ETV Bharat / entertainment

ಇಳಿಕೆಯಾದ ಸಲ್ಮಾನ್ ಸಿನಿಮಾ ಗಳಿಕೆ: ಅದ್ಧೂರಿ ವೆಚ್ಚದಲ್ಲಿ ತಯಾರಾಗ್ತಿದೆ ಮುಂದಿನ ಚಿತ್ರ! - ಸಲ್ಮಾನ್ ಖಾನ್‌

ಸಲ್ಮಾನ್ ಖಾನ್‌ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಅವರ ಮುಂದಿನ ಚಿತ್ರ ಟೈಗರ್​ 3 ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ.

Kisi Ka Bhai Kisi ki jaan
ಕಿಸಿ ಕಾ ಭಾಯ್ ಕಿಸಿ ಕಿ ಜಾನ್
author img

By

Published : May 6, 2023, 2:08 PM IST

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ ಅವರ ಬಹುನಿರೀಕ್ಷಿತ ಸಿನಿಮಾ ಈದ್​ ಸಂದರ್ಭ, ಏಪ್ರಿಲ್​ 21ರಂದು ತೆರೆ ಕಂಡಿದೆ. ಬಹು ಸಮಯದ ನಂತರ ತೆರೆ ಮೇಲೆ ಬಂದ ಸಲ್ಮಾನ್ ಮತ್ತು ಚಿತ್ರತಂಡಕ್ಕೆ ಕಲೆಕ್ಷನ್​ ವಿಚಾರದಲ್ಲಿ ನಿರಾಸೆಯಾಗಿದೆ. ಸಿನಿಮಾ ಗಳಿಕೆ ಇಳಿಕೆಯಾಗತೊಡಗಿದೆ. ​​​

ಬಹು ನಿರೀಕ್ಷೆಯೊಂದಿಗೆ ಸಿನಿಮಾ ಮಾಡಿದ ಬಾಲಿವುಡ್​ ಬ್ಯಾಚುಲರ್​​ ಸಲ್ಮಾನ್​ ಖಾನ್​ಗೆ 2023ನೇ ಸಾಲು ಅದೃಷ್ಟ ತಂದುಕೊಟ್ಟಿಲ್ಲ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಭಾಯ್​​ಜಾನ್​ನ ಸಿನಿಮಾ ಏಪ್ರಿಲ್ 21ರಂದು ಬಿಡುಗಡೆ ಆಯಿತು. ಸಲ್ಮಾನ್​ ಸಿನಿಮಾ ತೆರೆಕಂಡು 15 ದಿನಗಳು ಕಳೆದಿದ್ದು, 16ನೇ ದಿನಕ್ಕೆ ಕಾಲಿಡುತ್ತಿದೆ. ಆದರೆ ಈ 15 ದಿನಗಳಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಚಿತ್ರ ತಂಡಕ್ಕೆ ನಿರಾಸೆಯುಂಟುಮಾಡಿದೆ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಪಲಕ್ ತಿವಾರಿ ಮತ್ತು ಶೆಹನಾಜ್ ಗಿಲ್ ಕೂಡ ಜಾದೂ ಮಾಡುವಲ್ಲಿ ವಿಫಲರಾಗಿದ್ದಾರೆ.

ವರದಿಗಳ ಪ್ರಕಾರ, ಸದ್ಯ ಚಿತ್ರ ಒಂದು ದಿನಕ್ಕೆ 1 ಕೋಟಿ ರೂ. ಕೂಡ ಕಲೆಕ್ಷನ್ ಮಾಡುತ್ತಿಲ್ಲ. ಆರಂಭಿಕ ಗಳಿಕೆ ಒಂದು ಮಟ್ಟಕ್ಕೆ ಉತ್ತಮವಾಗಿತ್ತಾದರೂ, ಸದ್ಯ ಅಂಕಿ - ಅಂಶಗಳು ಇಳಿಕೆಯಾಗಿದೆ. ಚಿತ್ರವು ಈವರೆಗೆ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 115 ಕೋಟಿ ರೂಪಾಯಿ ಸಂಗ್ರಹಿಸಿದೆ ಮತ್ತು ವಿಶ್ವಾದ್ಯಂತ 165 ಕೋಟಿ ರೂ. ಕಲೆಕ್ಷನ್ ಮಾಡಿದೆ.

"ಟೈಗರ್ 3" ಸಲ್ಮಾನ್ ಖಾನ್‌ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ. ಅವರ ಕೊನೆ ಚಿತ್ರ ಈದ್​ ಸಂದರ್ಭ ತೆರೆಕಂಡಿದ್ದು, ಮುಂದಿನ ಸಿನಿಮಾ ದೀಪಾವಳಿ ವೇಳೆಗೆ ಬಿಡುಗಡೆ ಆಗಲು ಸಜ್ಜಾಗುತ್ತಿದೆ. ಯಶ್​ ರಾಜ್​ ಫಿಲ್ಮ್ಸ್​​ನ ಆದಿತ್ಯ ಚೋಪ್ರಾ ಅವರು ಅದ್ಧೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ, ಆಪ್ತ ಮೂಲಗಳ ಮಾಹಿತಿ ಸಿನಿ ಪ್ರಿಯರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: 40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

ಸಲ್ಮಾನ್ ಖಾನ್‌ ಜೊತೆಗೆ ಕತ್ರಿನಾ ಕೈಫ್​, ಇಮ್ರಾನ್​ ಹಶ್ಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗಮನ ಸೆಳೆಯುತ್ತಿರುವ ವಿಚಾರವೆಂದರೆ, ಪಠಾಣ್​ ಹೀರೋ ಶಾರುಖ್​ ಖಾನ್​ ಈ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ. ಮೇ. 8ರಂದು ಸಲ್ಲು ಮತ್ತು ಎಸ್​ಆರ್​ಕೆ ಸೀನ್​ನ ಶೂಟಿಂಗ್ ಆರಂಭಗೊಳ್ಳಲಿದೆ. ಈ ಒಂದು ಸೀನ್​ಗಾಗಿ ಸುಮಾರು 5-6 ತಿಂಗಳಿನಿಂದ ಕೆಲಸ ನಡೆಯುತ್ತಿದೆ.​​ ಇವರಿಬ್ಬರ ಆ್ಯಕ್ಷನ್​ ದೃಶ್ಯವನ್ನು ಭರ್ಜರಿಯಾಗಿ ಪ್ರದರ್ಶಿಸಲು 35 ಕೋಟಿ ರೂಪಾಯಿಯ ಸೆಟ್​ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಆಪ್ತ ಮೂಲಗಳಿಂದ ಬಂದಿದೆ.

ಇದನ್ನೂ ಓದಿ: ಕುದುರೆ ಸವಾರಿ ಮಾಡುವಾಗ ಬಿದ್ದ ಮಿಸ್​​ ಯೂನಿವರ್ಸ್​​​ ಫೈನಲಿಸ್ಟ್ ಕೊನೆಯುಸಿರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.