ETV Bharat / entertainment

Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್​ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್​ - sudeep max movie

Kichcha 46 title teaser: ನಟ ಸುದೀಪ್​ ಅಭಿನಯದ 46ನೇ ಸಿನಿಮಾದ ಅಧಿಕೃತ ವಿಡಿಯೋ ಅನಾವರಣಗೊಂಡಿದೆ.

Kichcha 46 title teaser
ಮ್ಯಾಕ್ಸ್ ಟೀಸರ್
author img

By ETV Bharat Karnataka Team

Published : Sep 2, 2023, 12:36 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಬಹುಬೇಡಿಕೆ ನಟನಿಗೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟ ಪ್ರತಿಭಾವಂತ ಕಲಾವಿದನ ಬರ್ತ್ ಡೇ ಪಾರ್ಟಿ ಜೋರಾಗೇ ನಡೆದಿದೆ. ಮತ್ತೊಂದೆಡೆ ಕಿಚ್ಚ 46 ಸಿನಿಮಾದ ಟೈಟಲ್​ ಟೀಸರ್​ ಅನಾವರಣಗೊಂಡಿದೆ.

ಜುಲೈ 2 ರಂದು ನಟ ಸುದೀಪ್​ ಅಭಿನಯದ 46 ನೇ ಸಿನಿಮಾಗೆ ಸಂಬಂಧಿಸಿದ ವಿಡಿಯೋ ರಿಲೀಸ್​ ಆಗಿತ್ತು. K46 - Demon War Begins Promo ಎಂಬ ಟೈಟಲ್​​ನಲ್ಲಿ ವಿಡಿಯೋ ತುಣುಕು ಹೊರಬಂದಿತ್ತು. Demon War Begins ಮತ್ತು Kichcha 46 ಟೈಲರ್​​ನೊಂದಿಗೆ ಈ ಸಿನಿಮಾವನ್ನು ಹೆಸರಿಸಲಾಗುತ್ತಿತ್ತು. ಇದೀಗ ಚಿತ್ರದ ಅಧಿಕೃತ ಶೀರ್ಷಿಕೆ ಅನಾವರಣಗೊಂಡಿದೆ. ನಿರ್ಮಾಪಕ ಕಲೈಪುಲಿ ಎಸ್​ ತನು ಸಾಮಾಜಿಕ ಜಾಲತಾಣ ವೇದಿಕೆ X (ಹಿಂದಿನ ಟ್ವಿಟರ್) ನಲ್ಲಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಮುಂದಿನ ಚಿತ್ರದ ಟೈಟಲ್​ ಟೀಸರ್​ ಅನಾವರಣಗೊಳಿಸಿದ್ದಾರೆ.

ಟ್ವಿಟರ್​ನಲ್ಲಿ ಕಿಚ್ಚ 46 ಸಿನಿಮಾ ಟೈಟಲ್​ ಟೀಸರ್​ ಲಿಂಕ್​ ಹಂಚಿಕೊಂಡಿರುವ ನಿರ್ಮಾಪಕ ಕಲೈಪುಲಿ ಎಸ್​ ತನು, ''ಈ ದಿನವನ್ನು ನಮ್ಮ ಬಾದ್​​ಶಾ ಕಿಚ್ಚ ಸುದೀಪ್​ ಅವರಿಗಾಗಿ ವಿಶೇಷವಾಗಿಸಲು ನಾವು ಸಂತೋಷಪಡುತ್ತೇವೆ, ಮತ್ತು ನಿಮಗಾಗಿ ಬರ್ತ್ ಡೇ ಟ್ರೀಟ್​ ಇಲ್ಲಿದೆ'' ಎಂದು ಬರೆದುಕೊಂಡಿದ್ದಾರೆ. Demon War Begins ಎಂದು ಹೆಸರಿಸಲಾಗುತ್ತಿದ್ದ ಚಿತ್ರದ ಅಧಿಕೃತ ಶೀರ್ಷಿಕೆ ಮ್ಯಾಕ್ಸ್​​. ಟೀಸರ್​ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ': ನೆಚ್ಚಿನ 'ನಲ್ಲ'ನಿಗೆ ಪತ್ನಿಯಿಂದ ಸ್ಪೆಷಲ್ ಸರ್‌ಪ್ರೈಸ್!

ಇದೊಂದು ಪ್ಯಾನ್​​ ಇಂಡಿಯಾ ಸಿನಿಮಾ. ವಿ ಕ್ರಿಯೇಶನ್ಸ್ ಮತ್ತು ಕಿಚ್ಚ ಕ್ರಿಯೇಶನ್ಸ್​ ಬ್ಯಾನರ್​ ಅಡಿ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಲಾಗುವುದು. ನಿರ್ಮಾಪಕ ಕಲೈಪುಲಿ ಎಸ್​ ತನು ಬಂಡವಾಳ ಹೂಡಿರುವ ಈ ಸಿನಿಮಾವನ್ನು ವಿಜಯ್​ ಕಾರ್ತಿಕೇಯ ನಿರ್ದೇಶಿಸಲಿದ್ದಾರೆ. ಬಿ ಅಜನೀಶ್​ ಲೋಕನಾಥ್ ಸಂಗೀತ ಮತ್ತು ಎಸ್​ ಆರ್​​ ಗಣೇಶ್​ ಬಾಬು ಸಂಕಲನ ಈ ಮ್ಯಾಕ್ಸ್ ಸಿನಿಮಾಗಿರಲಿದೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.

ಇದನ್ನೂ ಓದಿ: ಕೊರಗಜ್ಜನೇ ನನ್ನನ್ನ ಇಲ್ಲಿಗೆ 3 ತಿಂಗಳಿಗೊಮ್ಮೆ ಕರೆಸಿಕೊಳ್ಳುತಾರೆ: ನಟಿ ರಕ್ಷಿತಾ ಪ್ರೇಮ್

ಈ ಹಿಂದೆ ಬಿಡುಗಡೆ ಆಗಿದ್ದ ವಿಡಿಯೋದಲ್ಲಿ ನಟ ರಕ್ತಸಿಕ್ತ ವಾತಾವರಣದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಡುಗಡೆ ಆಗಿರುವ ದೃಶ್ಯದಲ್ಲಿ ನಟ ಪೊಲೀಸ್​ ಅಧಿಕಾರಿ ಆಗಿರಬಹುದು ಎಂಬ ಸುಳಿವು ಕೊಟ್ಟಿದೆ. ಸುದೀಪ್​ ಲಾಟಿ ಹಿಡಿದು ಬಂದಿದ್ದು, ಸಂಪೂರ್ಣ ದೃಶ್ಯಗಳಿಗೆ ಮತ್ತಷ್ಟು ದಿನ ಕಾಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.