ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಮನೆಗೆ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ದಂಪತಿ ಭೇಟಿ ನೀಡಿದ್ದರು. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ಬೆಂಗಳೂರಿನ ಜಕ್ಕೂರಿನಲ್ಲಿರುವ ವಿಜಯ್ ರಾಘವೇಂದ್ರ ಅವರ ನಿವಾಸಕ್ಕೆ ನಟ ಸುದೀಪ್ ದಂಪತಿ ಆಗಮಿಸಿ ಶ್ರೀಮುರಳಿ ಮತ್ತು ವಿಜಯ ಭೇಟಿ ಮಾಡಿ ಸಾಂತ್ವನ ಹೇಳಿದರು.
ಈ ಸಮಯದಲ್ಲಿ ನಿರ್ಮಾಪಕರಾದ ಯೋಗಿ ಜಿ ರಾಜ್ ಕಾರ್ತಿಕ್ ನಟ ಸುದೀಪ್ ಜೊತೆಯಲ್ಲಿದ್ದರು. ಆಗಸ್ಟ್ 7ರಂದು ಸಂಬಂಧಿಕರ ಜೊತೆ ಸ್ಪಂದನ ಬ್ಯಾಂಕಾಕ್ಗೆ ಹೋಗಿದ್ದ ವೇಳೆ ಲೋ ಬಿಪಿಯಿಂದಾಗಿ ಹೃದಯಾಘಾತಕ್ಕೆ ಒಳಗಾಗಿದ್ದರು. ವಿಜಯ್ ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮಾದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಇದ್ದಾನೆ. ಥಾಯ್ಲೆಂಡ್ನಿಂದ ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಗ ಇಡೀ ಚಿತ್ರರಂಗದ ಸ್ನೇಹಿತರು ಸ್ಪಂದನ ಅಂತಿಮ ದರ್ಶನ ಪಡೆಯುವ ಮೂಲಕ ವಿಜಯರಾಘವೇಂದ್ರಗೆ ಸಾಂತ್ವನ ಹೇಳಿತ್ತು.
ಆದರೆ, ಸಿನಿಮಾ ಶೂಟಿಂಗ್ ಇದ್ದ ಕಾರಣ ಸುದೀಪ್ ವಿಜಯರಾಘವೇಂದ್ರ ಅವರನ್ನು ಭೇಟಿ ಮಾಡುವುದಕ್ಕೆ ಆಗಿರಲಿಲ್ಲ. ಈಗ ಸುದೀಪ್ ಶೂಟಿಂಗ್ ಬಿಡುವು ಮಾಡಿಕೊಂಡು ಪತ್ನಿ ಪ್ರಿಯಾ ಜೊತೆ ವಿಜಯರಾಘವೇಂದ್ರ ಮನೆಗೆ ಬಂದು ಸಾಂತ್ವನದ ಮಾತುಗಳ ಜೊತೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಕಿಚ್ಚ ಸಿನಿಮಾ; 9 ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟ ಸುದೀಪ್