ETV Bharat / entertainment

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು - ಅಜಯ್ ದೇವಗನ್ ಸುದ್ದಿ

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ಸ್ಯಾಂಡಲ್ ವುಡ್ ನಟ ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಟ ನೀನಾಸಂ ಸತೀಶ್, ಮೋಹಕ ತಾರೆ ರಮ್ಯ, ನಟ ಚೇತನ್, ನಟ‌ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಸಾಕಷ್ಟು ತಾರೆಯರು ಸುದೀಪ್ ಗೆ ಬೆಂಬಲ ಸೂಚಿಸಿದ್ದಾರೆ.

kiccha-sudeep-statement-about-hindi-language
ಹಿಂದಿ ರಾಷ್ಟ್ರೀಯ ಭಾಷೆ ಅಲ್ಲಾ ಎಂಬ ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು
author img

By

Published : Apr 28, 2022, 1:27 PM IST

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದು ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಉಪೇಂದ್ರ ಅಭಿನಯದ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಐ ಯಾಮ್ ಆರ್ ಎಂಬ ಸಿನೆಮಾ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್, ಪ್ಯಾನ್ ಇಂಡಿಯಾ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ಹಿಂದಿ ರಾಷ್ಟ್ರ ಭಾಷೆಯಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ಮಾಣ ಆಗುವ ಸಿನೆಮಾಗಳು ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಇಂಡಿಯಾ ಪದವನ್ನು ಬಳಸಬೇಡಿ ಎಂದು ಹೇಳಿದ್ದರು.

ಈ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದು, ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡಿ, ಯಾಕೆ ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡುತ್ತಿದ್ದೀರಾ? ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಆಗಿರುತ್ತದೆ. ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುವ ಮೂಲಕ ಅಜಯ್ ದೇವಗನ್ ಸುದೀಪ್​ಗೆ ತಿರುಗೇಟು ನೀಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಅಜಯ್ ದೇವಗನ್ ಪಾನ್ ಮಸಾಲಾ ತಿಂದು ನಶೆಯಲ್ಲಿದ್ದಾರೆ ಎಂದು ಕಾಲು ಎಳೆದಿದ್ದಾರೆ‌. ಸದ್ಯ ಈ ವಿಚಾರವಾಗಿ ಕನ್ನಡ ಚಿತ್ರರಂಗದ ನಟ, ನಟಿಯರು ಹಾಗು ನಿರ್ದೇಶಕರು ಸುದೀಪ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಅಜಯ್ ದೇವಗನ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಟ ನೀನಾಸಂ ಸತೀಶ್

ಈ ಬಗ್ಗೆ ಟ್ಟೀಟ್ ಮಾಡಿರೋ ಮೋಹಕ ತಾರೆ ರಮ್ಯಾ, ಅಜಯ್ ದೇವಗನ್ ಅವರೇ ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದು ನಿಮ್ಮ ಅಜ್ಞಾನ. ಕೆಜಿಎಫ್, ಆರ್.ಆರ್.ಆರ್ ಹಾಗು ಪುಷ್ಪ ಸಿನಿಮಾಗಳು ಹಿಂದಿಗೆ ಡಬ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಕಲೆಗೆ ಯಾವುದೇ ಗಡಿ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತಿವೆ. ನೀವು ನಮ್ಮ ಸಿನಿಮಾಗಳನ್ನು ನೋಡಿ ಸಂತೋಷಪಡಿ, ನಾವು ನಿಮ್ಮ ಸಿನಿಮಾಗಳನ್ನು ನೋಡಿ ಸಂತೋಷ ಪಡುತ್ತೇವೆ ಎಂದು ಹೇಳಿದ್ದಾರೆ.

  • No- Hindi is not our national language. @ajaydevgn Your ignorance is baffling. And it’s great that films like KGF Pushpa and RRR have done so well in the Hindi belt- art has no language barrier.
    Please enjoy our films as much as we enjoy yours- #stopHindiImposition https://t.co/60F6AyFeW3

    — Divya Spandana/Ramya (@divyaspandana) April 27, 2022 " class="align-text-top noRightClick twitterSection" data=" ">

ಇನ್ನು ನೀನಾಸಂ ಸತೀಶ್ ಅವರು ಅಜಯ್ ದೇವಗನ್ ಟ್ಟೀಟ್​​​ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಸ್ಟಾರ್ ನಟನಾಗಿದ್ದು, ಕನ್ನಡ ಸಿನಿಮಾಗಳನ್ನು ಇಲ್ಲಿ ಡಬ್ ಮಾಡಿ ಯಾಕೇ ರಿಲೀಸ್ ಮಾಡುತ್ತಿದ್ದೀರಾ ಹೇಳಿದ್ದು, ನಿಮ್ಮ ಸಣ್ಣತನವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ. ನಾವು ಇಲ್ಲಿ ನಿಮ್ಮ ಚಿತ್ರಗಳನ್ನು ಪ್ರೋತ್ಸಾಹಿಸಿದ್ದೇವೆ, ಗೌರವಿಸಿದ್ದೇವೆ, ಆದರೆ ನಿಮ್ಮ ಈ ರೀತಿಯ ಹೇಳಿಕೆ ತುಂಬಾ ಬಾಲಿಷವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಕುವೆಂಪು ಅವರು ಒಂದು ಮಾತನ್ನು ಹೇಳಿದ್ದಾರೆ. ನಾವು ಎಲ್ಲ ಭಾಷೆ ಅರಿತಾಗ ಮಾತ್ರ, ಆ ಭಾಷೆಯ ಸಂಸ್ಕೃತಿ ಅದರ ಜ್ಞಾನದ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ನಿಮ್ಮ ಭಾಷೆ ಬಗ್ಗೆ ನಿಮಗೆ ಎಷ್ಟು ಗೌರವ ಇದೆಯೋ ಅಷ್ಟೇ ಗೌರವ ನಮ್ಮ ಭಾಷೆಯ ಮೇಲೂ ಇರುವುದಾಗಿ ತಿರುಗೇಟು ನೀಡಿದ್ದಾರೆ. ಜೊತೆಗೆ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್, ನಟ‌ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಸಾಕಷ್ಟು ತಾರೆಯರು ಸುದೀಪ್ ಪರವಾಗಿ ಧ್ವನಿ ಎತ್ತಿದ್ದಾರೆ‌.

ಓದಿ : 'ಗೊಂದಲ ನಿವಾರಿಸಿದ್ದಕ್ಕೆ ಥ್ಯಾಂಕ್ಸ್​​​': ಸುದೀಪ್‌​ಗೆ ಧನ್ಯವಾದ ಹೇಳಿದ ಅಜಯ್ ದೇವಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.