ETV Bharat / entertainment

ಗಣೇಶ್​ ನೇತೃತ್ವದ ಗಂಗಾ ವಾರಿಯರ್ಸ್ ಕೆಸಿಸಿ ಚಾಂಪಿಯನ್​: ಮೂರು ದಿನಗಳ ಟೂರ್ನಿಗೆ ವರ್ಣರಂಜಿತ ತೆರೆ - film actors cricket tourney

ಕರ್ನಾಟಕ ಚಲನಚಿತ್ರ ಕಪ್​ ಅದ್ಧೂರಿಯಾಗಿ ತೆರೆ ಕಂಡಿತು. ಶಿವರಾಜ್​ಕುಮಾರ್​ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಸೋಲಿಸಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಯಿತು.

ಕೆಸಿಸಿ ಚಾಂಪಿಯನ್​
ಕೆಸಿಸಿ ಚಾಂಪಿಯನ್​
author img

By ETV Bharat Karnataka Team

Published : Dec 26, 2023, 7:12 AM IST

Updated : Dec 26, 2023, 10:48 AM IST

ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ನಾಲ್ಕನೇ ಆವೃತ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗುವ ಮೂಲಕ ವರ್ಣರಂಜಿತ ಟೂರ್ನಿಗೆ ತೆರೆಬಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧದ ವಾರಿಯರ್ಸ್ 3 ರನ್‌ಗಳ ಅಂತರದ ಜಯ ಸಾಧಿಸಿತು.

ಮೂರು ದಿನಗಳ ಕಾಲ ನಡೆದ ಸಿನಿಮಾ ತಾರೆಯರ ಕ್ರಿಕೆಟ್​​ ಹಬ್ಬಕ್ಕೆ ಕ್ರಿಕೆಟ್​ ಪ್ರೇಮಿಗಳು, ಸಿನಿಮಾ ಕಲಾವಿದರ ಸಮ್ಮುಖದಲ್ಲಿ ರೋಚಕವಾಗಿ ಮುಕ್ತಾಯಗೊಂಡಿತು. ಗಣೇಶ್​ ನೇತೃತ್ವದ ಗಂಗಾ ವಾರಿಯರ್ಸ್​ ತಂಡ ಕಪ್​ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿತು.

ರೋಚಕ ಫೈನಲ್​ ಪಂದ್ಯ: ಗೋಲ್ಡನ್​ ಸ್ಟಾರ್​ ಗಣೇಶ್​ ನೇತೃತ್ವದ ಗಂಗಾ ವಾರಿಯರ್ಸ್​ ಮತ್ತು ಶಿವರಾಜ್​ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ನಡುವಿನ ಫೈನಲ್​ ಪಂದ್ಯ ರೋಚಕವಾಗಿತ್ತು. ಮೊದಲು ಬ್ಯಾಟ್ ಮಾಡಿದ ಗಣೇಶ್ ತಂಡ ಆರಂಭಿಕ ಆಘಾತದ ನಡುವೆಯೂ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿತು. 32 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಅವಿನಾಶ್ ಚೇತರಿಕೆ ನೀಡಿದರು. 12 ಎಸೆತಗಳಲ್ಲಿ 40 ರನ್​ ಮಾಡಿದರು. ಕರಣ್ 25 ಹಾಗೂ ಪ್ರಿನ್ಸ್ 16 ರನ್ ಗಳಿಸಿದರು. ಇದರಿಂದ ತಂಡ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು. ರಾಷ್ಟ್ರಕೂಟ ಪ್ಯಾಂಥರ್ಸ್ ಪರವಾಗಿ ಬಿಗುವಿನ ಬೌಲಿಂಗ್​ ಮಾಡಿದ ಪ್ರದೀಪ್ 2/2, ನಾಯಕ ಶಿವರಾಜ್ ಕುಮಾರ್ 12/1 ಹಾಗೂ ಶ್ರೀಕಾಂತ್ 24/1 ವಿಕೆಟ್ ಪಡೆದರು.

ಗೆಲುವಿನ ಸಂಭ್ರಮದಲ್ಲಿ ಗಣೇಶ್​ ನೇತೃತ್ವದ ಗಂಗಾ ವಾರಿಯರ್ಸ್​

ಹೋರಾಡಿ ಕೊನೆಯಲ್ಲಿ ಸೋತ ಪ್ಯಾಂಥರ್ಸ್​: ಸವಾಲಿನ ಗುರಿ ಬೆನ್ನಟ್ಟಿದ ಶಿವಣ್ಣ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್​ ಹೋರಾಟ ನಡೆಸಿ ಕೊನೆಯಲ್ಲಿ ಗೆಲುವನ್ನು ಕೈಚೆಲ್ಲಿತು. ಆರಂಭಿಕ, ಭಾರತದ ಮಾಜಿ ಕ್ರಿಕೆಟರ್​ ಸುರೇಶ್ ರೈನಾ ಹಾಗೂ ಪ್ರದೀಪ್ ಜೋಡಿ 85 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. 29 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಮುನ್ನುಗ್ಗುತ್ತಿದ್ದ ಸುರೇಶ್ ರೈನಾ (51) ಪ್ರಿನ್ಸ್ ಎಸೆದ 9ನೇ ಓವರ್‌ನಲ್ಲಿ ಪೃಥ್ವಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇವರ ಬೆನ್ನಲ್ಲೇ ಬಂದ ದಿಲೀಪ್ ಕೆಂಪೇಗೌಡ (10) ಅದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. 24 ಎಸೆತಗಳಲ್ಲಿ 39 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪ್ರದೀಪ್ ತಂಡದ ಗೆಲುವಿಗೆ 7 ರನ್ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು.

ಇದರಿಂದ ತಂಡ ಗೆಲುವಿನ ಅಂಚಿನಲ್ಲಿ ಎಡವಿತು. ಅಂತಿಮವಾಗಿ ರಾಷ್ಟ್ರಕೂಟ ಪ್ಯಾಂಥರ್ಸ್ 4 ವಿಕೆಟ್‌ ನಷ್ಟಕ್ಕೆ 108 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಗಂಗಾ ವಾರಿಯರ್ಸ್​ 3 ರನ್​ಗಳ ಜಯ ಗಳಿಸಿತು. ವಾರಿಯರ್ಸ್ ಪರ ಪ್ರಿನ್ಸ್ 24/2 ಹಾಗೂ ಪೃಥ್ವಿ 26/2 ವಿಕೆಟ್ ಪಡೆದು ಮಿಂಚಿದರು.

ಶಿವಣ್ಣ ನೇತೃತ್ವದ ತಂಡಕ್ಕೆ ಡಿಕೆ ಶಿವಕುಮಾರ್​ ಹಸ್ತಲಾಘವ

ವರ್ಣರಂಜಿತ ತೆರೆ: ಮೂರು ದಿನ ನಡೆದ ಕ್ರಿಕೆಟ್​ ಪಂದ್ಯಾವಳಿಗೆ ವರ್ಣರಂಜಿತ ತೆರೆ ಕೂಡ ಬಿತ್ತು. ಸಮಾರೋಪ ಸಮಾರಂಭದಲ್ಲಿ ಶಿವಣ್ಣ, ಗಣೇಶ್​, ಉಪೇಂದ್ರ, ದುನಿಯಾ ವಿಜಯ್​, ಸುದೀಪ್​ ಹಾಡುಗಳಿಗೆ ನೃತ್ಯ ಮಾಡಿದರು. ಆಲ್​ ಓಕೆ ಅಲೋಕ್​, ಚಂದನ್​ ಶೆಟ್ಟಿ ಅವರ ರ್ಯಾಪ್​ ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿದವು. ಸಮಾರಂಭದಲ್ಲಿ ಅನೇಕ ನಟ, ನಟಿಯರು ಪಾಲ್ಗೊಂಡಿದ್ದರು. ರುಕ್ಮಿನಿ ವಸಂತ್​, ಚೈತ್ರಾ ಆಚಾರ್​, ಸಪ್ತಮಿ ಗೌಡ, ಮಾಲಾಶ್ರೀ, ಪುತ್ರಿ ಆರಾಧನಾ, ರಾಗಿಣಿ, ಭಾವನಾ, ಅನುಪಮಾ ಸೇರಿದಂತೆ ಮೊದಲಾದ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ತಂದರು.

ಇದನ್ನೂ ಓದಿ: 'ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ': ಫೈನಲ್ ಪಂದ್ಯ ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

Last Updated : Dec 26, 2023, 10:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.