ETV Bharat / entertainment

ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ: ಪಂದ್ಯ ಮುಗಿದ ಬಳಿಕ ಟ್ರೋಲಿಗರ ಆಟ

ಟಿ20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಫೈನಲ್​ ಕನಸು ಭಗ್ನವಾಗಿದ್ದು ಟ್ರೋಲಿಗರು ಕೆಎಲ್ ರಾಹುಲ್ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.

author img

By

Published : Nov 11, 2022, 1:14 PM IST

Updated : Nov 11, 2022, 1:53 PM IST

KL Rahul Athiya shetty troll after India team lost match
ಕೆಎಲ್ ರಾಹುಲ್ ಟ್ರೋಲ್

ಟಿ20 ವಿಶ್ವಕಪ್​​ನ ಎರಡನೇ ಸೆಮಿ ಫೈನಲ್​ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಗೆಲುವು ಕಂಡಿದ್ದು, ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಈ ಮೂಲಕ ಟಿ20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಫೈನಲ್​ ಕನಸು ಭಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ಆನ್ಲೈನ್ ಮಂದಿ ಕೆಲ ಕ್ರಿಕೆಟಿಗರ ವಿರುದ್ಧ ಟ್ರೋಲ್​​ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಂದ್ಯದಲ್ಲಿ ಕೆಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಭಾರತ ತಂಡಕ್ಕೆ ಉತ್ತಮ ಆರಂಭವೇ ಸಿಕ್ಕಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಕೆಎಲ್ ಕಳಪೆ ಬ್ಯಾಟಿಂಗ್ ಕೂಡ ಒಂದು ಕಾರಣ ಎಂದು ಕಿಡಿ ಕಾರುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್ ಗೆಳತಿ ಅಥಿಯಾ ಶೆಟ್ಟಿಯನ್ನು ಸಹ ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.

ಬಾಲಿವುಡ್ ಚಿತ್ರರಂಗದ ಹಿರಿಯ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ ಅಥಿಯಾ ಜೊತೆ ರಾಹುಲ್ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೇ ಬಳಸಿಕೊಂಡ ಟ್ರೋಲಿಗರು, ರಾಹುಲ್ ಕಳಪೆ ಪ್ರದರ್ಶನಕ್ಕೆ ಅಥಿಯಾ ಶೆಟ್ಟಿಯನ್ನು ಎಳೆದು ತಂದಿದ್ದಾರೆ.

KL Rahul Athiya shetty troll after India team lost match
ಟೀಮ್ ಇಂಡಿಯಾದೊಂದಿಗೆ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ

ನಿನ್ನೆ ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಟಾಸ್​ ಗೆದ್ದು ಮೊದಲು ಬೌಲಿಂಗ್​​ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ ಆರು ವಿಕೆಟ್​ ನಷ್ಟಕ್ಕೆ 168 ರನ್​ಗಳನ್ನು ಗಳಿಸಿತ್ತು. ಈ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಆಟಗಾರರು ವಿಕೆಟ್​ ನಷ್ಟವಿಲ್ಲದೇ ಕೇವಲ 16 ಓವರ್​ಗಳಲ್ಲಿ 170 ರನ್ ಸಿಡಿಸಿ ಜಯ ದಾಖಲಿಸಿದರು.​ ಟೀಂ ಇಂಡಿಯಾ ಪರ ಆರಂಭಿಕರಾಗಿ ವಿರಾಟ್​ ಕೊಹ್ಲಿ ಜೊತೆಗೆ ಕಣಕ್ಕಿಳಿದ ಕೆಎಲ್​ ರಾಹುಲ್​ ಶೀಘ್ರ ಔಟ್​ ಆಗಿ ನಿರಾಶೆ ಮೂಡಿಸಿದ್ದರು. ಪಂದ್ಯ ಮುಗಿಯುತ್ತಿದ್ದಂತೆ ಟ್ರೋಲಿಗರು ಆಟ ಶುರು ಮಾಡಿದರು. ಕೆಎಲ್ ರಾಹುಲ್ ಟ್ರೋಲ್​ಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಇದು ರೋಹಿತ್​, ಕೊಹ್ಲಿ ನಿವೃತ್ತಿಯ ಬಗ್ಗೆ ಮಾತನಾಡುವ ಸಮಯವಲ್ಲ: ದ್ರಾವಿಡ್​

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜೊತೆಗಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ಟೀಂ ಇಂಡಿಯಾದ ಬ್ಯಾಟಿಂಗ್​ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ

Last Updated : Nov 11, 2022, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.