ಬೆಂಗಳೂರು: ದೇಶದಲ್ಲಿ ಸುಗಮ ಸಂಗೀತಕ್ಕೆ ಕರ್ನಾಟಕ್ಕೆ ಹೆಸರುವಾಸಿ. ಆದರೆ, ಇಂತಹ ಕ್ಷೇತ್ರದಲ್ಲಿ ಹುಳುಕು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು. ಪ್ರಚಾರಕ್ಕಾಗಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಲಹರಿ ವೇಲು ಕಿಡಿಕಾರಿದರು.
ಪ್ರೆಸ್ ಕ್ಲಬ್ನಲ್ಲಿ ಇಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಹರಿ ರೆಕಾರ್ಡಿಂಗ್ ಕಂಪನಿಯ ನಿರ್ದೇಶಕ ತುಳಸಿರಾಮ ನಾಯ್ಡು( ಲಹರಿ ವೇಲು), ನಮಗೆ ಸಿ ಅಶ್ವತ್ಥ್ ಬೇರೆಯಲ್ಲ ಮತ್ತು ಅನಂತಸ್ವಾಮಿ ಬೇರೆಯಲ್ಲ. ವಿನಾಕಾರಣ ವಿವಾದವನ್ನು ಹುಟ್ಟು ಹಾಕಲಾಗುತ್ತಿದೆ. ಸುಗಮ ಸಂಗೀತದಲ್ಲಿ ಯಾವುದೇ ರೀತಿಯ ಭೇದ ಇರಬಾರದು. ಸರ್ಕಾರ ನೇಮಿಸಿದ್ದ ಎಸ್.ಆರ್ ಲೀಲಾವತಿ ಸಮಿತಿಯಲ್ಲಿ ಒಟ್ಟು 16 ಸದಸ್ಯರಿದ್ದು, ಎಲ್ಲರ ಒಮ್ಮತದ ನಿರ್ಣಯದಿಂದ ಈ ನಿರ್ಧಾರ ತಗೆದುಕೊಳ್ಳಲಾಗಿರುವುದು ಸಮಂಜಸವಾಗಿದೆ ಎಂದರು.
ನಾಡಗೀತೆಗೆ ಮೊದಲು ರಾಗ ಸಂಯೋಜನೆ ಮಾಡಿದ್ದು ದಿ. ಮೈಸೂರು ಅನಂತಸ್ವಾಮಿ. ಆ ಕುರಿತು ಯಾವುದೇ ಸಂದೇಹ ಇಲ್ಲ. ಮೊದಲಿಗೆ ನಾಡಗೀತೆ ಆಗುತ್ತದೆ ಎಂದು ಅವರಿಗೆ ಗೊತ್ತಿರಲಿಲ್ಲ, ಭಾವಗೀತೆ ಎಂದು ಹಾಡಿದ್ದರು. ಸ್ವತಃ ಕುವೆಂಪು ಮುಂದೆ ಸಹ ಹಾಡಿದ್ದರು. ಅವರಿಗೆ ಗೌರವ ಸಲ್ಲಿಸಲು ಸರ್ಕಾರ ಈ ನಿರ್ಣಯ ತೆಗೆದುಕೊಂಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ.. ಮೊದಲ ವಾರ ಎಲಿಮಿನೇಟ್ ಆಗೋದ್ಯಾರು?