೇಕ್ಷಕರನ್ನು ನಕ್ಕು ನಲಿಸುವ ಪಾತ್ರ. ಹೆಡ್ ಕಾನ್‌ಸ್ಟೇಬಲ್ ಆಗಿ ಕಾಣಿಸಿಕೊಳ್ಳಲಿರುವ ನಟ ಪ್ರಮೋದ್ ಶೆಟ್ಟ ಈ ಚಿತ್ರದಲ್ಲಿ ದಢೂತಿ ವ್ಯಕ್ತಿ, ತಿಂಡಿಪೋತ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಭರತ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಇದನ್ನೂ ಓದಿ: 'ಅಪರೂಪ'ದ ಪ್ರೇಮಕಥೆ ಹೇಳಲು ಬರುತ್ತಿದ್ದಾರೆ ಅರಸು ಸಿನಿಮಾ ನಿರ್ದೇಶಕ