ನಾಲ್ಕು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಿನಿಮಾ ತೆರೆ ಕಂಡಿದೆ. ಈದ್ ಸಂದರ್ಭ (ನಿನ್ನೆ, 21-4-23) ಬಹು ನಿರೀಕ್ಷಿತ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಇತರ ಚಿತ್ರಗಳಿಗೆ ಹೋಲಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಕಂಡಿದೆ. ಎರಡು ಅಂಕಿಗಳೊಂದಿಗೆ ಬಾಕ್ಸ್ ಆಫೀಸ್ ಸದ್ದು ಮಾಡುತ್ತಿದೆ. ಆದರೆ ಚಿತ್ರತಂಡದ ಮತ್ತು ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ಚಿತ್ರ ವಿಫಲವಾಗಿದೆ ಅಂತಾರೆ ಸಿನಿ ಪಂಡಿತರು. ವಿಮರ್ಶೆ ಬಗ್ಗೆ ನೋಡೋದಾದ್ರೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
-
#KisiKaBhaiKisiKiJaan is underwhelming on Day 1… More so when one compares it with #SalmanKhan’s #Eid releases from 2010 to 2019… Metros weak, mass pockets better, but not great… Extremely important for biz to jump multi-fold today [#Eid]… Fri ₹ 15.81 cr. #India biz. #KBKJ pic.twitter.com/tqvpJbmRrR
— taran adarsh (@taran_adarsh) April 22, 2023 " class="align-text-top noRightClick twitterSection" data="
">#KisiKaBhaiKisiKiJaan is underwhelming on Day 1… More so when one compares it with #SalmanKhan’s #Eid releases from 2010 to 2019… Metros weak, mass pockets better, but not great… Extremely important for biz to jump multi-fold today [#Eid]… Fri ₹ 15.81 cr. #India biz. #KBKJ pic.twitter.com/tqvpJbmRrR
— taran adarsh (@taran_adarsh) April 22, 2023#KisiKaBhaiKisiKiJaan is underwhelming on Day 1… More so when one compares it with #SalmanKhan’s #Eid releases from 2010 to 2019… Metros weak, mass pockets better, but not great… Extremely important for biz to jump multi-fold today [#Eid]… Fri ₹ 15.81 cr. #India biz. #KBKJ pic.twitter.com/tqvpJbmRrR
— taran adarsh (@taran_adarsh) April 22, 2023
ಭಾರತ್, ದಬಾಂಗ್ 3 ಸಿನಿಮಾ 2019ರಲ್ಲಿ ತೆರೆಕಂಡ ಸಲ್ಮಾನ್ ಸಿನಿಮಾಗಳು. ಆ ನಂತರ ಕೊಂಚ ಬ್ರೇಕ್ ಪಡೆದಿದ್ದ ಖಾನ್ ಇದೀಗ ಪೂರ್ಣ ಪ್ರಮಾಣದ ಅಭಿನಯದೊಂದಿಗೆ ವಾಪಸ್ ಆಗಿದ್ದಾರೆ. ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ವಹಿಸಿದ್ದರೂ, 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅವರ ಫುಲ್ ಪ್ಯಾಕ್ ಸಿನಿಮಾ. ಟ್ರೇಲರ್, ಪೋಸ್ಟರ್, ಟೀಸರ್, ಹಾಡು, ಪ್ರಮೋಶನ್ಗಳಿಂದ ಸದ್ದು ಮಾಡಿದ್ದ KKBKKJ ಸಿನಿಮಾ ನಿನ್ನೆ ತೆರೆಕಂಡಿದ್ದು, ಮೊದಲ ದಿನ ಸುಮಾರು 15 ಕೋಟಿ ರೂಪಾಯಿ ಸಂಪಾದಿಸಿದೆ.
- " class="align-text-top noRightClick twitterSection" data="
">
ಅದಾಗ್ಯೂ ಈ ಸಂಖ್ಯೆ ಅವರ ಕೊನೆಯ ಚಿತ್ರ 'ಭಾರತ್'ಗೆ ಹೋಲಿಸಿದರೆ ಕಡಿಮೆ. ವರದಿಗಳ ಪ್ರಕಾರ, ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ತನ್ನ ಮೊದಲ ದಿನದಂದು ನಿಧಾನಗತಿಯ ಆರಂಭಕ್ಕೆ ಸಾಕ್ಷಿಯಾಯಿತು. ಬಿಗ್ ಸ್ಟಾರ್ಸ್ ಒಳಗೊಂಡಿದೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 15.81 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ವ್ಯವಹಾರ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಇಂದು ಮತ್ತು ನಾಳೆ ಕಲೆಕ್ಷನ್ ಸಂಖ್ಯೆ ಉತ್ತಮವಾಗಿರಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮೊದಲ ದಿನದಂದು 13.75 ಕೋಟಿಯಿಂದ 15 ಕೋಟಿ ರೂಪಾಯಿಗಳವರೆಗೆ ಗಳಿಸುವ ನಿರೀಕ್ಷೆ ಹೊಂದಲಾಗಿತ್ತು. ಸಲ್ಮಾನ್ ಅವರ ಈ ಹಿಂದಿನ ಚಿತ್ರ ಭಾರತ್ 42.30 ಕೋಟಿ ರೂ.ಗಳೊಂದಿಗೆ ಯಶಸ್ವಿಯಾಗಿತ್ತು. ಆದರೆ KKBKKJ ಮೊದಲ ದಿನ 15 ಕೋಟಿ ರೂ. ವ್ಯವಹಾರ ನಡೆಸಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ 'KKBKKJ' ಈದ್ ಗಿಫ್ಟ್: 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ನಂತರ ಸಲ್ಮಾನ್ ಅವರ ಈ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೇಲೆ ಭಾರೀ ನಿರೀಕ್ಷೆ ಹೊಂದಲಾಗಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದ ಕಲೆಕ್ಷನ್ ಮೇಲೆ ಚಿತ್ರತಂಡದ ಕಣ್ಣಿದೆ. ಅದಾಗ್ಯೂ ಎಲ್ಲೆಡೆ ಹಬ್ಬದ ಸಂಭ್ರಮದಲ್ಲಿ ಜನರು ಇರುವುದರಿಂದ ಚಿತ್ರಮಂದಿಗಳತ್ತ ಹೆಜ್ಜೆ ಹಾಕುತ್ತಾರೋ ಎನ್ನುವ ಸಂಶಯವೂ ಇದೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಶಾಕ್: KKBKKJ ಚಿತ್ರ ಆನ್ಲೈನ್ನಲ್ಲಿ ಸೋರಿಕೆ!
ಇನ್ನೂ ಸಲ್ಮಾನ್ ಇದೇ 24ರಂದು ದುಬೈನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಅಭಿಮಾನಿಗಳು ನಿಯಮಾನುಸಾರ ಟಿಕೆಟ್ ಖರೀದಿಸಿ, ದುಬೈನ ಫ್ಲೋಟ್ ಕ್ಲಬ್ನಲ್ಲಿ ನಿಮ್ಮ ಮೆಚ್ಚಿನ ನಟನನ್ನು ಭೇಟಿ ಆಗಬಹುದು. ಈ ಕುರಿತು ನಟ ಸಲ್ಮಾನ್ ಖಾನ್ ತಮ್ಮ ಅಧಿಕೃತ ಇನ್ಸ್ಟಾ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಇಂದು ವಿಡಿಯೋ ಒಂದನ್ನು ಹಂಚಿಕೊಂಡು, ಅಭಿಮಾನಿಗಳಲ್ಲಿ ಭೇಟಿಯಾಗೋಣ ಎಂದು ತಿಳಿಸಿದ್ದಾರೆ.