ETV Bharat / entertainment

'ಕುಚ್ ಕುಚ್ ಹೋತಾ ಹೈ' ಚಿತ್ರಕ್ಕೆ 25 ವರ್ಷಗಳ ಸಂಭ್ರಮ: ರಾಣಿ ಮುಖರ್ಜಿಯ ಸೆರಗು ಹಿಡಿದ ಶಾರುಖ್ - ರಾಣಿ ಮುಖರ್ಜಿಯ ಸೆರಗು ಹಿಡಿದ ಶಾರುಖ್

ಕರಣ್ ಜೋಹರ್ ಅವರ ಚೊಚ್ಚಲ ನಿರ್ದೇಶನದ ಕುಚ್ ಕುಚ್ ಹೋತಾ ಹೈ ಸಿನಿಮಾ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದ್ದು, ಭಾನುವಾರ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

Kuch Kuch Hota Hai
ಕುಚ್ ಕುಚ್ ಹೋತಾ ಹೈ
author img

By ETV Bharat Karnataka Team

Published : Oct 16, 2023, 12:35 PM IST

ಮುಂಬೈ : ನಟ ಶಾರುಖ್ ಖಾನ್, ನಟಿ ರಾಣಿ ಮುಖರ್ಜಿ ಮತ್ತು ಕಾಜೋಲ್ ಅಭಿನಯದ ರೊಮ್ಯಾಂಟಿಕ್ ಚಿತ್ರ 'ಕುಚ್ ಕುಚ್ ಹೋತಾ ಹೈ' 25 ವರ್ಷಗಳನ್ನು ಪೂರೈಸಿದೆ. ಈ ಸಿನಿಮಾವು 16 ಅಕ್ಟೋಬರ್ 1998 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಬರೋಬ್ಬರಿ 25 ವರ್ಷಗಳನ್ನು ಪೂರೈಸಿದೆ. ಈಗಲೂ ಸಹ ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಹೆಚ್ಚಿನ ಪ್ರೀತಿ, ಮೆಚ್ಚುಗೆ ಪಡೆಯುತ್ತಿದೆ.

ಹೌದು, ಚಿತ್ರವು 25 ವರ್ಷಗಳನ್ನು ಪೂರ್ಣಗೊಳಿಸಿದ ಸವಿ ನೆನಪಿಗಾಗಿ ಭಾನುವಾರ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ ಮತ್ತು ಕರಣ್ ಜೋಹರ್ ಭಾಗವಹಿಸಿದ್ದರು. ಈ ಸಮಯದಲ್ಲಿ ಮಾಧ್ಯಮಗಳು ಕಿಂಗ್ ಖಾನ್ ಅವರ ಸೌಮ್ಯ ನೋಟವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದವು, ಅದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ? : ಬಾಲಿವುಡ್​ ನಟಿ ರಾಣಿ ಮುಖರ್ಜಿ ಸರಳವಾದ ಸೀರೆ ತೊಟ್ಟು ಸೆರಗನ್ನು ಉದ್ದಕ್ಕೆ ಬಿಟ್ಟುಕೊಂಡಿದ್ದರು. ಹಿಂದುಗಡೆ ಅವರ ಸೆರಗು ನೆಲವನ್ನು ಗುಡಿಸುತ್ತಿತ್ತು. ವೇದಿಕೆ ಮೇಲೆ ತೆರಳುವಾಗ ರಾಣಿಯವರ ಹಿಂದೆ ನಟ ಶಾರುಖ್​ ಖಾನ್​ ಬರುತ್ತಿದ್ದರು. ಅವರು ಇದನ್ನು ಗಮನಿಸಿ ರಾಣಿ ಮುಖರ್ಜಿಯವರ ಸೀರೆಯ ಸೆರಗನ್ನು ಹಿಡಿದುಕೊಂಡು ವೇದಿಕೆ ಮೇಲೆ ಏರಿದರು. ಬಳಿಕ ತುಂಬಾ ನಾಜೂಕಾಗಿ ಸೀರೆಯನ್ನು ನೆಲಕ್ಕೆ ಬಿಟ್ಟರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾರುಖ್​ ಖಾನ್​ ಸೀರೆ ಸೆರಗು ಎತ್ತಿಕೊಂಡಿರುವುದು ನಟಿಯ ಗಮನಕ್ಕೆ ಬರಲೇ ಇಲ್ಲ. ಆದರೆ, ಅಲ್ಲಿದ್ದವರು ಮಾತ್ರ ಅಚ್ಚರಿಯಿಂದ ನಟನನ್ನು ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ : ಶಾರುಖ್​ ಖಾನ್​ಗೆ ಜೀವ ಬೆದರಿಕೆ : Y+​ ಭದ್ರತೆ ಒದಗಿಸಿದ ಮಹಾರಾಷ್ಟ್ರ ಸರ್ಕಾರ

ಇನ್ನೊಂದೆಡೆ, ‘ಕುಚ್ ಕುಚ್ ಹೋತಾ ಹೈ’ ವಿಶೇಷ ಪ್ರದರ್ಶನದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಶೇಷ ಸಂದರ್ಭದಲ್ಲಿ ಆಗಮಿಸಿದ ಕರಣ್ ಜೋಹರ್, ರಾಣಿ ಮುಖರ್ಜಿ ಮತ್ತು ಕಿಂಗ್ ಖಾನ್ ಮತ್ತೊಮ್ಮೆ ತಮ್ಮ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳತ್ತ ಕೈಬೀಸಿದ ಶಾರುಖ್​.. ನಮ್ಮ ಪಂದ್ಯಗಳು ಹೀಗೆ ಗೆಲ್ತಾ ಇರ್ಲಿ ಎಂದ ಜೂಹಿ

ರಾಣಿ ಮುಖರ್ಜಿ ಬಿಳಿ ಬಣ್ಣದ ಸೀರೆ, ಹೊಳೆಯುವ ಕಪ್ಪು ಕುಪ್ಪಸ ಧರಿಸುವ ಮೂಲಕ ಸುಂದರವಾಗಿ ಕಾಣುತ್ತಿದ್ದರು. ರಾಹುಲ್ ಪಾತ್ರದಲ್ಲಿ ನಟಿಸಿರುವ ಕಿಂಗ್ ಖಾನ್ ಅವರು ಕಪ್ಪು ಜಾಕೆಟ್ ಮೇಲೆ ಮ್ಯಾಚಿಂಗ್ ಟಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಕರಣ್ ಜೋಹರ್ ಕೂಡ 'ಕುಚ್ ಕುಚ್ ಹೋತಾ ಹೈ' ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದರು.

ಇದನ್ನೂ ಓದಿ : ದೇಶಾದ್ಯಂತ ಜವಾನ್​ ಸದ್ದು : ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಭ್ರಮಾಚರಣೆ - ಹುಚ್ಚೆದ್ದು ಕುಣಿದ ಫ್ಯಾನ್ಸ್ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.