ETV Bharat / entertainment

ಶೀಘ್ರದಲ್ಲೇ ಸೆಟ್ಟೇರಲಿದೆ 'ಕ್ರಿಶ್ 4': ಹೃತಿಕ್​ ರೋಷನ್​​ ಸಿನಿಮಾ ಡೀಟೆಲ್ಸ್ ಇಲ್ಲಿದೆ.. - ಹೃತಿಕ್ ರೋಷನ್​​

Krrish 4: ಹೃತಿಕ್ ರೋಷನ್ ಮುಖ್ಯಭೂಮಿಕೆಯ ಹೊಸ ಸಿನಿಮಾ 'ಕ್ರಿಶ್ 4' ಶೀಘ್ರದಲ್ಲೇ ಸೆಟ್ಟೇರಲಿದೆ.

Krrish 4
ಕ್ರಿಶ್ 4
author img

By ETV Bharat Karnataka Team

Published : Oct 31, 2023, 5:02 PM IST

'ಕ್ರಿಶ್​'. ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. ಭಾರತೀಯ ಚಿತ್ರರಂಗದ ಸೂಪರ್​ ಹಿಟ್​ ಸಿನಿಮಾವಿದು. ಎವರ್​ಗ್ರೀನ್​​ ಸೂಪರ್ ಎಂಟರ್​​ಟೈನ್ಮೆಂಟ್ ಚಿತ್ರವೂ ಹೌದು. ಹೃತಿಕ್​ ರೋಷನ್​​ ಅಭಿನಯದ 'ಕ್ರಿಶ್​' ಸರಣಿ ಸಿನಿಮಾಗಳು ಈಗಲೂ ಸಿನಿಪ್ರಿಯರ ಮೆಚ್ಚಿನ ಚಿತ್ರವಾಗುಳಿದಿದೆ. ಮತ್ತೆ ಮತ್ತೆ ನೋಡಲು ಆದ್ಯತೆ ಕೊಡುವಂತಹ ಸಿನಿಮಾ ಎಂಬ ಮೆಚ್ಚುಗೆ ಗಳಿಸಿದೆ. ಈಗಾಗಲೇ ಮೂರು ಕಂತುಗಳು ಹೊರ ಬಂದಿದ್ದು, ನಾಲ್ಕನೇ ಭಾಗಕ್ಕೆ ಸಿದ್ಧತೆ ನಡೆಯುತ್ತಿದೆ.

ಹೃತಿಕ್ ರೋಷನ್ ಅವರು ತಮ್ಮ ಮುಂದಿನ ದಿ ಮೋಸ್ಟ್ ಇಂಪಾರ್ಟೆಂಟ್ ಪ್ರಾಜೆಕ್ಟ್ ಕ್ರಿಶ್ 4ಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತಂದೆ ರಾಕೇಶ್ ರೋಷನ್ ಬರೆದಿರುವ ಸ್ಕ್ರಿಪ್ಟ್ ಅನ್ನು ಹೃತಿಕ್ ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ. ಸಿನಿಪ್ರಿಯರನ್ನು ಆಕರ್ಷಿಸುವಂತಹ ಅದ್ಭುತ ಕಥೆಯನ್ನು ಈ ಪ್ರಾಜೆಕ್ಟ್​ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.

ಹೃತಿಕ್ ರೋಷನ್​​ ಸ್ಕ್ರಿಪ್ಟ್ ಪರಿಶೀಲಿಸಿದ್ದಾರೆ. ಅಭಿಮಾನಿಗಳ ನಿರೀಕ್ಷೆ ತಲುಪುವ ನಿಟ್ಟಿನಲ್ಲಿ ಕಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹೊಸತನ್ನು ಪರಿಚಯಿಸಿದ್ದಾರೆ. 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕ್ರಿಶ್ 4 ಚಿತ್ರೀಕರಣ ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಹಲವು ಬಗೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ, ಫಿಟ್ನೆಸ್​ಗೆ ಮಹತ್ವ ಕೊಟ್ಟಿದ್ದಾರೆ. ನಟನ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳನ್ನು ಗಮನಿಸಿದರೆ, ದೇಹ ದಂಡಿಸವ ಮಾಹಿತಿ ಸಿಗುತ್ತದೆ.

ಶೂಟಿಂಗ್ ಲೊಕೇಶನ್​​ ವಿಚಾರ ಗಮನಿಸುವುದಾದರೆ, ಚಿತ್ರತಂಡ ಪ್ರಸ್ತುತ ಅಂತರರಾಷ್ಟ್ರೀಯ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡಿದೆ. ಕೆಲವು ನಿರ್ದಿಷ್ಟ ಸೀಕ್ವೆನ್ಸ್​​​​ಗಾಗಿ ಸಿಂಗಾಪುರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಜೆಟ್​​ ಮೇಲೆ ಈ ಲೊಕೇಶನ್​ಗಳು ಫೈನಲ್ ಆಗಲಿವೆ.

ಇದನ್ನೂ ಓದಿ: ಶಾರುಖ್​ ಬರ್ತ್​ಡೇ: ಅದ್ಧೂರಿ ಸಂತೋಷಕೂಟಕ್ಕೆ ಸಿದ್ಧತೆ; ಅಭಿಮಾನಿಗಳಿಂದ ವಿವಿಧ ಸಮಾಜಸೇವೆ

'ಕೋಯಿ ಮಿಲ್ ಗಯಾ' ಚಿತ್ರದಿಂದ ಪ್ರಾರಂಭವಾದ ಹೃತಿಕ್ ಸರಣಿ ಸಿನಿಮಾಗಳ ಪಯಣ 20 ವರ್ಷ ಪೂರೈಸಿದೆ. ಮೊದಲ ಭಾಗ 2003ರ ಆಗಸ್ಟ್ 8 ರಂದು ತೆರೆಗಪ್ಪಳಿಸಿತ್ತು. ಮೊದಲ ಭಾಗ, ಭೂಮಿಯ ಹೊರಗಿನ ಜೀವಿಯನ್ನು ಭೂಮಿಯ ಮೇಲೆ ಬಿಟ್ಟಾಗ ಅದನ್ನು ಕಂಡ ವಿಶೇಷಚೇತನ ವ್ಯಕ್ತಿಯ ಜೀವನ ಬದಲಾಗುವ ಹೃದಯಸ್ಪರ್ಶಿ ಕಥೆ ಒಳಗೊಂಡಿತ್ತು.

ಇದನ್ನೂ ಓದಿ: ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ: ಕಾಕ್ಟೈಲ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ರಾಮ್​ಚರಣ್ ಸೇರಿ ತಾರಾ ಕುಟುಂಬ ಭಾಗಿ​​

ಕ್ರಿಶ್​ ನಾಲ್ಕನೇ ಭಾಗಕ್ಕೆ ಗ್ಲೋಬಲ್ ಐಕಾನ್​​ ಪ್ರಿಯಾಂಕಾ ಚೋಪ್ರಾ ಮರಳುವ ಸಾಧ್ಯತೆ ಇದೆ. ಮೊದಲ ಭಾಗದಲ್ಲಿ ನಟಿಸಿದ್ದ ಪ್ರೀತಿ ಜಿಂಟಾ ಹಿಂತಿರುಗುವ ಮಾಹಿತಿ ಇಲ್ಲ. ಆದ್ರೆ ನಿರ್ಮಾಪಕರು ಪ್ರಿಯಾಂಕಾ ಅವರ ಪಾತ್ರವನ್ನು ಪುನರಾವರ್ತಿಸಲು ಆಸಕ್ತಿ ತೋರಿದ್ದಾರೆ. ಬಹುನಿರೀಕ್ಷಿತ ಪ್ರಾಜೆಕ್ಟ್​ನಲ್ಲಿ ನಟಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಕ್ರಿಶ್ ಮುಂದುವರಿದ ಭಾಗದಲ್ಲಿ ಪ್ರಿಯಾಂಕಾ ಮತ್ತು ಹೃತಿಕ್‌ ಅವರನ್ನು ಮತ್ತೆ ಒಟ್ಟಿಗೆ ನೋಡುವುದು ಅಭಿಮಾನಿಗಳಿಗೆ ಆಸಕ್ತಿದಾಯಕ ವಿಷಯ. ಆದಾಗ್ಯೂ, ದೇಸಿ ಗರ್ಲ್ ಹಿಂದಿ ಚಿತ್ರರಂಗಕ್ಕೆ ಮರಳುವುದು ಸುಲಭದ ಮಾತಲ್ಲ. ಏಕೆಂದರೆ ನಟಿಯ ವೃತ್ತಿಜೀವನ ಪ್ರವರ್ಧಮಾನಕ್ಕೆ ತಲುಪುತ್ತಿದ್ದು, ಅಲ್ಲಿ ಅವರು ಹೆಚ್ಚಿನ ಸಮಯ, ಗಮನ ಇಡಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.