ETV Bharat / entertainment

ದುಲ್ಕಾರ್​ ಸಲ್ಮಾನ್​ 'ಕಿಂಗ್​ ಆಫ್​ ಕೋಥಾ' ಹಿಟ್​: 4ನೇ ದಿನದ ಕಲೆಕ್ಷನ್​ ಎಷ್ಟು? - ಈಟಿವಿ ಭಾರತ ಕನ್ನಡ

King of Kotha box office collection: ದುಲ್ಕರ್​ ಸಲ್ಮಾನ್​ ನಟನೆಯ 'ಕಿಂಗ್​ ಆಫ್​ ಕೋಥಾ' ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನ ಸುಮಾರು 2 ಕೋಟಿ ರೂಪಾಯಿ ಗಳಿಸಿದೆ.

King of Kotha box office collection
ಕಿಂಗ್​ ಆಫ್​ ಕೋಥಾ
author img

By ETV Bharat Karnataka Team

Published : Aug 28, 2023, 4:12 PM IST

ಮಲಯಾಳಂ ಸ್ಟಾರ್​ ನಟ ದುಲ್ಕರ್​ ಸಲ್ಮಾನ್​ ನಟನೆಯ 'ಕಿಂಗ್​ ಆಫ್​ ಕೋಥಾ' ಸಿನಿಮಾ ಆಗಸ್ಟ್​ 24, ಗುರುವಾರದಂದು ತೆರೆ ಕಂಡಿದೆ. ದುಲ್ಕರ್​ ಸಲ್ಮಾನ್​ ಅವರ ಕಂಪ್ಲೀಟ್​ ಮಾಸ್ ಎಂಟರ್​ಟೈನ್​​ಮೆಂಟ್​ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಚಿತ್ರಕಥೆ ಮತ್ತು ಎಲ್ಲಾ ಕಲಾವಿದರ ನಟನೆ ಮೆಚ್ಚಿ ಕೊಂಡಾಡುತ್ತಿದ್ದಾರೆ. ಕಲೆಕ್ಷನ್​ ವಿಚಾರದಲ್ಲೂ ಉತ್ತಮ ಓಟ ಮುಂದುವರೆಸಿದ್ದು, ಬಿಡುಗಡೆಯಾದ ನಾಲ್ಕನೇ ದಿನ ಸುಮಾರು 2 ಕೋಟಿ ರೂಪಾಯಿ ಗಳಿಸಿದೆ.

ಈವರೆಗಿನ ಕಲೆಕ್ಷನ್​ ಹೀಗಿದೆ.. ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಮೊದಲ ವಾರಾಂತ್ಯದಲ್ಲಿ ಒಟ್ಟು 13.5 ಕೋಟಿ ಗಳಿಸಿದೆ. ಬಿಡುಗಡೆಯಾದ ಮೊದಲ ದಿನ 6.85 ಕೋಟಿ ರೂ. ಸಂಗ್ರಹಿಸಿತ್ತು. ಅದರಲ್ಲಿ ಮಲಯಾಳಂ ಆವೃತ್ತಿಯು 5.6 ಕೋಟಿ ರೂ., ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕ್ರಮವಾಗಿ 85 ಲಕ್ಷ ಮತ್ತು 40 ಲಕ್ಷ ರೂಪಾಯಿ ಗಳಿಸಿತ್ತು. ಶುಕ್ರವಾರ ಎಲ್ಲಾ ಭಾಷೆಗಳಲ್ಲಿ ಚಿತ್ರವು 2.6 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಶನಿವಾರ 2.5 ಕೋಟಿ ರೂ. ಪಡೆದುಕೊಳ್ಳುವುದರ ಜೊತೆಗೆ ಭಾನುವಾರ ಅಂದಾಜು 2 ಕೋಟಿ ರೂಪಾಯಿ ಗಳಿಸಿದೆ.

  • " class="align-text-top noRightClick twitterSection" data="">

ಪ್ರೇಕ್ಷಕರ ಪ್ರತಿಕ್ರಿಯೆ: 'ಕಿಂಗ್​ ಆಫ್​ ಕೋಥಾ' ವೀಕ್ಷಿಸಿದ ಪ್ರೇಕ್ಷಕರು ಆ್ಯಕ್ಷನ್​ ಎಂಟರ್​ಟೈನ್​ಮೆಂಟ್​ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರ ನೋಡಿರುವ ವೀಕ್ಷಕರು ಚಿತ್ರಕಥೆ ಮತ್ತು ನಟನೆ ಮೆಚ್ಚಿ ಕೊಂಡಾಡುತ್ತಿದ್ದಾರೆ. 'ಕಿಂಗ್​ ಆಫ್​ ಕೋಥಾ' ವಿಶುವಲ್ಸ್​ ಚಿತ್ರದ ಹೈಲೆಟ್ಸ್​ ಎಂದು ಬಹುತೇಕರು ಉಲ್ಲೇಖಿಸಿದ್ದಾರೆ. ಚಿತ್ರ ಸಂಗೀತ, ಹಿನ್ನೆಲೆ ಸಂಗೀತ ಅತ್ಯುತ್ತಮ ಅನುಭವ ಕೊಟ್ಟಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

'ಒಂದೊಳ್ಳೆ ಗ್ಯಾಂಗ್​ಸ್ಟರ್ ಮೂವಿ', ಇತರೆ ನಟರೊಂದಿಗೆ ದುಲ್ಕರ್​ ಸಲ್ಮಾನ್​​ ಶೈನ್​ ಆಗಿದ್ದು, ಇಡೀ ಚಿತ್ರತಂಡ ಸಿನಿಮಾದ ಅಂದ ಹೆಚ್ಚಿಸಿದೆ ಎಂದೆಲ್ಲಾ ಕಮೆಂಟ್​ ಮಾಡುತ್ತಿದ್ದಾರೆ. ಆ್ಯಕ್ಷನ್​ ಸೀನ್ಸ್​, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರಶಂಸಿಸಿದ್ದಾರೆ. ''ಕಿಂಗ್​ ಆಫ್​ ಕೋಥಾ ವೀಕ್ಷಿಸಿದ ಬಳಿಕ ನಾವು ಗೆದ್ದೆವು ಎಂಬ ಭಾವನೆ ಮೂಡಿದೆ. ಇನ್ನು ದ್ವೇಷಿಗರು ಏನನ್ನೂ ಮಾಡಲು ಸಾಧ್ಯವಿಲ್ಲ. ಮಾಲಿವುಡ್​ನಲ್ಲಿ ಹಿಂದೆಂದೂ ನೋಡಿರದಂತಹ ಸಿನಿಮಾ. ಎಲ್ಲಾ ಮಾಲಿವುಡ್​ ರೆಕಾರ್ಡ್​ಗಳು ಈ ವಾರಾಂತ್ಯ ಬ್ರೇಕ್​ ಆಗಲಿವೆ. ಇದು ಸ್ಮ್ಯಾಶ್​ ಟೈಮ್''​ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಚಿತ್ರತಂಡ ಹೀಗಿದೆ.. ಅಭಿಲಾಶ್​ ಜೋಶಿ ನಿರ್ದೇಶನದ ಸಿನಿಮಾದಲ್ಲಿ ಡ್ಯಾನ್ಸಿಂಗ್​ ರೋಸ್​, ಪ್ರಸನ್ನ, ಐಶ್ವರ್ಯಾ ಲಕ್ಷ್ಮಿ, ನೈಲಾ ಉಷಾ, ಚೆಂಬನ್​ ವಿನೋದ್, ಗೋಕುಲ್​ ಸುರೇಶ್​, ಶಮ್ಮಿ ತಿಲಕನ್​, ಶಾಂತಿ ಕೃಷ್ಣ, ವಡ ಚಯನ್ನೈ ಶರಣ್​​, ಅನಿಕಾ ಸುರೇಂದ್ರನ್​​ ಸೇರಿ ಹಲವರು ನಟಿಸಿದ್ದಾರೆ. ದುಲ್ಕರ್​ ಸಲ್ಮಾನ್ ಅವರ ಬ್ಯಾನರ್​​ ವೇಫೇರರ್ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ.. ಉತ್ಸಾಹ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ದುಲ್ಕರ್​ ಸಲ್ಮಾನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.