ETV Bharat / entertainment

ಕೌಟಿಲ್ಯ ಟ್ರೈಲರ್‌ಗೆ ರಕ್ಷಿತ್ ಶೆಟ್ಟಿ, ಪ್ರೇಮ್ ಮೆಚ್ಚುಗೆ: ಆಗಸ್ಟ್ 26ಕ್ಕೆ ಚಿತ್ರ ಬಿಡುಗಡೆ - jogi prem

ಕೌಟಿಲ್ಯ ಟ್ರೈಲರ್ ರಿಲೀಸ್ ಆಗಿದೆ. ಜೋಗಿ ಪ್ರೇಮ್ ಹಾಗು ರಕ್ಷಿತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kautilya trailer released
ಕೌಟಿಲ್ಯ ಟ್ರೈಲರ್ ರಿಲೀಸ್
author img

By

Published : Aug 17, 2022, 4:47 PM IST

ಶನಿ ಹಾಗೂ ಮಹಾಕಾಳಿ ಧಾರಾವಾಹಿಗಳಲ್ಲಿ ನಟಿಸಿರುವ, ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಅರ್ಜುನ್ ರಮೇಶ್ 'ಕೌಟಿಲ್ಯ' ಸಿನಿಮಾ ಮೂಲಕ ಬಿಗ್ ಸ್ಕ್ರೀನ್​​ಗೆ ಎಂಟ್ರಿ ಕೊಡುತ್ತಿದ್ದಾರೆ. ಪೋಸ್ಟರ್ ಹಾಗೂ ಹಾಡುಗಳಿಂದಲೇ ಪ್ರೇಕ್ಷಕರನ್ನು ಇಂಪ್ರೇಸ್ ಮಾಡುತ್ತಿರುವ 'ಕೌಟಿಲ್ಯ' ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್​ಗೆ ಜೋಗಿ ಪ್ರೇಮ್ ಹಾಗು ರಕ್ಷಿತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಕೌಟಿಲ್ಯ ಅರ್ಥಶಾಸ್ತ್ರದ ಪಿತಾಮಹ. ಅರ್ಥಶಾಸ್ತ್ರದ ಒಂದು ಎಳೆಯನ್ನಿಟ್ಟುಕೊಂಡು‌ ಚಿತ್ರಕಥೆ ಹೆಣೆಯಲಾಗಿದೆ. ಪ್ರಸ್ತುತ ಜನರು ಚಿತ್ರ ನೋಡುವ ರೀತಿ ಸಂಪೂರ್ಣ ಬದಲಾಗಿದೆ. ಜನ ಒಳ್ಳೆಯ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಖಂಡಿತವಾಗಿಯೂ ಜನರ ಮನಸ್ಸಿಗೆ ಹತ್ತಿರವಾಗುವ ಉತ್ತಮ ಕಂಟೆಂಟ್ ಕೌಟಿಲ್ಯ ಚಿತ್ರದಲ್ಲಿದೆ ಎಂದು ನಿರ್ದೇಶಕ ಪ್ರಾಭಾಕರ್ ಶೇರಖಾನೆ ತಿಳಿಸಿದ್ದಾರೆ.

ಅರ್ಜುನ್ ರಮೇಶ್ ಜೋಡಿಯಾಗಿ ಮಹಾಕಾಳಿ ಧಾರಾವಾಹಿಯಲ್ಲಿ ದೇವಿ ಪಾತ್ರ ಮಾಡಿದ್ದ ಪ್ರಿಯಾಂಕ ಚಿಂಚೋಳಿ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನೀನಾಸಂ ಅಶ್ವತ್, ಹರಣಿ, ರಘು ಪಾಂಡೇಶ್ವರ್, ಸೂರ್ಯ ಪ್ರವೀಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಶಿಷ್ಯ ಅಶ್ವಿನ್ ಗಂಗರಾಜು ನಿರ್ದೇಶನದಲ್ಲಿ 1770 ಸಿನಿಮಾ

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗೌಸ್ ಫಿರ್ ಹಾಗೂ ಅರ್ಜುನ್ ರಮೇಶ್ ಹಾಡುಗಳನ್ನು ಬರೆದಿದ್ದು, ಕಿರಣ್ ಕೃಷ್ಣಮೂರ್ತಿ ಸಂಗೀತ ನೀಡಿದ್ದಾರೆ. ನೌಶದ್ ಆಲಮ್ ಛಾಯಾಗ್ರಹಣ ಹಾಗೂ ರಾಜ್ ಶಿವ ಸಂಕಲನ ಈ ಚಿತ್ರಕ್ಕಿದೆ. ಶ್ರೀ ಕಲ್ಲೂರು ಆಂಜನೇಯ ಮೂವೀಸ್ ಲಾಂಛನದಲ್ಲಿ ವಿಜೇಂದ್ರ ಬಿ ಎ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದು, ಈಗ ಟ್ರೈಲರ್ ಸದ್ದು ಮಾಡುತ್ತಿದೆ. ಇದೇ ಆಗಸ್ಟ್ 26ರಂದು ಕೌಟಿಲ್ಯ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.