ETV Bharat / entertainment

Kushi: ಕುಶಿ ಟ್ರೇಲರ್ ಅನಾವರಣ - ಅದ್ಭುತ ಪ್ರೇಮಕಥೆ ಹೇಳಲು ಸಜ್ಜಾದ ಸಮಂತಾ, ವಿಜಯ್​ ದೇವರಕೊಂಡ - Samantha Ruth Prabhu

Kushi Trailer: ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ನಟನೆಯ ಕುಶಿ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.

Kushi trailer
ಕುಶಿ ಟ್ರೇಲರ್
author img

By

Published : Aug 9, 2023, 7:19 PM IST

ಸೌತ್​ ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ಮತ್ತು ಸೌತ್ ಸೆನ್ಸೇಶನಲ್​ ಸ್ಟಾರ್ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ ಕಂಪ್ಲೀಟ್​ ಲವ್​ ಸ್ಟೋರಿ ಸಿನಿಮಾ 'ಕುಶಿ'. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರ ತಯಾರಕರು ಇಂದು ಟ್ರೇಲರ್​ ಅನಾವರಣಗೊಳಿಸಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.

ಕುಶಿ ಟ್ರೇಲರ್ ಅನಾವರಣ: ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳಿರುವ ಕುಶಿ ಸಿನಿಮಾ ಒಂದು ಅದ್ಭುತ ಪ್ರೇಮಕಥೆ ಹೇಳಲು ಸಜ್ಜಾಗಿದೆ. ಮುಂದಿನ ಸೆಪ್ಟೆಂಬರ್​ 1ಕ್ಕೆ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಪ್ರಮೋಶನ್​ ಭಾಗವಾಗಿ ಇಂದು ನಡೆದ ಅದ್ಧೂರಿ ಈವೆಂಟ್​ನಲ್ಲಿ ಕುಶಿ ಟ್ರೇಲರ್ ಅನ್ನು​ ಅನಾವರಣಗೊಳಿಸಲಾಯಿತು. 2 ನಿಮಿಷ 41 ಸೆಕೆಂಡ್ಸ್ ಇರುವ 'ಕುಶಿ' ಟ್ರೇಲರ್​​ ಸಂಪೂರ್ಣ ಆಕರ್ಷಕವಾಗಿದೆ.

  • " class="align-text-top noRightClick twitterSection" data="">

ಸೆ. 1ಕ್ಕೆ ಬಹುಭಾಷೆಗಳಲ್ಲಿ ಕುಶಿ ಬಿಡುಗಡೆ: ಸೆಪ್ಟೆಂಬರ್ 1 ರಂದು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದಾರೆ. ಮಹಾನಟಿ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟಿ ಸಮಂತಾ ರುತ್​ ಪ್ರಭು ಈ ಹಿಂದೆ ಮಜಿಲಿ ಚಿತ್ರದಲ್ಲಿ ನಿರ್ದೇಶಕ ಶಿವ ನಿರ್ವಾಣ ಅವರೊಂದಿಗೆ ಕೆಲಸ ಮಾಡಿದ್ದರು.

ಕಂಪ್ಲೀಟ್​ ಲವ್​ ಸ್ಟೋರಿ ಸಿನಿಮಾ 'ಕುಶಿ'... ಸಂಪೂರ್ಣ ಪ್ರೇಮಕಥೆ ಆಗಿರುವ ಈ ಕುಶಿ ಸಿನಿಮಾ ಸದ್ಯ ಟ್ರೇಲರ್​ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದೆ. ವೀಕ್ಷಕರನ್ನು ಪ್ರೇಮದಲೆಯಲ್ಲಿ ತೇಲಿಸುತ್ತಿದೆ. ಜೋಡಿಯ ಪ್ರೇಮ ಪ್ರಯಾಣ, ವಿಭಿನ್ನ ಆಚರಣೆಗಳಿಗೆ ಒಗ್ಗಿಕೊಳ್ಳೋದು, ಎದುರಾಗುವ ಸವಾಲುಗಳು, ಕಥೆಯಲ್ಲಿನ ಟ್ವಿಸ್ಟ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಕುಶಿ ಟ್ರೇಲರ್​ ಅನಾವರಣಗೊಳ್ಳುತ್ತಿದ್ದಂತೆ ಇಬ್ಬರು ಬಹುಬೇಡಿಕೆ ಕಲಾವಿದರ ಅಭಿಮಾನಿಗಳು ಲವ್​, ಫೈಯರ್​ ಸಿಂಬಲ್​ನೊಂದಿಗೆ ಕಾಮೆಂಟ್​ ಸೆಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Jailer: ನಾಳೆ ಜೈಲರ್ ಬಿಡುಗಡೆ - ಇಂದು ಹಿಮಾಲಯ ಪ್ರವಾಸ ಕೈಗೊಂಡ ತಲೈವಾ ರಜನಿಕಾಂತ್​​

ಸಿನಿಮಾ ನಾಯಕ ನಟರ ಮದುವೆ ನಂತರ ಅವರು ಎದುರಿಸುವ ಸವಾಲುಗಳು, ಕಷ್ಟಗಳ ಸುತ್ತ ಕಥೆ ಸುತ್ತುತ್ತದೆ. ಕುಟುಂಬಸ್ಥರ ವಿರೋಧಗಳ ನಡುವೆಯೂ ಈ ಪ್ರೇಮಪಕ್ಷಿಗಳು ಹಸೆಮಣೆ ಏರುತ್ತಾರೆ. ಅದಾಗ್ಯೂ, ನಂತರ ಪರಿಸ್ಥಿತಿ ಸವಾಲುಗಳಿಂದ ಕೂಡಿರುತ್ತದೆ.

ಇದನ್ನೂ ಓದಿ: Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ಟ್ರೇಲರ್​ ಅನಾವರಣಕ್ಕೂ ಮುನ್ನ ಆರಾಧ್ಯ ಮತ್ತು ನಾ ರೋಜಾ ನುವ್ವೆ ಹಾಡುಗಳನ್ನು ಚಿತ್ರ ತಯಾರಕರು ಅನಾವರಣಗೊಳಿಸಿದ್ದರು. ಈ ಹಾಡನ್ನು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಇದೀಗ ಟ್ರೇಲರ್​ ಅನಾವರಣಗೊಂಡಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಕೈಗೊಳ್ಳಲು ಸಜ್ಜಾಗಿದೆ. ಸಿನಿಮಾ ಜಯರಾಂ, ಸಚಿನ್​ ಖೆಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಸಲಿ, ರೋಹಿಣಿ, ವೆನ್ನೆಲ ಕಿಶೋರ್​, ರಾಹುಲ್​ ರಾಮಕೃಷ್ಣ, ಶ್ರೀಕಾಂತ್​ ಅಯ್ಯಂಗಾರ್, ಶರಣ್ಯ ಅವರನ್ನು ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.