ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಕಾಂಬೋದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಖುಷಿ ಪ್ರೇಕ್ಷಕರ ಮನ ಮುಟ್ಟಿದೆ. ಶಿವ ನಿರ್ವಾಣ ಮತ್ತು ಆ್ಯಕ್ಷನ್ ಕಟ್ ಹೇಳಿರುವ ಲವ್ ಸ್ಟೋರಿ ಚಿತ್ರ ಶುಕ್ರವಾರ ಅಂದರೆ ಸೆಪ್ಟೆಂಬರ್ 1 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ರಿಲೀಸ್ಗೂ ಮುನ್ನವೇ ಚಿತ್ರದ ಕುರಿತು ಪಾಸಿಟಿವ್ ಟಾಕ್ ಇತ್ತು. ಸದ್ಯ ತೆರೆಕಂಡಿರುವ ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. 15.25 ಕೋಟಿ ರೂ.ನೊಂದಿಗೆ ಭರ್ಜರಿ ಓಪನಿಂಗ್ ಪಡೆದ ಖುಷಿ ಸಿನಿಮಾ ವಿಶ್ವದಾದ್ಯಂತ ಎರಡು ದಿನಗಳಲ್ಲಿ 51 ಕೋಟಿ ರೂ. ಸಂಪಾದನೆ ಮಾಡಿದೆ. ಇಂದು ಭಾನುವಾರ ಹಿನ್ನೆಲೆ ಈ ಸಂಖ್ಯೆ ಏರುವ ನಿರೀಕ್ಷೆಗಳಿವೆ.
ಇಂದು ತೆಲುಗು ಮಾರುಕಟ್ಟೆಯಲ್ಲಿ ಖುಷಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶನಿವಾರದಂದು ಯುಎಸ್ಎಯಲ್ಲಿ $1 ಮಿಲಿಯನ್ ದಾಟಿದೆ. ಸದ್ಯ 50 ಕೋಟಿ ರೂ. ಗಡಿ ದಾಟಿರುವ ಈ ಸಿನಿಮಾ ಸಂಪೂರ್ಣ ಯಶಸ್ವಿ ಎಂದು ಘೋಷಿಸಲು ಇನ್ನೂ ಬಹುಕೋಟಿ ಸಂಗ್ರಹ ಮಾಡಬೇಕಿದೆ.
- " class="align-text-top noRightClick twitterSection" data="">
ಖುಷಿ ಚಿತ್ರದ ಕಥೆ ವಿಪ್ಲವ್ (ನಟ ವಿಜಯ್ ದೇವರಕೊಂಡ) ಮತ್ತು ಆರಾಧ್ಯ (ನಟಿ ಸಮಂತಾ ರುತ್ ಪ್ರಭು) ಸುತ್ತ ಸುತ್ತುತ್ತದೆ. ವಿಭಿನ್ನ ಹಿನ್ನೆಲೆಯಿಂದ ಬಂದ ಈ ಜೋಡಿ ಪ್ರೀತಿಯಲ್ಲಿ ಬೀಳುತ್ತದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗೋ ಈ ಜೋಡಿ ಬಳಿಕ ಹಲವು ಸವಾಲುಗಳನ್ನು ಎದುರಿಸುತ್ತದೆ. ಅಭದ್ರತೆ, ಅಸೂಯೆ ಸೇರಿದಂತೆ ನಾನಾ ಅಂಶಗಳ ಹೊರತಾಗಿ ಈ ಜೋಡಿ ಹೇಗೆ ಜೀವನ ಸಾಗಿಸುತ್ತಾರೆ ಅನ್ನೋದೇ ಸಿನಿಮಾದ ಪ್ರಮುಖ ಅಂಶ. ಕಂಪ್ಲೀಟ್ ಎಂಟರ್ಟೈನ್ಮೆಂಟ್ ಸಿನಿಮಾಗೆ ಪ್ರೇಕ್ಷಕರು ಮಣೆ ಹಾಕಿದ್ದಾರೆ. ಸ್ಟೋರಿಲೈನ್, ಕಥೆ ರವಾನಿಸಿದ ರೀತಿ, ಸಂಗೀತ ಮತ್ತು ನಟನೆಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Box office battle: ಪಠಾಣ್ ದಾಖಲೆ ಮುರಿಯುವತ್ತ ಗದರ್ 2: ಓಎಂಜಿ 2 ಸಂಪಾದನೆ ಹೇಗಿದೆ?
ಕೊನೆಯ ಸಿನಿಮಾಗಳಲ್ಲಿ ಹಿನ್ನಡೆ ಅನುಭವಿಸಿದ್ದ ಟಾಲಿವುಡ್ ಸ್ಟಾರ್ ನಟರಾದ ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅವರಿಗೆ ಗೆಲುವಿನ ಅವಶ್ಯಕತೆ ಇತ್ತು. ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ನಲ್ಲಿ ವಿಜಯ್ ದೇವರಕೊಂಡ ಮತ್ತು ಶಾಕುಂತಲಂ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಸೋಲಿನ ರುಚಿ ಕಂಡಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮಹಾನಟಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ ಖುಷಿ ಚಿತ್ರದಲ್ಲಿ ಎರಡನೇ ಬಾರಿ ತೆರೆಹಂಚಿಕೊಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಖುಷಿ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಎರಡು ದಿನಗಳಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರ ಎಷ್ಟು ಗಳಿಸಲಿದೆ ಎಂಬುದರ ಮೇಲೆ ಅಭಿಮಾನಿಗಳ ಗಮನ ನೆಟ್ಟಿದೆ.
ಇದನ್ನೂ ಓದಿ: ಶಾರುಖ್ 'ಜವಾನ್' ಭರ್ಜರಿ ಓಪನಿಂಗ್ ನಿರೀಕ್ಷೆ; ಫಸ್ಟ್ ಡೇ ಶೋಗೆ ಮಾರಾಟವಾದ ಟಿಕೆಟ್ಗಳೆಷ್ಟು?!