ETV Bharat / entertainment

ಕೃಷ್ಣ ಭಟ್ - ವೇದಾಂತ್ ಸರ್ದಾ ಮದುವೆ ಆರತಕ್ಷತೆಯಲ್ಲಿ ಬಿ - ಟೌನ್ ಸೆಲೆಬ್ರಿಟಿಗಳು! - ಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರ ಪುತ್ರಿ ಕೃಷ್ಣ ಭಟ್

ಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರ ಪುತ್ರಿ ಕೃಷ್ಣ ಭಟ್ ಭಾನುವಾರ ಮುಂಬೈನಲ್ಲಿ ತನ್ನ ಗೆಳೆಯ ವೇದಾಂತ್ ಸರ್ದಾ ಅವರೊಂದಿಗೆ ವಿವಾಹವಾದರು. ಸಂಜೆ ನಡೆದ ಆರತಕ್ಷತೆಯಲ್ಲಿ ಬಿ-ಟೌನ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

Krishna Bhatt Vedant Sarda Wedding Reception
ಕೃಷ್ಣ ಭಟ್-ವೇದಾಂತ್ ಸರ್ದಾ ಮದುವೆ ಆರತಕ್ಷತೆಯಲ್ಲಿ ಬಿ-ಟೌನ್ ಸೆಲೆಬ್ರಿಟಿಗಳು
author img

By

Published : Jun 12, 2023, 7:12 AM IST

ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರ ಪುತ್ರಿ ಕೃಷ್ಣ ಭಟ್ ಭಾನುವಾರ ಬಹುಕಾಲದ ಗೆಳೆಯ ವೇದಾಂತ್ ಸರ್ದಾ ಅವರನ್ನು ವಿವಾಹವಾಗಿದ್ದಾರೆ. ಮುಂಬೈನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಒಂದು ವರ್ಷದ ಹಿಂದೆ ಡೇಟಿಂಗ್ ಆರಂಭಿಸಿದ ದಿನವೇ ಇವರಿಬ್ಬರೂ ವಿವಾಹವಾಗಿದ್ದು ವಿಶೇಷ.

ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಬಾಬಿ ಡಿಯೋಲ್, ಸನ್ನಿ ಲಿಯೋನ್ , ಪತಿ ಡೇನಿಯಲ್ ವೆಬರ್ ಮತ್ತು ಅವರ ಮಕ್ಕಳು, ಸಂದೀಪ ಧರ್, ಬಾಲಿಕಾ ವಧು' ಖ್ಯಾತಿಯ ಅವಿಕಾ ಗೋರ್, ಮಹೇಶ್ ಭಟ್, ಪೂಜಾ ಭಟ್, ಅಫ್ತಾಬ್ ಶಿವದಾಸನಿ, ಸಂದೀಪ ಧರ್ ಸೇರಿದಂತೆ ಹಲವು ಬಿ - ಟೌನ್ ಸೆಲೆಬ್ರಿಟಿಗಳು ಭಾಗವಹಿಸಿ ನವವಿವಾಹಿತರನ್ನು ಆಶೀರ್ವದಿಸಿದರು.

ಸಮಾರಂಭಕ್ಕೆ ಆಗಮಿಸಿದ ಗಣ್ಯರಲ್ಲಿ ನಟ ಬಾಬಿ ಡಿಯೋಲ್ ಕೂಡ ಒಬ್ಬರು. ಬಾಬಿ ವಿಕ್ರಮ್ ಭಟ್ ಮತ್ತು ಅವರ ಕುಟುಂಬದೊಂದಿಗೆ ಪೋಸ್ ನೀಡುತ್ತಿರುವುದು ಕಂಡು ಬಂದಿದೆ. ಸನ್ನಿ ಲಿಯಾನ್ ಲೆಹೆಂಗಾ ಧರಿಸಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆ ಸಮಾರಂಭದಲ್ಲಿ ವಧು ಕೃಷ್ಣ ಗೋಲ್ಡನ್ ವರ್ಕ್‌ನೊಂದಿಗೆ ಮರೂನ್ ಸಾಂಪ್ರದಾಯಿಕ ಲೆಹೆಂಗಾ ಧರಿಸಿದ್ದರೆ, ವರ ವೇದಾಂತ್ ಬಿಳಿ ಶೆರ್ವಾನಿ ಮತ್ತು ಶೂ ಧರಿಸಿ ಗಮನ ಸೆಳೆದರು.

ಮದುವೆಯ ಆರತಕ್ಷತೆಗೂ ಮುನ್ನ ಭಟ್ ವಂಶಸ್ಥರು ಕೃಷ್ಣ ಮತ್ತು ವೇದಾಂತ್ ಅವರಿಗಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು. ವಿಕ್ರಮ್ ಭಟ್ ಅವರು ತಮ್ಮ ಮಗಳ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ವಿಡಿಯೋದಲ್ಲಿ, ಕೃಷ್ಣ ತನ್ನ ತಂದೆಯೊಂದಿಗೆ ನೃತ್ಯ ಮಾಡುವಾಗ ಸುಂದರವಾದ ನೀಲಿಬಣ್ಣದ ಲೆಹೆಂಗಾ ಧರಿಸಿರುವುದನ್ನು ಕಾಣಬಹುದು. ಕೃಷ್ಣ ಅವರು "ಹಾಂಟೆಡ್", "ಕ್ರಿಯೇಚರ್" ಮತ್ತು "ಮಿಸ್ಟರ್ ಎಕ್ಸ್" ನಂತಹ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಕೃಷ್ಣ ಮತ್ತು ವೇದಾಂತ್ ಸರ್ದಾ ಬಗ್ಗೆ ಹೇಳುವುದಾದರೆ ಇವರು ಡಿಸೆಂಬರ್ 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಚಾರವನ್ನು ಅವರ ತಂದೆ ವಿಕ್ರಮ್ ಭಟ್​ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಕೃಷ್ಣ ಚಲನಚಿತ್ರ ನಿರ್ಮಾಪಕಿ. ಅವರು '1920 - ಹಾರರ್ಸ್ ಆಫ್ ದಿ ಹಾರ್ಟ್' ಎಂಬ ಶೀರ್ಷಿಕೆಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ ಜೂನ್ 23 ರಂದು ತೆರೆಕಾಣಲು ಸಜ್ಜಾಗಿದೆ.

ವೇದಾಂತ್ ಸರ್ದಾ ಯಾರು?: ವಿಕ್ರಮ್ ಭಟ್ ಅವರ ಅಳಿಯ ಮತ್ತು ಕೃಷ್ಣ ಭಟ್ ಅವರ ಪತಿ ವೇದಾಂತ್ ಸರ್ದಾ ಅವರು ಉದ್ಯಮಿಯಾಗಿದ್ದು, ಅವರು 6 ಲಕ್ಷ ರೂಪಾಯಿ ಹೂಡಿಕೆಯಿಂದ 20 ಕೋಟಿ ರೂಪಾಯಿಗಳ ಟ್ರಾವೆಲ್ ಕಂಪನಿಯನ್ನು ನಿರ್ಮಿಸಿದ್ದಾರೆ. ಅವರ ಹಿರಿಯ ಸಹೋದರ ವರುಣ್ ಭಯ್ಯಾ ಆ ಕಂಪನಿಯ ಅಡಿ ಅನೇಕ ವರ್ಟಿಕಲ್‌ಗಳನ್ನು ತೆರೆದಿದ್ದಾರೆ.

ವೇದಾಂತ್ ಅವರು BITS ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2010 ರಲ್ಲಿ ನಾಲ್ಕು ಕಾಲೇಜು ಸ್ನೇಹಿತರೊಂದಿಗೆ ಸೇರಿ ಕಂಪನಿ ಪ್ರಾರಂಭಿಸಿದರು. ಇದು TILT ಎಂಬ ಹೆಸರಿನ ವಿದ್ಯಾರ್ಥಿ ಟ್ಯಾಬ್ಲಾಯ್ಡ್ ಆಗಿತ್ತು. ವರದಿಗಳ ಪ್ರಕಾರ, ವೇದಾಂತ್ ಸರ್ದಾ ಅವರು ತಮ್ಮ ಕಂಪನಿ WTFares ಅನ್ನು 6 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಸ್ಥಾಪಿಸಿದರು ಮತ್ತು ಈಗ ಅದು 20 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Abhishek Aviva: 'ಅಭಿವಾ' ಸಂಗೀತಾ ಕಾರ್ಯಕ್ರಮದಲ್ಲಿ ಯಶ್​- ದರ್ಶನ್​ ದರ್ಬಾರ್​​: ಸಖತ್​ ಸ್ಟೆಪ್​ ಹಾಕಿದ ಸುಮಲತಾ ಅಂಬರೀಶ್​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.