ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಕಾಂಬಿನೇಷನ್ನಲ್ಲಿ ರೆಡಿಯಾಗಿರುವ ಸಿನಿಮಾ 'ಖುಷಿ'. ಇವರಿಬ್ಬರು ತೆರೆ ಹಂಚಿಕೊಂಡಿರುವ ಮೊದಲ ಸಿನಿಮಾ ಇದು. ಈ ಚಿತ್ರದ ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ಹಂಚಿಕೊಂಡಿದೆ. ಹೌದು, ಸಿನಿಮಾ ಬಿಡುಗಡೆ ದಿನಾಂಕನ್ನು ಘೋಷಿಸಿದೆ ಖುಷಿ ತಂಡ.
'ನಿನ್ನು ಕೋರಿ' ಮತ್ತು 'ಮಜಿಲಿ' ಖ್ಯಾತಿಯ ನಿರ್ದೇಶಕ ಶಿವ ನಿರ್ವಾಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ನಿರ್ಮಿಸುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಲಿದೆ.
ಹೊಸ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಈ ಕೂಲ್ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಆಫೀಸ್‌ಗೆ ಹೋಗುವಾಗ ಟೆರೆಸ್ ಮೇಲಿಂದ ಸಮಂತಾಗೆ ವಿದಾಯ ಹೇಳುತ್ತಿರುವಂತೆ ಕಾಣುತ್ತಿದೆ. ಇದು ಅಭಿಮಾನಿಗಳು ಮತ್ತು ನೆಟಿಜನ್‌ಗಳನ್ನು ಆಕರ್ಷಿಸುತ್ತಿದೆ. ಸಿನಿಮಾದ ಬಗ್ಗೆ ಕುತೂಹಲ ಹೆಚ್ಚುತ್ತಿದೆ.
'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ', 'ಡಿಯರ್ ಕಾಮ್ರೇಡ್' ಮೂಲಕ ವಿಜಯ್ ದೇವರಕೊಂಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಆದರೆ ಆ ನಂತರ ಅವರು ನಟಿಸಿದ 'ಲೈಗರ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದರೂ ಸಹ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಈ ಖುಷಿ ಮೂಲಕ ಗಮನ ಸೆಳೆಯುತ್ತಿದ್ದು, ಚಿತ್ರ ಮತ್ತೆ ಯಶಸ್ಸು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: IPL 2023: ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ
ಪುಷ್ಪಾ ಸಿನಿಮಾದ ಊ ಅಂಟಾವಾ ಸಾಂಗ್ ದೇಶದೆಲ್ಲೆಡೆ ಸದ್ದು ಮಾಡಿತು. 'ಯಶೋದಾ' ಬಾಲಿವುಡ್‌ನಲ್ಲಿಯೂ ಫುಲ್ ಕ್ರೇಜ್ ಗಳಿಸಿತು. ಸಿಟಾಡೆಲ್ ಮೂಲಕ ಸದ್ದು ಮಾಡುತ್ತಿರುವ ಸಮಂತಾ ಸದ್ಯ ಖುಷಿ ಮೂಡ್ನಲ್ಲಿದ್ದಾರೆ. ಸ್ಟಾರ್ ನಟರು ಜೊತೆಯಾಗಿ ನಟಿಸಿರುವ ಖುಷಿ ಸಿನಿಮಾ ಭಾರತದಾದ್ಯಂತ ಕುತೂಹಲ ಹುಟ್ಟಿಸಿದೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಶೂಟಿಂಗ್ಗೆ ಕೊಂಚ ಬ್ರೇಕ್ ನೀಡಿದ್ದರು. ಇದೀಗ ಮತ್ತೆ ಚಿಕಿತ್ಸೆ ಪಡೆದು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಖುಷಿ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಪ್ರೇಮಕಥೆಯ ಈ ಸಿನಿಮಾದಲ್ಲಿ ಆ್ಯಕ್ಷನ್ ಸೀನ್ಗಳೂ ಇವೆ. ಸ್ಟಂಟ್ ಕೊರಿಯೋಗ್ರಾಫರ್ ಪೀಟರ್ ಹೆನ್ ನೇತೃತ್ವದಲ್ಲಿ ನಿರ್ದೇಶನ ನಡೆಯುತ್ತಿದ್ದು, ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸುತ್ತಿದ್ದಾರೆ. ಮರಾಠಿ ನಟ ಸಚಿನ್ ಖೇಡೇಕರ್, ಜಯರಾಮ್, ಮುರಳಿ ಶರ್ಮಾ, ಅಲಿ, ಲಕ್ಷ್ಮೀ, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶರಣ್ಯ ಪ್ರದೀಪ್ ಶ್ರೀಕಾಂತ್ ಅಯ್ಯಂಗಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಕ್ವೀನ್‌ಗಿಂದು ಹುಟ್ಟುಹಬ್ಬದ ಸಂಭ್ರಮ: 'ನನ್ನಿಂದ ದುಃಖವಾಗಿದ್ದರೆ ಕ್ಷಮಿಸಿ'- ಕಂಗನಾ ರಣಾವತ್