ETV Bharat / entertainment

ಒಂದೇ ವಾರದಲ್ಲಿ ₹800 ಕೋಟಿ ಗಳಿಕೆ; ಸಿನಿಮಾ ವೀಕ್ಷಿಸಿದ ದ.ಭಾರತದ 1.5 ಕೋಟಿಗೂ ಹೆಚ್ಚು ಜನ!

ಎಂಟು ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ 800 ಕೋಟಿ ಕಲೆಕ್ಷನ್‌ ಮಾಡಿದೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನ ಒಂದು ವಾರದಲ್ಲಿ ಸಿನಿಮಾ‌ ನೋಡಿದ್ದಾರೆ ಎನ್ನಲಾಗಿದೆ.

ಒಂದೇ ವಾರದಲ್ಲಿ ಬಹುದೊಡ್ಡ ಸಾಧನೆ ಮಾಡಿದ KGF Chapter2 : ಗಳಿಸಿದ್ದೆಷ್ಟು, ವೀಕ್ಷಕರೆಷ್ಟು!?

author img

By

Published : Apr 22, 2022, 3:56 PM IST

ನಟ ಯಶ್ ಅಭಿನಯ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಹಾಗು ನಿರ್ಮಾಪಕ ವಿಜಯ್ ಕಿರಂಗದೂರ್ ಅದ್ಧೂರಿ ವೆಚ್ಚದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡುತ್ತಿದೆ. 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್‌ನಲ್ಲೂ ವಿಶೇಷ ದಾಖಲೆ ಬರೆಯುತ್ತಿದೆ.

ಏಪ್ರಿಲ್ 14ರಂದು ಸಿನಿಮಾ ಬಿಡುಗಡೆ ಆಗಿದ್ದು, ನಿನ್ನೆಗೆ ಒಂದುವಾರದ ಯಶಸ್ವಿ ಪ್ರದರ್ಶನವಾಗಿದೆ. ಈ ಸಿನಿಮಾ ವಿಶ್ವಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಹಿಂದೆ ಸಂಸ್ಥೆ ಹೇಳಿದಂತೆ ವಿದೇಶ ಹೊರತುಪಡಿಸಿ ಭಾರತದಲ್ಲೇ ಮೊದಲನೇ ದಿನ 134.5 ಕೋಟಿ, ಎರಡನೇ ದಿನ ಭಾರತದಲ್ಲಿ 240 ಕೋಟಿ ಸಂಪಾದಿಸಿತ್ತು. ನಾಲ್ಕನೇ ದಿನದಲ್ಲಿ ವಿಶ್ವಾದ್ಯಂತ 540 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿತ್ತು.

ಸಾವಿರ ಕೋಟಿ ಗಡಿಯತ್ತ: ಈಗ ಎಂಟು ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ 800 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಸಾವಿರ ಕೋಟಿಯ ಗಡಿ ತಲುಪುತ್ತಿದೆ. ದಕ್ಷಿಣ ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನ ಒಂದು ವಾರದಲ್ಲಿ ಈ ಸಿನಿಮಾ‌ ನೋಡಿದ್ದಾರೆ. ಕರ್ನಾಟಕದಲ್ಲಿ 40 ಲಕ್ಷ ಜನ, ತೆಲುಗಿನಲ್ಲಿ 50 ಲಕ್ಷ ಜನ,‌ ತಮಿಳುನಾಡಿನಲ್ಲಿ 30 ಲಕ್ಷ ಜನ, ‌ಕೇರಳದಲ್ಲಿ 25 ಲಕ್ಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

ಇದನ್ನೂ ಓದಿ: ಹಿಜಾಬ್​ ಹೈಡ್ರಾಮಾ: ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಉಡುಪಿ ಶಾಸಕ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.