ETV Bharat / entertainment

ಬಹುನಿರೀಕ್ಷಿತ 'ಜವಾನ್​' ರಿಲೀಸ್​: ಎಸ್​ಆರ್​ಕೆ ಸಿನಿಮಾ ಸ್ವಾಗತಿಸಲು ಥಿಯೇಟರ್​ ಮುಂದೆ ಅಭಿಮಾನಿಗಳ ದಂಡು - ಈಟಿವಿ ಭಾರತ ಕನ್ನಡ

Jawan Release: ಬಾಲಿವುಡ್​ ನಟ ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾ ಇಂದು ತೆರೆಕಂಡಿದೆ.

Jawan Release
ಜವಾನ್
author img

By ETV Bharat Karnataka Team

Published : Sep 7, 2023, 9:45 AM IST

Updated : Sep 7, 2023, 9:53 AM IST

ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರದಲ್ಲಿ ನಯನತಾರಾ, ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್​ಆರ್​ಕೆ ಅವರ ಆಕ್ಷನ್​ ಥ್ರಿಲ್ಲರ್​ ಚಿತ್ರದ ಮುಂಗಡ ಟಿಕೆಟ್​ ಬುಕ್ಕಿಂಗ್​ ಅನ್ನು ಪರಿಗಣಿಸಿ ಹೇಳುವುದಾದರೆ, ಹಿಂದಿ ಚಿತ್ರವೊಂದು ಅತ್ಯಧಿಕ ಓಪನಿಂಗ್​ ಪಡೆಯುವ ನಿರೀಕ್ಷೆಯಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು ಚಿತ್ರ ಪ್ರೇಮಿಗಳು ಥಿಯೇಟರ್​ನತ್ತ ಆಗಮಿಸುತ್ತಿದ್ದಾರೆ.

ಶಾರುಖ್​ ಟ್ವೀಟ್​: ಸಿನಿಮಾ ಥಿಯೇಟರ್​ ಮುಂದೆ ಎಸ್​ಆರ್​ಕೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದನ್ನು ಕಂಡ ಶಾರುಖ್​ ಖಾನ್​ ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಧನ್ಯವಾದವನ್ನು ತಿಳಿಸಲು ಎಕ್ಸ್​ (ಹಿಂದಿನ ಟ್ವಿಟರ್​) ವೇದಿಕೆಯನ್ನು ಬಳಸಿಕೊಂಡರು.

ಅಭಿಮಾನಿಗಳ 'ಜವಾನ್​' ಸಂಭ್ರಮಾಚರಣೆಯ ವಿಡಿಯೋವನ್ನು ಹಂಚಿಕೊಂಡ ನಟ, "ಲವ್​ ಯು ಬಾಯ್ಸ್​ ಆಂಡ್​ ಗರ್ಲ್ಸ್​. ನೀವು ಈ ಮನರಂಜನೆಯನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವೆಲ್ಲರೂ ಥಿಯೇಟರ್​ಗೆ ಹೋಗುವುದನ್ನು ನೋಡಲು ನಾನು ಎಚ್ಚರವಾಗಿದ್ದೆ. ನಿಮ್ಮ ದೊಡ್ಡ ಪ್ರೀತಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಥಿಯೇಟರ್​ ಮುಂದೆ ಸಂಭ್ರಮಾಚರಣೆ: ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಜವಾನ್​ ಕ್ರೇಜ್​ ಹೆಚ್ಚಿದೆ. ಪಠಾಣ್​ ನಂತರ ಬರುತ್ತಿರುವ ಎಸ್​ಆರ್​ಕೆಯ ಈ ಸಿನಿಮಾವನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಥಿಯೇಟರ್​ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾರುಖ್​ ಖಾನ್​ರನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಲು ಫ್ಯಾನ್ಸ್​ ಉತ್ಸುಕರಾಗಿದ್ದರು. ದೇಶದ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಫಸ್ಟ್​ ಶೋಗೆ ಸಿನಿ ಪ್ರೇಮಿಗಳು ಥಿಯೇಟರ್​ಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದವು.

ದೇಶದೆಲ್ಲೆಡೆ 'ಜವಾನ್​' ಕ್ರೇಜ್​ ಎಷ್ಟಿದೆ ಅನ್ನೋದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳೇ ಸಾಕ್ಷಿ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ಎಸ್​ಆರ್​ಕೆ ಸಿನಿಮಾಗಿರುವ ನಿರೀಕ್ಷೆಯನ್ನು ತೋರಿಸುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಥಿಯೇಟರ್​ ಮುಂದೆ ಅಭಿಮಾನಿಗಳು ಧೋಲ್​ ಬೀಟ್​ಗೆ ನೃತ್ಯ ಮಾಡುವ ಮೂಲಕ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

  • Love u boys and girls I hope u enjoy the entertainment. Kept awake to see u go to the theater. Big love and thanks https://t.co/WYOKRfqspG

    — Shah Rukh Khan (@iamsrk) September 7, 2023 " class="align-text-top noRightClick twitterSection" data=" ">

ಇದನ್ನೂ ಓದಿ: Jawan: 1 ಮಿಲಿಯನ್​ಗೂ ಹೆಚ್ಚು​ ಮುಂಗಡ ಟಿಕೆಟ್​ ಮಾರಾಟ - 125 ಕೋಟಿ ರೂ. ಕಲೆಕ್ಷನ್​ ಸಾಧ್ಯತೆ!

ಎಕ್ಸ್​ನಲ್ಲಿ ಅಭಿಮಾನಿಯೊಬ್ಬರು, "ನಾನು ಯಾವುದೇ ಸಿನಿಮಾ ತಾರೆಯರಿಗೆ ಈ ರೀತಿಯ ಕ್ರೇಜ್​ ಅನ್ನು ನೋಡಿಲ್ಲ. ಅದ್ಭುತ, ನಂಬಲು ಅಸಾಧ್ಯ. ಸಾಮೂಹಿಕ ಆಚರಣೆ ಎಲ್ಲೆಡೆ ನಡೆಯುತ್ತಿದೆ #ಜವಾನ್​" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಓ ದೇವರೆ, ಇದು ನಿಜಕ್ಕೂ ನಂಬಲು ಅಸಾಧ್ಯ. #ಜವಾನ್​" ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಬೈನ ಕೆಲವು ಭಾಗಗಳಲ್ಲಿ ಬೆಳಗಿನ ಜಾವ 5.45 ಗಂಟೆಯಿಂದಲೇ ಸಿನಿ ಪ್ರೇಮಿಗಳು ಥಿಯೇಟರ್​ನತ್ತ ಆಗಮಿಸುತ್ತಿದ್ದಾರೆ. ಜವಾನ್​ ಕ್ರೇಜ್​ ಹೊಸ ಇತಿಹಾಸವನ್ನು ಬರೆಯಲು ಸಿದ್ಧವಾಗಿದೆ. ಈ ಹಿಂದೆ ಮುಂಬೈ, ಬಿಹಾರದ ಮೋತಿಹಾರಿ ಹಾಗೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಂತಹ ಹಲವು ಖ್ಯಾತ ನಗರಗಳಲ್ಲಿ ಸಿನಿ ಪ್ರೇಮಿಗಳು ಹೆಚ್ಚಿರುವ ಕಾರಣ, ಅವರ ಬೇಡಿಕೆಯಂತೆ ಬೆಳಗ್ಗೆ 5 ಗಂಟೆಗೆ ಮುಂಚಿತವಾಗಿ ಜವಾನ್​ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಆದರೆ, ಪಶ್ಚಿಮ ಬಂಗಾಳದ ರಾಯಗಂಜ್​ ನಗರವು ಈ ಎಲ್ಲಾ ನಗರಗಳನ್ನು ಹಿಂದಿಕ್ಕಿ 2.15ಕ್ಕೆ ಪ್ರದರ್ಶನವನ್ನು ನಿಗದಿಪಡಿಸಿದೆ. ಇದು ಶಾರುಖ್​ ಖಾನ್​ ಮತ್ತು ನಯನತಾರಾ ಚಿತ್ರಕ್ಕೆ ಇರುವ ಅಗಾಧ ಪ್ರತಿಕ್ರಿಯೆ ಮತ್ತು ತಾರೆಯರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಇದಕ್ಕೂ ಮೊದಲು, ಎಸ್​ಆರ್​ಕೆ ನಟನೆಯ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು 2 ಗಂಟೆಯಿಂದಲೇ ಥಿಯೇಟರ್​ಗಳ ಮುಂದೆ ಟಿಕೆಟ್​ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ವರದಿಯಾಗಿದೆ. ಒಟ್ಟಿನಲ್ಲಿ ಇಂದು ಸಿನಿಮಾಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಫ್ಯಾಮಿಲಿಯೊಂದಿಗೆ ಜವಾನ್​ ವೀಕ್ಷಿಸಲಿರುವ ಮಹೇಶ್​ ಬಾಬು... ಟಾಲಿವುಡ್​ ಸ್ಟಾರ್ ಜೊತೆ ಸಿನಿಮಾ ನೋಡುತ್ತೇನೆ ಎಂದ ಶಾರುಖ್​ ಖಾನ್

Last Updated : Sep 7, 2023, 9:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.