ಮುಂಬೈ: 'ಕಾಫಿ ವಿತ್ ಕರಣ್' ಪ್ರಸಾರವಾಗುವುದಿಲ್ಲ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಟಾಕ್ ಶೋ ಹೊಸ ಸೀಸನ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಬದಲಾಗಿ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ ಎಂದು " ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾಫಿ ವಿತ್ ಕರಣ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಉತ್ತಮ ಕಥೆಗೂ ಉತ್ತಮ ತಿರುವು ಬೇಕಾಗಿರುವುದರಿಂದ, ಕಾಫಿ ವಿತ್ ಕರಣ್‌ನ ಸೀಸನ್ 7 ಅನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಮಾಡಲಾಗುತ್ತದೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಭಾರತದ ದೊಡ್ಡ ಚಲನಚಿತ್ರ ತಾರೆಯರು ಕಾಫಿ ಜೊತೆ ಮನದ ಮಾತು ಬಿಚ್ಚಿಡಲಿದ್ದಾರೆ. ಅಲ್ಲಿ ಆಟಗಳಿರುತ್ತವೆ, ರೂಮರ್ಸ್ಗಳಿಗೆ ಬ್ರೇಕ್ ಹಾಕಲಾಗುತ್ತದೆ. ಪ್ರೀತಿ, ಜೀವನದಲ್ಲಿ ಕಳೆದುಕೊಂಡಿರುವುದರ ಬಗ್ಗೆ, ಕಳೆದ ಕೆಲವು ವರ್ಷಗಳಿಂದ ನಾವು ಅನುಭವಿಸಿದ ಹಲವಾರು ವಿಷಯಗಳ ಬಗ್ಗೆ ಸುದೀರ್ಘ ಮಾತುಕತೆ ಇರುತ್ತದೆ. ಕಾಫಿ ವಿತ್ ಕರಣ್, ಶೀಘ್ರದಲ್ಲೇ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಮಾತ್ರವೇ ಪ್ರಸಾರವಾಗಲಿದೆ ಎಂದಿದ್ದಾರೆ.
ಬುಧವಾರ, ಕರಣ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆರು ಸೀಸನ್‌ಗಳ ಓಟದ ನಂತರ, 'ಕಾಫಿ ವಿತ್ ಕರಣ್' ಮತ್ತೆ ಪ್ರಸಾರವಾಗುವುದಿಲ್ಲ ಮತ್ತು ರನ್-ಟೈಮ್ ಕೊನೆಗೊಂಡಿದೆ ಎಂದು ಹಂಚಿಕೊಂಡಿದ್ದರು. ಆದರೆ, ಅದು ಪ್ರ್ಯಾಂಕ್ ಎಂಬುದು ಬಯಲಾಗಿದೆ. 'ಕಾಫಿ ವಿತ್ ಕರಣ್' ನ ಏಳನೇ ಆವೃತ್ತಿಯ ಚಿತ್ರೀಕರಣವು ಮೇ 7, 2022 ರಂದು ಪ್ರಾರಂಭವಾಗಲಿದೆ.
ಇದನ್ನೂ ಓದಿ: 'ದಂಗಲ್' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ!