ಚೆನ್ನೈ: ನೆಲ್ಸನ್ ದಿಲೀಪ್‌ಕುಮಾರ್ ಅವರ ನಿರ್ದೇಶನದ ಬೀಸ್ಟ್ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಈ ಚಿತ್ರವನ್ನು ಕುವೈತ್ನಲ್ಲಿ ನಿಷೇಧಿಸಲಾಗಿದೆ ಎಂದು ಉದ್ಯಮದ ಪಂಡಿತರು ಮಂಗಳವಾರ ಹೇಳಿದ್ದಾರೆ.
ಮನರಂಜನಾ ಮಾಧ್ಯಮಗಳ ಪ್ರಕಾರ ಕುವೈತ್ ಮಾಹಿತಿ ಸಚಿವಾಲಯ ತಮಿಳು ಚಿತ್ರಗಳನ್ನು ನಿಷೇಧಿಸಿದೆ ಎಂದು ಹೇಳಿಕೊಂಡರೂ, ಸಿನಿಮಾ ನಿಷೇಧದ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸಿನಿಮಾದಲ್ಲಿರುವ ಪಾಕಿಸ್ತಾನಿ ಭಯೋತ್ಪಾದನೆ ಮತ್ತಯ ಹಿಂಸಾಚಾರದ ಬಗ್ಗೆ ಇರುವುದರಿಂದ ನಿಷೇಧಿಸಲಾಗಿದೆ ಎಂದು ಊಹಿಸಲಾಗಿದೆ. ಮಲಯಾಳಂನ ಕುರುಪ್, ತಮಿಳಿನ ಎಫ್ಐಆರ್ ಕೂಡ ಕುವೈತ್ನಲ್ಲಿ ನಿಷೇಧಿಸಲಾಗಿತ್ತು. ಯೋಧ ಭಯೋತ್ಪಾದಕರ ಜೊತೆ ಹೇಗೆ ವ್ಯವಹರಿಸುತ್ತಾನೆ ಎಂಬುದು ಚಿತ್ರದಲ್ಲಿದೆ. ಏ. 13ರಂದು ಬಹು ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಕೊಟ್ಟ ಭರವಸೆ ಈಡೇರಿಸಿದ ಪೂನಂ : ಕ್ಯಾಮೆರಾ ಮುಂದೆ ಟಾಪ್ಲೆಸ್ ಆದ ಪಾಂಡೆ