ETV Bharat / entertainment

ಮೆರಿ ಕ್ರಿಸ್ಮಸ್ ಟ್ರೇಲರ್​: ಕತ್ರಿನಾ, ವಿಜಯ್​​ ಸೇತುಪತಿ ಹೊಸ ಸಿನಿಮಾ ಕುತೂಹಲ - ವಿಜಯ್ ಸೇತುಪತಿ

2024ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ಮೆರಿ ಕ್ರಿಸ್ಮಸ್​​​​ನ ಟ್ರೇಲರ್​ಇಂದು ಬಿಡುಗಡೆಯಾಗಿದೆ.

Merry christmas trailer
ಮೇರಿ ಕ್ರಿಸ್ಮಸ್ ಟ್ರೇಲರ್
author img

By ETV Bharat Karnataka Team

Published : Dec 20, 2023, 8:09 PM IST

ಬಾಲಿವುಡ್​ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಮತ್ತು ಸೌತ್​ ಸೂಪರ್​ ಸ್ಟಾರ್ ವಿಜಯ್ ಸೇತುಪತಿ ಅಭಿನಯದ ಮೆರಿ ಕ್ರಿಸ್ಮಸ್ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ. 2024ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮೇರಿ ಕ್ರಿಸ್ಮಸ್​​​​ನ ಅಧಿಕೃತ ಟ್ರೇಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರ ಕುತೂಹಲವೂ ಹೆಚ್ಚಿದೆ. ಇದಕ್ಕೂ ಮುನ್ನ ಶ್ರೀರಾಮ್ ರಾಘವನ್ ನಿರ್ದೇಶನದ ಚಿತ್ರದ ಎರಡು ಪೋಸ್ಟರ್​ಗಳನ್ನು ಅನಾವರಣಗೊಳಿಸಿ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಲಾಗಿತ್ತು. 2024ರ ಜನವರಿ 12ರಂದು ಸಿನಿಮಾ ಬಿಡುಗಡೆ ಆಗಲಿದೆ.

ನಟ ವಿಜಯ್ ಸೇತುಪತಿ ಅವರು ತಮ್ಮ ಮುಂಬರುವ ಚಿತ್ರದ ಟ್ರೇಲರ್​ ಅನ್ನು ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​​ನಲ್ಲಿ ಅನಾವರಣಗೊಳಿಸಿದರು. ಟಿಪ್ಸ್ ಫಿಲ್ಮ್ಸ್ ಮತ್ತು ಮ್ಯಾಚ್ ಬಾಕ್ಸ್ ಪಿಕ್ಚರ್ಸ್ ನಿರ್ಮಿಸಿರುವ ಮೇರಿ ಕ್ರಿಸ್ಮಸ್ ಒಂದು ಥ್ರಿಲ್ಲರ್ ಆ್ಯಂಡ್​ ಲವ್​ಸ್ಟೋರಿಯುಳ್ಳ ಸಿನಿಮಾವಾಗಿದ್ದು, ಟ್ರೇಲರ್​ ಕಥೆಯ ಸುಳಿವು ಬಿಟ್ಟುಕೊಟ್ಟಿದೆ.

  • " class="align-text-top noRightClick twitterSection" data="">

'ಮೆರಿ ಕ್ರಿಸ್ಮಸ್' ಶ್ರೀರಾಮ್, ಕತ್ರಿನಾ ಕೈಫ್​​ ಮತ್ತು ವಿಜಯ್ ಸೇತುಪತಿ ಕಾಂಬೋದ ಮೊದಲ ಸಿನಿಮಾ. ಇದೇ ಮೊದಲ ಬಾರಿ ಕತ್ರಿನಾ ಕೈಫ್​​ ಮತ್ತು ವಿಜಯ್ ಸೇತುಪತಿ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಸಿನಿಮಾವನ್ನು ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು. ಎರಡು ಭಾಷೆಗಳಿಗೆ ವಿಭಿನ್ನ ಪೋಷಕ ಪಾತ್ರಗಳಿವೆ. ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ರಾಜೇಶ್ ವಿಲಿಯಮ್ಸ್, ಶಣ್ಮುಗರಾಜ, ಕೆವಿನ್ ಜೈ ಬಾಬು ಮತ್ತು ರಾಧಿಕಾ ಶರತ್​ ಕುಮಾರ್​ ತಮಿಳು ಆವೃತ್ತಿಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಸ್ಪತ್ರೆ ಆರಂಭಿಸಲಿರುವ ನಟಿ ಶ್ರೀಲೀಲಾ? ಅಧಿಕೃತ ಹೇಳಿಕೆ ನಿರೀಕ್ಷೆ!

'ಮೆರಿ ಕ್ರಿಸ್ಮಸ್' ಈಗಾಗಲೇ ತೆರೆ ಕಾಣಬೇಕಿತ್ತು. ಸಿನಿಮಾ ಬಿಡುಗಡೆ ದಿನಾಂಕವನ್ನು ಕೆಲವು ಬಾರಿ ಬದಲಾಯಿಸಲಾಗಿದೆ. ಡಿಸೆಂಬರ್ 15ರಂದು ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು. ಆಗ ಧರ್ಮ ಪ್ರೊಡಕ್ಷನ್ಸ್‌ನ ಸಿದ್ಧಾರ್ಥ್ ಮಲ್ಹೋತ್ರಾ ಅವರ ಯೋಧ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ ಪೈಪೋಟಿ ಎದುರಿಸಬೇಕಿತ್ತು. ಬಳಿಕ ಎರಡೂ ಚಿತ್ರಗಳ ಬಿಡುಗಡೆ ದಿನಾಂಕ ಡಿಸೆಂಬರ್ 8ಕ್ಕೆ ಬಂತು. ಆದ್ರೆ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾಗಳ ರಿಲೀಸ್​​​ ಡೇಟ್​ ಮತ್ತೆ ಮುಂದೂಡಿಕೆಯಾಯ್ತು. ನಂತರ ಯೋಧ ಸಿನಿಮಾವನ್ನು 2024ರ ಮಾರ್ಚ್ 15ಕ್ಕೆ ಮುಂದೂಡಲಾಯ್ತು. ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿಗದಿಪಡಿಸಲಾಗಿದ್ದ ಮೇರಿ ಕ್ರಿಸ್ಮಸ್​ ಅನ್ನು 2024ರ ಜನವರಿ 12ರಂದು ಬಿಡುಗಡೆ ಮಾಡಲು ನಿರ್ಧರಿಸಲಾಯ್ತು.

ಬಾಲಿವುಡ್​ 2023: ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸ್ಟಾರ್​ಕಿಡ್ಸ್ ಇವರೇ ನೋಡಿ!

ಸಿನಿಮಾದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಚಿತ್ರ ಪುಸ್ತಕವೊಂದರ ರೂಪಾಂತರವಾಗಿದೆ ಎಂಬುದನ್ನು ನಿರ್ದೇಶಕ ಶ್ರೀರಾಮ್ ರಾಘವನ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಅದಾಗ್ಯೂ, ಪುಸ್ತಕದ ಹೆಸರನ್ನು ಬಹಿರಂಗಪಡಿಸದೇ, ಪುಸ್ತಕದ ಮುಖ್ಯ ವಿಚಾರಗಳನ್ನು ಚಿತ್ರದಲ್ಲಿ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.