ETV Bharat / entertainment

ಜನ್ಮದಿನದ ಸಂಭ್ರಮದಲ್ಲಿ ಕೋಮಲ್: ವಜ್ರಮುನಿ ಗೆಟಪ್​ನಲ್ಲಿ ಬಂದ ನಟ - ಯಲಾಕುನ್ನಿ ಫಸ್ಟ್ ಲುಕ್ ಅನಾವರಣ - komal latest news

ಕೋಮಲ್ ಕುಮಾರ್ ಅಭಿನಯದ ಯಲಾಕುನ್ನಿ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ.

Yalakunni First Look Unveiled
ವಜ್ರಮುನಿ ಗೆಟಪ್​ನಲ್ಲಿ ಕೋಮಲ್
author img

By

Published : Jul 4, 2023, 1:47 PM IST

ಹಾಸ್ಯ ನಟನಾಗಿ, ಬಳಿಕ ನಾಯಕ ಪಟ್ಟಕ್ಕೇರಿ, ಕನ್ನಡ ಚಲನಚಿತ್ರಗಳನ್ನು ನಿರ್ಮಾಣ ಮಾಡುವುದಲ್ಲದೇ ವಿತರಕ, ಪ್ರದರ್ಶಕ ಆಗಿ ಗುರುತಿಸಿಕೊಂಡಿರುವ ನಟ ಕೋಮಲ್. ಕನ್ನಡ ಸಿನಿಮಾ ರಂಗದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಕಾಮಿಡಿ ಮಾಡುತ್ತ ಹೀರೋ ಆದ ನಟರ ಪೈಕಿ ಕೋಮಲ್ ಕುಮಾರ್ ಕೂಡ ಓರ್ವರು.

ಕೋಮಲ್ ಕುಮಾರ್ ಜನ್ಮದಿನ: ಸಾಹಸಸಿಂಹ ಡಾ. ವಿಷ್ಣುವರ್ಧನ್, ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್, ಕನ್ನಡ ಚಿತ್ರರಂಗ ನಗಮೊಗದ ರಾಜಕುಮಾರ ದಿ. ಪುನೀತ್ ರಾಜ್‍ಕುಮಾರ್, ನವರಸನಾಯಕ ಜಗ್ಗೇಶ್, ಪ್ರತಿಭಾನ್ವಿತ ನಟ ರಮೇಶ್ ಅರವಿಂದ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ಕಾಮಿಡಿ ಮಾಡಿ ಬಳಿಕ ಹೀರೋ ಆದ ಕೋಮಲ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರೋ ಕೋಮಲ್ ಅವರಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಕೋಮಲ್ ಕುಮಾರ್ ಅವರ ಮುಂಬರುವ ಚಿತ್ರದ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ.

Komal birthday
ಜನ್ಮದಿನದ ಸಂಭ್ರಮದಲ್ಲಿ ಕೋಮಲ್

ಯಲಾಕುನ್ನಿ ಫಸ್ಟ್ ಲುಕ್ ಅನಾವರಣ: ಯಲಾಕುನ್ನಿ ಕೋಮಲ್​ ಕುಮಾರ್​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ‌ಬಿಡುಗಡೆ ಮಾಡುವ ಮೂಲಕ ಕೋಮಲ್ ಅವರಿಗೆ ಚಿತ್ರತಂಡ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಈ ಫಸ್ಟ್ ಲುಕ್​ನಲ್ಲಿ ಕೋಮಲ್ ಅವರು ಹಿರಿಯ ನಟ ವಜ್ರಮುನಿ ಅವರ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೋಮಲ್​ ಅವರ ಫಸ್ಟ್ ಲುಕ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಗಣ್ಯರು ಸಹ ಈ ಫಸ್ಟ್ ಲುಕ್​​ನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಜ್ರಮುನಿ ಗೆಟಪ್​ನಲ್ಲಿ ಕೋಮಲ್​: "ಯಲಾಕುನ್ನಿ" ಚಿತ್ರದಲ್ಲಿ ಕೋಮಲ್ ಅವರು ವಜ್ರಮುನಿ ಅವರ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಮೇರಾ ನಾಮ್ ವಜ್ರಮುನಿ" ಎಂಬ ಅಡಿಬರಹ ಹಾಗೂ "ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ" ಎಂಬ ಬರಹದೊಂದಿಗೆ "ಯಲಾಕುನ್ನಿ" ಚಿತ್ರ ಮೂಡಿ ಬರಲಿದೆ. ನವರಸನಾಯಕ ಜಗ್ಗೇಶ್ ಅವರ ಮಗ ಯತಿರಾಜ್ ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ತೋತಾಪುರಿ 2 ಫಸ್ಟ್ ಲುಕ್​ ಅನಾವರಣ: ನವರಸನಾಯಕ ಜಗ್ಗೇಶ್ ಸಿನಿಮಾದಲ್ಲಿ ಡಾಲಿ ಧನಂಜಯ್ ಮಿಂಚು

ಎನ್ ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದು, ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ಈ‌ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಕೋಮಲ್ ಕುಮಾರ್ ಅವರ ವಜ್ರಮುನಿ ಗೆಟಪ್ ಸಿನಿಮಾ‌ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್ ಆಗುತ್ತಿದೆ.

ಇದನ್ನೂ ಓದಿ: ನಟ ಪ್ರಜ್ವಲ್ ದೇವರಾಜ್ ಜನ್ಮದಿನ: ಗಣ ಟೀಸರ್​ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.