ETV Bharat / entertainment

ಭಾಷಾ ವಿವಾದದ ನಡುವೆ 'ಕೆಜಿಎಫ್​-2' ದಾಖಲೆ; ಹಿಂದಿಯಲ್ಲೇ ಅತಿ ಹೆಚ್ಚು ಗಳಿಸಿದ 3ನೇ ಸಿನಿಮಾ! - ಕೆಜಿಎಫ್​-2 ದಾಖಲೆ

ಹಿಂದಿ ಭಾಷೆ ವಿಚಾರವಾಗಿ ನಿನ್ನೆಯಿಂದಲೂ ವಾದ-ವಿವಾದ ನಡೆಯುತ್ತಿದೆ. ಇದರ ಮಧ್ಯೆ ನಟ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಹಿಂದಿ ಅವತರಣಿಕೆಯಲ್ಲೇ ಹೊಸ ದಾಖಲೆ ಬರೆದಿದೆ.

KGF 2 is third highest grossing film
KGF 2 is third highest grossing film
author img

By

Published : Apr 28, 2022, 5:15 PM IST

ಮುಂಬೈ: ನಿನ್ನೆಯಿಂದ ಹಿಂದಿ ಭಾಷೆ ವಿಚಾರವಾಗಿ ವಿವಾದ ಉದ್ಬವವಾಗಿದ್ದು, ಬಾಲಿವುಡ್ ನಟ ಅಜಯ್ ದೇವಗನ್​​ ಟ್ವೀಟ್‌ಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗ್ತಿದೆ. ಇದರ ಮಧ್ಯೆ ಸ್ಯಾಂಡಲ್​ವುಡ್ ನಟ ಯಶ್ ನಟಿಸಿರುವ ಕೆಜಿಎಫ್​​ ಚಾಪ್ಟರ್​- 2 ಹಿಂದಿ ಚಿತ್ರರಂಗದಲ್ಲೇ ವಿನೂತನ ದಾಖಲೆ ನಿರ್ಮಿಸಿದೆ. ಪ್ರಭಾಸ್​ ಅಭಿನಯದ ಬಾಹುಬಲಿ 2 ಮತ್ತು ಅಮೀರ್ ಖಾನ್ ನಟನೆಯ ದಂಗಲ್​ ಚಿತ್ರದ ಬಳಿಕ ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಸಿನಿಮಾ ಆಗಿ ಹೊರಹೊಮ್ಮಿದೆ.

ವಿಶ್ವದಾದ್ಯಂತ ಏಪ್ರಿಲ್​ 14ರಂದು ರಿಲೀಸ್​ ಆಗಿರುವ ಈ ಸಿನಿಮಾ ಈಗಾಗಲೇ ಸಾವಿರ ಕೋಟಿಗೂ ಅಧಿಕ ಹಣ ಗಳಿಸಿದೆ. ಇದರಲ್ಲಿ ಹಿಂದಿ ಅವತರಣಿಕೆಯಲ್ಲೇ 343.13 ಕೋಟಿ ರೂಪಾಯಿ ಸಂಪಾದಿಸಿದೆ ಎಂದು ತಿಳಿದು ಬಂದಿದೆ. ಪ್ರಭಾಸ್ ನಟನೆಯ ಬಾಹುಬಲಿ 2 ಹಿಂದಿಯಲ್ಲಿ 510.99 ಕೋಟಿ ರೂ. ಹಾಗೂ ಅಮೀರ್ ಖಾನ್ ನಟನೆಯ ದಂಗಲ್​​ 387.38 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಕೆಜಿಎಫ್​ ಚಾಪ್ಟರ್​ 2 ಅನೇಕ ದಾಖಲೆಗಳನ್ನು ಬರೆಯುತ್ತಿದ್ದು, ಟೈಗರ್ ಜಿಂದಾ ಹೈ, ಪಿಕೆ ಹಾಗೂ ಸಂಜು ಚಿತ್ರ ನಿರ್ಮಿಸಿದ್ದ ದಾಖಲೆಗಳನ್ನು ಪುಡಿಗಟ್ಟಿದೆ.

ಇದನ್ನೂ ಓದಿ: 'ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ': ಅಜಯ್​ ದೇವಗನ್​ಗೆ ಸೋನು ಸೂದ್ ತಿರುಗೇಟು

ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಚಿತ್ರ 339.16 ಕೋಟಿ ರೂ. ಅಮೀರ್ ಖಾನ್ ನಟನೆಯ ಪಿಕೆ 340.08 ಕೋಟಿ ರೂ ಹಾಗೂ ರಣಬೀರ್ ಕಪೂರ್​ ನಟನೆಯ ಸಂಜು ಚಿತ್ರ 342.53 ಕೋಟಿ ರೂ. ಗಳಿಕೆ ಮಾಡಿದ್ದವು. ಆದರೆ, ಇದೀಗ ಈ ದಾಖಲೆಗಳು ಕೆಜಿಎಫ್​​ 2 ಎದುರು ಬ್ರೇಕ್​ ಆಗಿವೆ.

ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ವಿಶ್ಲೇಷಕ ತಾರಕ್​ ಆದರ್ಶ್​ ಎಂಬುವವರು ಟ್ವೀಟ್ ಸಹ ಮಾಡಿದ್ದು, ಹಿಂದಿಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ 3ನೇ ಚಿತ್ರವಾಗಿ ಕೆಜಿಎಫ್​​ 2 ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 14ರಂದು ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೆಜಿಎಫ್​ ಚಾಪ್ಟರ್ 2 ಚಿತ್ರ ರಿಲೀಸ್​ ಆಗಿದ್ದು ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್​​ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.