ETV Bharat / entertainment

ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಪಾತ್ರ ರಿವೀಲ್.. ಫಿದಾ ಆದ ಫ್ಯಾನ್ಸ್ !

author img

By ETV Bharat Karnataka Team

Published : Jan 9, 2024, 6:35 PM IST

Updated : Jan 9, 2024, 7:35 PM IST

ಮ್ಯಾಕ್ಸ್ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಅವರ ಪಾತ್ರವನ್ನು ಚಿತ್ರತಂಡ ರಿವೀಲ್ ಮಾಡಿದೆ.

ನಟ ಸುದೀಪ್
ನಟ ಸುದೀಪ್

ಕನ್ನಡ ಚಿತ್ರರಂಗ ಅಲ್ಲದೇ ತಮಿಳು ಭಾಷೆಯಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಮ್ಯಾಕ್ಸ್. ಕಿಚ್ಚ ಸುದೀಪ್ ಔಟ್ ಅಂಟ್ ಔಟ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಮ್ಯಾಕ್ಸ್ ಚಿತ್ರ ತಂಡದಿಂದ ಹೊಸ ಅಪ್ಡೇಟ್​ ಹೊರ ಬಿದ್ದಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಮ್ಯಾಕ್ಸ್ ಚಿತ್ರದ ಫೋಟೋವೊಂದನ್ನ ಇತ್ತೀಚಿಗೆ ಕಿಚ್ಚ ಹಂಚಿಕೊಂಡಿದ್ದರು. ಇದೀಗ ಮ್ಯಾಕ್ಸ್ ಸಿನಿಮಾ ಟೀಮ್​ನಿಂದ ಬಿಗ್ ಅಪ್ಡೇಟ್​ವೊಂದು ಸಿಕ್ಕಿದೆ.

ಸದ್ಯ ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿ ಸೆಟ್‌ಗಳನ್ನು ಹಾಕಿ ಭರದಿಂದ ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿರುವ ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಪಾತ್ರ ಏನು ಅನ್ನೋದನ್ನ ಚಿತ್ರತಂಡ ರಿವೀಲ್ ಮಾಡಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರದ ಹೆಸರು ಅರ್ಜುನ್ ಮಹಾಕ್ಷಯ್.

ನಟ ಸುದೀಪ್
ನಟ ಸುದೀಪ್

ಯೆಸ್ ಅರ್ಜುನ್ ಮಹಾಕ್ಷಯ್ ಖಡಕ್ ಪೊಲೀಸ್ ಆಫೀಸರ್. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಈ ಹಾದಿಯಲ್ಲಿ ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸುತ್ತಾನೆ. ದುರಾದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ ಮ್ಯಾಕ್ಸ್ ಸಿನಿಮಾ ಕಥೆ. ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಟೀಸರ್ ಸೂಪರ್ ಹಿಟ್ ಆಗಿತ್ತು. ಕಿಚ್ಚನ ಖಡಕ್ ಲುಕ್​, ಬಾಡಿ ಲಾಂಗ್ವೇಜ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಅರ್ಜುನ್ ಮಹಾಕ್ಷಯ್ ಕಥೆ ಕೇಳಿ ಥ್ರಿಲ್ಲಾಗಿದ್ದಾರೆ.

ಕಿಚ್ಚನ ಅಭಿಮಾನಿಗಳು ಅಲ್ಲ ತಮಿಳು ಫ್ಯಾನ್ಸ್ ಕೂಡ ಅರ್ಜುನ್ ಮಹಾಕ್ಷಯ್ ಆರ್ಭಟ ನೋಡಲು ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ಹೆಸರು ಅರ್ಜುನ್ ಮಹಾಕ್ಷಯ್. ಎಲ್ಲರೂ ಮಹಾಕ್ಷಯ್‌ನ ಶಾರ್ಟ್ ಆಗಿ ಮ್ಯಾಕ್ಸ್ ಎಂದು ಕರೆಯುತ್ತಾರಂತೆ. ಈ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ಕಿಚ್ಚ ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಇಳವರಸು, ಸುನಿಲ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆಗೆ ಸುದೀಪ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಬಳಿಕ ಸುದೀಪ್ ಒಂದು ವರ್ಷ ಬ್ರೇಕ್ ಪಡೆದಿದ್ದರು. ಆ ಸಮಯದಲ್ಲಿ 3 ಕಥೆಗಳನ್ನು ಫೈನಲ್ ಮಾಡಿದ್ದರು. ಅದರಲ್ಲಿ ಮ್ಯಾಕ್ಸ್ ಒಂದು. ಕಳೆದ ವರ್ಷ ಸುದೀಪ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಬಹುತೇಕ ಶೂಟಿಂಗ್ ಮುಗಿಸಿರೋ ಮ್ಯಾಕ್ಸ್ ಸಿನಿಮಾ ಮಾರ್ಚ್ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರೋದು ಪಕ್ಕಾ ಎನ್ನಲಾಗಿದೆ. ಈ ಮೂಲಕ ಕಿಚ್ಚನ ಅಭಿಮಾನಿ ಬಳಗದಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ : 'ಗುಂಟೂರು ಖಾರಂ' ಬಿಡುಗಡೆಗೂ ಮುನ್ನ ಅಭಿಮಾನಿಗಳ ಸಂಭ್ರಮಾಚರಣೆ

Last Updated : Jan 9, 2024, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.