ETV Bharat / entertainment

ಸಮಂತಾ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ 'ಕುಶಿ' ಫಸ್ಟ್ ಡೇ ಕಲೆಕ್ಷನ್​ ಡೀಟೆಲ್ಸ್! - samantha

Kushi box office collection: ಸಮಂತಾ ರುತ್​ ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ಕುಶಿ ಸಿನಿಮಾ ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ.

Kushi collection
ಕುಶಿ ಸಿನಿಮಾ ಕಲೆಕ್ಷನ್​
author img

By ETV Bharat Karnataka Team

Published : Sep 2, 2023, 1:20 PM IST

ವಿಜಯ್​ ದೇವರಕೊಂಡ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ. ಸಮಂತಾ ರುತ್​ ಪ್ರಭು ಟಾಲಿವುಡ್​ನ ಟಾಪ್​ ಹೀರೋಯಿನ್​​. ಈಗಾಗಲೇ ಸಾಕಷ್ಟು ಹೆಸರು ಸಂಪಾದಿಸಿರುವ ಸಮಂತಾ ಮತ್ತು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯರಾದ ವಿಜಯ್​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಕುಶಿ' ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಕಲೆಕ್ಷನ್​ ಸಂಖ್ಯೆ ಉತ್ತಮವಾಗಿದೆ.

ಕುಶಿ ಸಿನಿಮಾಗೆ ಸಕಾರಾತ್ಮಕ ಸ್ಪಂದನೆ: ಲೈಗರ್​ ಸಿನಿಮಾ ಮೂಲಕ ನಟ ವಿಜಯ್ ದೇವರಕೊಂಡ ಮತ್ತು ಶಾಕುಂತಲಂ ಸಿನಿಮಾ ಮೂಲಕ ನಟಿ ​​ಸಮಂತಾ ರುತ್​ ಪ್ರಭು ಕೊಂಚ ಹಿನ್ನೆಡೆ ಅನುಭವಿಸಿದ್ದರು. ಇದೀಗ ಕುಶಿ ಎಂಬ ಕಂಪ್ಲೀಟ್​ ಲವ್​ ಸ್ಟೋರಿ, ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ ಮೂಲಕ ಈ ಇಬ್ಬರೂ ಪ್ರೇಕ್ಷಕರ ಎದುರು ಬಂದಿದ್ದಾರೆ. ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡಿತ್ತು. ಅಮೆರಿಕದಲ್ಲಿ ನಡೆದ ಪ್ರೀಮಿಯರ್​ ಶೋಗಳಲ್ಲೇ ಪಾಸಿಟಿವ್​ ರೆಸ್ಪಾನ್​​ ಸ್ವೀಕರಿಸಿತ್ತು. ವಿಪ್ಲವ್​ ಮತ್ತು ಆರಾಧ್ಯ ಪಾತ್ರಗಳಿಗೆ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಜೀವ ತುಂಬಿದ್ದು, ಅದ್ಭುವಾಗಿ ನಟಿಸಿದ್ದಾರೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ತಿಳಿಸಿದ್ದಾರೆ. ಅಲ್ಲದೇ ಕಥಾವಸ್ತುವಿಗೂ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

ಕುಶಿ ಸಿನಿಮಾ ಬಾಕ್ಸ್ ಆಫೀಸ್​ ಕಲೆಕ್ಷನ್​: ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿರುವ ಕುಶಿ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 9.50 ರಿಂದ 10 ಕೋಟಿ ರೂ. ಕಲೆಕ್ಷನ್​ ಮಾಡಿದೆ ಮತ್ತು ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 13.50 ಕೋಟಿ ರೂ. ಕಲೆಕ್ಷನ್​ ಮಾಡಿದೆ ಎಂದು ಸಿನಿ ತಜ್ಞರು ತಿಳಿಸಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ಪ್ರಕಾರ, ಕುಶಿ 15.25 ಕೋಟಿ ರೂ. ಸಂಗ್ರಹ ಮಾಡಿದೆ. ಈ ಮೂಲಕ ಲೈಗರ್​ ಮತ್ತು ಶಾಕುಂತಲಂ ಸಿನಿಮಾಗಳಿಂದ ಹಿನ್ನೆಡೆ ಅನುಭವಿಸಿದ್ದ ಸಮಂತಾ - ವಿಜಯ್​ಗೆ ಗೆಲ್ಲುವ ಸೂಚನೆ ಸಿಕ್ಕಿದೆ. ಸಿನಿಮಾಗಿರುವ ಪಾಸಿವಿಟ್​ ರೆಸ್ಪಾನ್ಸ್​ ಹೀಗೆ ಮುಂದುವರಿದರೆ, ಖಂಡಿತ ಗೆಲ್ಲಿಲಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ. ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್​ ಅಡಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ: Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್​ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್​

ಚಿತ್ರದಲ್ಲಿ ಸಮಂತಾ ಮತ್ತು ವಿಜಯ್​​ ವಿಪ್ಲವ್​ ಹಾಗೂ ಆರಾಧ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ವಿಭಿನ್ನ ಸಂಸ್ಕೃತಿ, ವಿಭಿನ್ನ ಹಿನ್ನೆಲೆಯಿಂದ ಬಂದಿದ್ದು, ಪ್ರೀತಿಯಲ್ಲಿ ಬೀಳುತ್ತಾರೆ. ಆದ್ರೆ ಇವರ ಮದುವೆಗೆ ಪೋಷಕರ ಒಪ್ಪಿಗೆ ಇರುವುದಿಲ್ಲ. ಪೋಷಕರನ್ನು ವಿರೋಧಿಸಿ ದಾಂಪತ್ಯ ಜೀವನ ಶುರು ಮಾಡುತ್ತಾರೆ. ಅದಾದ ಬಳಿಕ ಕಥೆಯಲ್ಲಿ ನಿಜವಾದ ಟ್ವಿಸ್ಟ್ ಎದುರಾಗುತ್ತದೆ. ತಮ್ಮ ಜೀವನದಲ್ಲಿ ಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಅನ್ನೋದೆ ಚಿತ್ರದ ಕಥೆ.

ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ': ನೆಚ್ಚಿನ 'ನಲ್ಲ'ನಿಗೆ ಪತ್ನಿಯಿಂದ ಸ್ಪೆಷಲ್ ಸರ್‌ಪ್ರೈಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.