ETV Bharat / entertainment

ಕೆಜಿಎಫ್ ತಾತ ಖ್ಯಾತಿಯ ನಟ ಕೃಷ್ಣ ಜಿ ರಾವ್ ಇನ್ನಿಲ್ಲ - ನಟ ಕೃಷ್ಣ ಜಿ ರಾವ್

ಕೆಜಿಎಫ್ ತಾತ ಖ್ಯಾತಿಯ ನಟ ಕೃಷ್ಣ ಜಿ ರಾವ್ ನಿಧನ ಹೊಂದಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

KGF actor krishna rao passes away
ಕೆಜಿಎಫ್ ತಾತ ಖ್ಯಾತಿಯ ನಟ ಕೃಷ್ಣ ಜಿ ರಾವ್ ಇನ್ನಿಲ್ಲ
author img

By

Published : Dec 7, 2022, 4:55 PM IST

Updated : Dec 7, 2022, 5:42 PM IST

ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಗಳಿಸಿ, ಕೆಜಿಎಫ್ ತಾತ ಎಂದೇ ಹೆಸರುವಾಸಿಯಾಗಿದ್ದ ನಟ ಕೃಷ್ಣ ಜಿ ರಾವ್(73) ಅವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆ ಐಸಿಯು‌ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಬುಧವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ ಎಂದು ಅವರ ಸಹೋದರ ನಾಗೇಂದ್ರ ರಾವ್ ತಿಳಿಸಿದ್ದಾರೆ. ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿನ ಪಾತ್ರವು ಕೃಷ್ಣ ಅವರಿಗೆ ದೊಡ್ಡಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಕೆಜಿಎಫ್ ಯಶಸ್ಸಿನ ಬಳಿಕ ಕೃಷ್ಣ ಜಿ ರಾವ್ ಅವರು ಅವರು ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದರು. 'ನ್ಯಾನೋ ನಾರಾಯಣಪ್ಪ' ಚಿತ್ರದಲ್ಲಿ ಲೀಡ್ ರೋಲ್​ ಮಾಡಿದ್ದರು. ಮಲೆಯಾಳಂ ಸಿನಿಮಾ 'ಧೂಮಂ' ಕೃಷ್ಣ ಅವರು ನಟಿಸಿದ ಕೊನೆಯ ಚಿತ್ರವಾಗಿದೆ.

kgf-actor-krishna-rao-passes-away
ಕೆಮೆಸ್ಟ್ರಿ ಕರಿಯಪ್ಪ ಚಿತ್ರದಲ್ಲಿ ನಟ ಕೃಷ್ಣ ಜಿ ರಾವ್

ನಾಳೆ ಬೆಳಗ್ಗೆ ಬೆಂಗಳೂರಿನ ಬ್ಯಾಂಕ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಕೃಷ್ಣ ಜಿ ರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಇರಲಿದೆ. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ ಎಂದು ಅವರ ಸಹೋದರ ನಾಗೇಂದ್ರ ರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ತಾತ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು: ಐಸಿಯುವಿನಲ್ಲಿ ಚಿಕಿತ್ಸೆ

Last Updated : Dec 7, 2022, 5:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.