ಮುಂಬೈ: ಬಾಲಿವುಡ್ನ ಖ್ಯಾತ ನಟಿ ಕತ್ರಿನಾ ಕೈಫ್ ಈ ಬಾರಿ ತಮ್ಮ 39ನೇ ಹುಟ್ಟು ಹಬ್ಬವನ್ನು ಮಾಲ್ಡೀವ್ಸ್ನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಅವರು ಪತಿ ವಿಕ್ಕಿ ಕೌಶಲ್ ಜೊತೆ ಮಾಲ್ಡಿವ್ಸ್ಗೆ ತೆರಳಿದ್ದಾರೆ.
ಮಾಲ್ದೀವ್ಸ್‌ಗೆ ಹೊರಡುವಾಗ ಮುಂಬೈ ಏರ್‌ಪೋರ್ಟ್‌ನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕ್ಯಾಮರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದಾರೆ. ಕತ್ರಿನಾ ಕೈಫ್ ಜನ್ಮ ದಿನ ಪ್ರಯುಕ್ತ ಕಬೀರ್ ಖಾನ್, ಶರ್ವರಿ ವಾಘ್, ಸನ್ನಿ ಕೌಶಲ್, ಮಿನಿ ಮಾಥುರ್ ಮುಂತಾದವರೂ ಕೂಡ ಮಾಲ್ದೀವ್ಸ್‌ಗೆ ಹಾರಿದ್ದಾರೆ.
ಕತ್ರಿನಾ ಆರೆಂಜ್ ಟಿ ಶರ್ಟ್, ಬ್ಲ್ಯೂ ಜೀನ್ಸ್‌ನಲ್ಲಿ ಕಾಣಿಸಿಕೊಂಡರೆ, ಬ್ಲಾಕ್ ಟಿ ಶರ್ಟ್, ಹಸಿರು ಬಣ್ಣದ ಜಾಕೆಟ್ ಹಾಗೂ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ಹೋಗುವಾಗ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ಧಾರೆ.
ಕತ್ರಿನಾ ಕೈಫ್ ಅವರು ಹುಟ್ಟು ಹಬ್ಬವು ಈ ಬಾರಿ ವಿಶೇಷತೆಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಇಂದು ನಡೆಯಲಿರುವ ಹುಟ್ಟು ಹಬ್ಬದ ಪಾರ್ಟಿಯಲ್ಲಿ ವಿಕ್ಕಿ ಸಹೋದರ ಸನ್ನಿ ಕೌಶಲ್ ಮತ್ತು ಶಾರ್ವತಿ ವಾಘ್ ಕೂಡ ಭಾಗಿಯಾಗಲಿದ್ದು, ಆಪ್ತರಿಗೂ ಆಹ್ವಾನ ನೀಡಿದ್ದಾರಂತೆ.
ಸದ್ಯ ಈ ಜೋಡಿ ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದು, ಸಲ್ಮಾನ್ ಖಾನ್ ನಟನೆಯ ಸಿನಿಮಾದಲ್ಲಿ ಕತ್ರಿನಾ ಬ್ಯುಸಿಯಾಗಿದ್ದಾರೆ. ವಿಕ್ಕಿ ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಕತ್ರಿನಾ ಕೈಫ್ ಜನ್ಮದಿನ: 'ಫೋನ್ ಭೂತ್' ಮೋಷನ್ ಪೋಸ್ಟರ್ ರಿಲೀಸ್