ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ನಿತ್ಯ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಮಾಡ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಫ್ಟರ್ 2 ಇದೀಗ ಹಿಂದಿಯಲ್ಲಿ ಮತ್ತೊಂದು ಸಾಧನೆ ಮಾಡಿದೆ. ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಅಮೀರ್ ಖಾನ್ ನಟನೆಯ 'ದಂಗಲ್' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದೆ.
-
BIGGG NEWS... #KGF2 surpasses #Dangal *lifetime biz*... NOW, 2ND HIGHEST GROSSING *HINDI* FILM... Glorious march towards ₹ 400 cr begins... [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr, Wed 8.75 cr. Total: ₹ 391.65 cr. #India biz. #Hindi pic.twitter.com/PdImtreDrB
— taran adarsh (@taran_adarsh) May 5, 2022 " class="align-text-top noRightClick twitterSection" data="
">BIGGG NEWS... #KGF2 surpasses #Dangal *lifetime biz*... NOW, 2ND HIGHEST GROSSING *HINDI* FILM... Glorious march towards ₹ 400 cr begins... [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr, Wed 8.75 cr. Total: ₹ 391.65 cr. #India biz. #Hindi pic.twitter.com/PdImtreDrB
— taran adarsh (@taran_adarsh) May 5, 2022BIGGG NEWS... #KGF2 surpasses #Dangal *lifetime biz*... NOW, 2ND HIGHEST GROSSING *HINDI* FILM... Glorious march towards ₹ 400 cr begins... [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr, Wed 8.75 cr. Total: ₹ 391.65 cr. #India biz. #Hindi pic.twitter.com/PdImtreDrB
— taran adarsh (@taran_adarsh) May 5, 2022
ಹಿಂದಿ ಅವತರಣಿಕೆಯಲ್ಲಿ ಪ್ರಭಾಸ್ ನಟನೆಯ ಬಾಹುಬಲಿ 2 ಚಿತ್ರ 510.99 ಕೋಟಿ ರೂ. ಗಳಿಕೆ ಮಾಡಿದ್ದು, ದಂಗಲ್ 387.38 ಕೋಟಿ ರೂ. ಗಳಿಸಿತ್ತು. ಆದರೆ, ಇದೀಗ ಕೆಜಿಎಫ್ ಚಾಪ್ಟರ್ 2, 391.65 ಕೋಟಿ ರೂ.ಗಳಿಕೆ ಮಾಡುವ ಮೂಲಕ ದಂಗಲ್ ರೆಕಾರ್ಡ್ ಧೂಳಿಪಟ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ವಿಶ್ಲೇಷಕ ತಾರಕ್ ಆದರ್ಶ್ ಟ್ವೀಟ್ ಮಾಡಿದ್ದು, ಹಿಂದಿ ಆವತರಣಿಕೆಯಲ್ಲಿ ದಂಗಲ್ ಸಿನಿಮಾ ರೆಕಾರ್ಡ್ ಇದೀಗ ಕೆಜಿಎಫ್2 ಚಿತ್ರದಿಂದ ಬ್ರೇಕ್ ಆಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ 339.16 ಕೋಟಿ, ಅಮೀರ್ ಖಾನ್ ನಟನೆಯ ಪಿಕೆ 340.8 ಕೋಟಿ, ರಣಬೀರ್ ಕಪೂರ್ ನಟನೆಯ ಸಂಜು 342.53 ಕೋಟಿ ರೂಗಳಿಕೆ ಮಾಡಿವೆ.
ಪ್ರಪಂಚದಾದ್ಯಂತ ಅಮೀರ್ ಖಾನ್ ನಟನೆಯ ದಂಗಲ್ 2024 ಕೋಟಿ ರೂ. ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದ್ದು, ಪ್ರಭಾಸ್ ನಟನೆಯ ಬಾಹುಬಲಿ-2, 1,810 ಕೋಟಿ ರೂ. ಹಾಗೂ ಯಶ್ ನಟನೆಯ ಕೆಜಿಎಫ್ ಚಾಪ್ಟರ್-2 ಇಲ್ಲಿಯವರೆಗೆ 1,056 ಕೋಟಿ ರೂ. ಗಳಿಕೆ ಮಾಡಿದೆ.