ಜೈಸಲ್ಮೇರ್ (ರಾಜಸ್ಥಾನ): ಪ್ರವಾಸೋದ್ಯಮ, ಸಿನಿಮಾ ಚಿತ್ರೀಕರಣದೊಂದಿಗೆ ಇದೀಗ ಸ್ವರ್ಣನಗರಿ ಜೈಸಲ್ಮೇರ್ ದೇಶ-ವಿದೇಶದಲ್ಲಿಯೇ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದೆ. ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮತ್ತು ಆಲಿಯಾ-ರಣವೀರ್ ನಂತರ ಇದೀಗ ಮತ್ತೊಂದು ಖ್ಯಾತ ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅಲ್ಲದೇ, ಈ ಇಬ್ಬರೂ ಚಲನಚಿತ್ರ ತಾರೆಯರು ತಮ್ಮ ಮದುವೆಯನ್ನು ವಿಶೇಷವಾಗಿ ಮತ್ತು ಸ್ಮರಣೀಯವಾಗಿಸಲು ಜೈಸಲ್ಮೇರ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
![Jaisalmer Suryagarh Hotel Kiara Advani and Siddharth Malhotra gets marry Kiara and Siddharth tie the knot Kiara Siddhath Weeding Kiara and Siddharth will tie the knot at Jaisalmer ಸ್ವರ್ಣನಗರಿಯಲ್ಲಿ ನಡೆಯಲಿದೆ ಅದ್ಧೂರಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸಿದ್ದಾರ್ಥ್ ಕಿಯಾರಾ ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಮದುವೆಯನ್ನು ಸ್ಮರಣೀಯ ಮತ್ತು ವಿಶೇಷ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಶನ್ ಸೂರ್ಯಗಢ್ ಹೋಟೆಲ್ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ಸೂರ್ಯಗಢ್ ಹೋಟೆಲ್ ವಿಶೇಷತೆಗಳೇನು ದಿನಕ್ಕೆ ಎರಡು ಕೋಟಿ ಖರ್ಚು ಈ ಹೋಟೆಲ್ ವಿಐಪಿಗಳು ಮತ್ತು ವಿವಿಐಪಿಗಳ ಮೊದಲ ಆಯ್ಕೆ](https://etvbharatimages.akamaized.net/etvbharat/prod-images/kiaraandsiddharthwilltietheknotatjaisalmerssuryagarhhotel_20012023010636_2001f_1674156996_815.jpg)
ಮದುವೆ ವೇಳಾಪಟ್ಟಿ: ಮಾಹಿತಿ ಪ್ರಕಾರ, ಈ ಇಬ್ಬರು ಸಿನಿಮಾ ತಾರೆಯರ ವಿವಾಹ ಪೂರ್ವ ಕಾರ್ಯಕ್ರಮಗಳು ಫೆಬ್ರವರಿ 4 ಮತ್ತು 5 ರಂದು ನಡೆಯಲಿವೆ. ಇದರಲ್ಲಿ ಮೆಹಂದಿ, ಅರಿಶಿನ ಮತ್ತು ಸಂಗೀತ ಸಂಜೆ ನಡೆಯಲಿದೆ. ಇದಾದ ಬಳಿಕ ಫೆ.6ರಂದು ಇಬ್ಬರೂ ಸಿನಿಮಾ ತಾರೆಯರು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ನಂತರ ಮದುವೆ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಸುಮಾರು 4 ವರ್ಷಗಳ ಗೆಳೆತನದ ನಂತರ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಗೋಲ್ಡನ್ ಸಿಟಿಯಲ್ಲಿರುವ ವಿಶ್ವವಿಖ್ಯಾತ ಸೂರ್ಯಗಢ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದು, ಮದುವೆ ವಿಜೃಂಭಣೆಯಿಂದ ಜರುಗಲಿದೆ.
![Jaisalmer Suryagarh Hotel Kiara Advani and Siddharth Malhotra gets marry Kiara and Siddharth tie the knot Kiara Siddhath Weeding Kiara and Siddharth will tie the knot at Jaisalmer ಸ್ವರ್ಣನಗರಿಯಲ್ಲಿ ನಡೆಯಲಿದೆ ಅದ್ಧೂರಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸಿದ್ದಾರ್ಥ್ ಕಿಯಾರಾ ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಮದುವೆಯನ್ನು ಸ್ಮರಣೀಯ ಮತ್ತು ವಿಶೇಷ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಶನ್ ಸೂರ್ಯಗಢ್ ಹೋಟೆಲ್ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ಸೂರ್ಯಗಢ್ ಹೋಟೆಲ್ ವಿಶೇಷತೆಗಳೇನು ದಿನಕ್ಕೆ ಎರಡು ಕೋಟಿ ಖರ್ಚು ಈ ಹೋಟೆಲ್ ವಿಐಪಿಗಳು ಮತ್ತು ವಿವಿಐಪಿಗಳ ಮೊದಲ ಆಯ್ಕೆ](https://etvbharatimages.akamaized.net/etvbharat/prod-images/kiaraandsiddharthwilltietheknotatjaisalmerssuryagarhhotel_20012023010636_2001f_1674156996_807.jpg)
ಸೂರ್ಯಗಢ್ ಹೋಟೆಲ್ ವಿಶೇಷತೆಗಳೇನು?: ಜೈಸಲ್ಮೇರ್‌ನ ಸೂರ್ಯಗಢ ಹೋಟೆಲ್ ನಗರದಿಂದ ಸುಮಾರು 20 ರಿಂದ 25 ಕಿಮೀ ದೂರದಲ್ಲಿರುವ ಸುಮ್ ರಸ್ತೆಯಲ್ಲಿದೆ. ಡಿಸೆಂಬರ್ 2010 ರಲ್ಲಿ ಜೈಪುರದ ಉದ್ಯಮಿಯೊಬ್ಬರು ಈ ಹೋಟೆಲ್ ಅನ್ನು ನಿರ್ಮಿಸಿದ್ದರು. ಸುಮಾರು 65 ಎಕರೆ ಪ್ರದೇಶದಲ್ಲಿ ಹರಡಿರುವ ಈ ಹೋಟೆಲ್ ಜೈಸಲ್ಮೇರ್‌ನ ಹಳದಿ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದು ಕೋಟೆಯಂತೆ ಕಾಣುತ್ತದೆ. ಈ ಹೋಟೆಲ್ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಮದುವೆಗೆ ಅತ್ಯುತ್ತಮ ಕೊಠಡಿ, ಈಜುಕೊಳ ಮತ್ತು 65 ಎಕರೆ ಹೋಟೆಲ್ ಜೊತೆಗೆ ಎಲ್ಲಾ ಮದುವೆ ಕಾರ್ಯಕ್ರಮಗಳನ್ನು ನಿರ್ವಹಿಸಲು ಉತ್ತಮ ಸ್ಥಳಾವಕಾಶವೂ ಇಲ್ಲಿದೆ.
![Jaisalmer Suryagarh Hotel Kiara Advani and Siddharth Malhotra gets marry Kiara and Siddharth tie the knot Kiara Siddhath Weeding Kiara and Siddharth will tie the knot at Jaisalmer ಸ್ವರ್ಣನಗರಿಯಲ್ಲಿ ನಡೆಯಲಿದೆ ಅದ್ಧೂರಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸಿದ್ದಾರ್ಥ್ ಕಿಯಾರಾ ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಮದುವೆಯನ್ನು ಸ್ಮರಣೀಯ ಮತ್ತು ವಿಶೇಷ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಶನ್ ಸೂರ್ಯಗಢ್ ಹೋಟೆಲ್ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ಸೂರ್ಯಗಢ್ ಹೋಟೆಲ್ ವಿಶೇಷತೆಗಳೇನು ದಿನಕ್ಕೆ ಎರಡು ಕೋಟಿ ಖರ್ಚು ಈ ಹೋಟೆಲ್ ವಿಐಪಿಗಳು ಮತ್ತು ವಿವಿಐಪಿಗಳ ಮೊದಲ ಆಯ್ಕೆ](https://etvbharatimages.akamaized.net/etvbharat/prod-images/kiaraandsiddharthwilltietheknotatjaisalmerssuryagarhhotel_20012023010636_2001f_1674156996_1000.jpg)
ಡೆಸ್ಟಿನೇಶನ್ ವೆಡ್ಡಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಈ ಹೋಟೆಲ್‌ನಲ್ಲಿ ವಿಶೇಷ ಸ್ಥಳಗಳಿವೆ. ಹೋಟೆಲ್‌ನ ಒಳಾಂಗಣ ಮತ್ತು ಸ್ಥಳವನ್ನು ಅತಿಥಿಗಳು ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿ ಈ ಇಬ್ಬರೂ ತಮ್ಮ ಮದುವೆಗೆ ಸೂರ್ಯಗಢ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಬಾವಡಿ ಎಂಬ ಹೆಸರಿನ ಸ್ಥಳವಿದೆ. ವಿಶೇಷ ವಿವಾಹ ಸಮಾರಂಭಗಳಿಗಾಗಿ ಈ ಸ್ಥಳವನ್ನು ನಿರ್ಮಿಸಲಾಗಿದೆ. ಮಂಟಪದ ಸುತ್ತ ನಾಲ್ಕು ವಿಶೇಷ ಕಂಬಗಳನ್ನು ಅಳವಡಿಸಲಾಗಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ಇದೇ ಸ್ಥಳದಲ್ಲಿ ಮದುವೆಯಾಗಲಿದ್ದಾರೆ. ಹೋಟೆಲ್‌ನ ಎರಡು ದೊಡ್ಡ ಉದ್ಯಾನಗಳು ಸರೋವರದ ಬದಿಯಲ್ಲಿವೆ. ಅಲ್ಲಿ ಸಾವಿರಕ್ಕೂ ಹೆಚ್ಚು ಅತಿಥಿಗಳು ಸೇರಬಹುದು.
![Jaisalmer Suryagarh Hotel Kiara Advani and Siddharth Malhotra gets marry Kiara and Siddharth tie the knot Kiara Siddhath Weeding Kiara and Siddharth will tie the knot at Jaisalmer ಸ್ವರ್ಣನಗರಿಯಲ್ಲಿ ನಡೆಯಲಿದೆ ಅದ್ಧೂರಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸಿದ್ದಾರ್ಥ್ ಕಿಯಾರಾ ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಮದುವೆಯನ್ನು ಸ್ಮರಣೀಯ ಮತ್ತು ವಿಶೇಷ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಶನ್ ಸೂರ್ಯಗಢ್ ಹೋಟೆಲ್ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ಸೂರ್ಯಗಢ್ ಹೋಟೆಲ್ ವಿಶೇಷತೆಗಳೇನು ದಿನಕ್ಕೆ ಎರಡು ಕೋಟಿ ಖರ್ಚು ಈ ಹೋಟೆಲ್ ವಿಐಪಿಗಳು ಮತ್ತು ವಿವಿಐಪಿಗಳ ಮೊದಲ ಆಯ್ಕೆ](https://etvbharatimages.akamaized.net/etvbharat/prod-images/kiaraandsiddharthwilltietheknotatjaisalmerssuryagarhhotel_20012023010636_2001f_1674156996_169.jpg)
ದಿನಕ್ಕೆ 2 ಕೋಟಿ ರೂ ಖರ್ಚು: ಜೈಸಲ್ಮೇರ್‌ನ ಸೂರ್ಯಗಢ್ ಹೋಟೆಲ್‌ನಲ್ಲಿ ಹೆಚ್ಚಿನ ಡೆಸ್ಟಿನೇಶನ್ ರಾಯಲ್ ವೆಡ್ಡಿಂಗ್‌ಗಳನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ರವರೆಗೆ ಮದ್ಯಪಾನವಿಲ್ಲದೇ ಒಂದು ದಿನದ ವೆಚ್ಚ ಸುಮಾರು 1 ಕೋಟಿ 20 ಲಕ್ಷ ರೂಪಾಯಿ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಪ್ರವಾಸಿ ಸೀಸನ್‌ನಲ್ಲಿ ಬುಕ್ಕಿಂಗ್‌ಗೆ ದಿನಕ್ಕೆ ಸುಮಾರು 2 ಕೋಟಿ ರೂಪಾಯಿ ಇದೆ ಎಂದು ತಿಳಿದುಬಂದಿದೆ.
ವಿಐಪಿಗಳು, ವಿವಿಐಪಿಗಳ ಮೊದಲ ಆಯ್ಕೆ: ಸೂರ್ಯಗಢ್ ಹೋಟೆಲ್ ಚಲನಚಿತ್ರ ತಾರೆಯರು, ಅನೇಕ ವಿಐಪಿಗಳು ಮತ್ತು ವಿವಿಐಪಿಗಳು ಗೋಲ್ಡನ್ ಸಿಟಿಗೆ ಭೇಟಿ ನೀಡುವ ಮೊದಲ ಆಯ್ಕೆಯಾಗಿದೆ. ಖ್ಯಾತ ಚಲನಚಿತ್ರ ನಟರಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಕರಣ್ ಜೋಹರ್, ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಫರಾ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಸ್ಥಳಗಳಲ್ಲಿ ಇದೂ ಒಂದು. ಹೌಸ್‌ಫುಲ್ 4 ಮತ್ತು ರೇಸ್ 3 ರ ಹೆಚ್ಚಿನ ಚಿತ್ರೀಕರಣ ಇದೇ ಹೋಟೆಲ್‌ನಲ್ಲಿ ನಡೆದಿತ್ತು. ಈ ಹೋಟೆಲ್‌ನಲ್ಲಿ ನಡೆದ ಮದುವೆಯೊಂದರ ಸಮಾರಂಭದಲ್ಲಿ ಹಿಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಕೂಡ ಭಾಗವಹಿಸಿದ್ದರು. ಅನೇಕ ಸಚಿವರು ಮತ್ತು ದೊಡ್ಡ ನಾಯಕರು ಈ ಹೋಟೆಲ್‌ನಲ್ಲಿ ತಂಗುತ್ತಾರೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿಜಯ್ ಕಿರಗಂದೂರು, ತಾರಾಗೆ 'ರಾಘವೇಂದ್ರ ಚಿತ್ರವಾಣಿ' ಪ್ರಶಸ್ತಿ