ETV Bharat / entertainment

ಹೊಂದಿಸಿ ಬರೆಯಿರಿ ಚಿತ್ರದ ಮೆಲೋಡಿ ಹಾಡಿನಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ - ಈಟಿವಿ ಭಾರತ ಕನ್ನಡ

ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣ ಪದಪುಂಜಗಳನ್ನು ಪೋಣಿಸಿ ರಚಿಸಿರುವ ಹಾಡಿಗೆ ಜೋ ಕೋಸ್ಟ ಅದ್ಭುತ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ.

Hondisi Bareyiri Poster
ಹೊಂದಿಸಿ ಬರೆಯಿರಿ ಚಿತ್ರದ ಪೋಸ್ಟರ್​
author img

By

Published : Aug 6, 2022, 3:55 PM IST

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ಯಾಲೆಂಟ್‌ ಇರುವ ನಿರ್ದೇಶಕರು ಹಾಗು ಯುವ ನಟರ ಆಗಮನವಾಗುತ್ತಿದೆ. ಇದೀಗ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ತಾರಾಗಣ, ಕಂಟೆಂಟು, ಕ್ವಾಲಿಟಿ, ಟೀಸರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾದಿಂದ ಬದುಕಿ ಸುಮ್ಮನೆ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ.

ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣ ಪದಪುಂಜಗಳನ್ನು ಪೋಣಿಸಿ ರಚಿಸಿರುವ ಹಾಡಿಗೆ ಜೋ ಕೋಸ್ಟ ಅದ್ಭುತ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಗುಳ್ಟು ಖ್ಯಾತಿಯ ನವೀನ್ ಹಾಗೂ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಕೆ.ಜಿ.ಎಫ್ ನಂತರ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಗಳನ್ನು ಹೊಂದಿಕೊಂಡು ಸಾಗುವ ಬದುಕಿನ ಪಯಣದ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಏಳು ಯುವಕ-ಯುವತಿಯರ ಒಂದೊಂದು ಕಥೆ, ಪ್ರೀತಿ ತುಂಬಿದೆ.

ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. 'ಗುಳ್ಟು' ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

  • " class="align-text-top noRightClick twitterSection" data="">

ಕೋಸ್ಟ ಸಂಗೀತ, ಕೆ.ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು 'ಸಂಡೇ ಸಿನಿಮಾಸ್' ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದು, ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಗಜಾನನ ಆ್ಯಂಡ್ ಗ್ಯಾಂಗ್ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರ ಖ್ಯಾತಿಯ ಭಾವನಾರಾವ್ ಹೀಗೆ ಹಲವು ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ.

ಇದನ್ನೂ ಓದಿ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಎಕ್ಸ್​ಪ್ರೆಸ್​​.. ನಟ ಪ್ರಕಾಶ್ ರಾಜ್​ ಕೊಡುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.