ETV Bharat / entertainment

ಸಾರಾ ಅಲಿ ಖಾನ್ ದೀಪಾವಳಿ ಪಾರ್ಟಿ: ಮಾಜಿ ಗೆಳೆಯ​​ ಸೇರಿದಂತೆ ಸೆಲೆಬ್ರಿಟಿಗಳು ಭಾಗಿ - Sara Ali Khan diwali party

ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಆಯೋಜಿಸಿದ್ದ ದೀಪಾವಳಿ ಸಂಭ್ರಮದಲ್ಲಿ ನಟ ಕಾರ್ತಿಕ್ ಆರ್ಯನ್​​ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

Kartik Aaryan at Sara Ali Khan's diwali celebration
ಸಾರಾ ಅಲಿ ಖಾನ್ ದಿವಾಲಿ ಪಾರ್ಟಿಯಲ್ಲಿ ಕಾರ್ತಿಕ್​ ಆರ್ಯನ್
author img

By ETV Bharat Karnataka Team

Published : Nov 10, 2023, 10:49 AM IST

ಬಾಲಿವುಡ್​​ ಗಣ್ಯರು ತಮ್ಮ ಸಹೋದ್ಯೋಗಿಗಳು, ಆಪ್ತರಿಗಾಗಿ ದೀಪಾವಳಿ ಸಂತೋಷಕೂಟ ಆಯೋಜಿಸುವ ಪದ್ಧತಿ ಇದೆ. ಕಳೆದೊಂದು ವಾರದಿಂದಲೂ ಬಾಲಿವುಡ್​ನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗುರುವಾರ ರಾತ್ರಿ ಪಟೌಡಿ ವಂಶದ ಕುಡಿ ಸಾರಾ ಅಲಿ ಖಾನ್​​ ತಮ್ಮ ಮುಂಬೈ ನಿವಾಸದಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಮಾಜಿ ವದಂತಿಯ ಗೆಳೆಯ ಕಾರ್ತಿಕ್ ಆರ್ಯನ್​​ ಸೇರಿದಂತೆ ಹಲವು ಗಣ್ಯರು ಬಂದಿದ್ದರು.

ಸಾರಾ ಅಲಿ ಖಾನ್​​ ಅವರ ಅನೇಕ ಆಪ್ತರು ಈವೆಂಟ್‌ನಲ್ಲಿ ಕಂಡುಬಂದರು. ಮುಂಬೈ ಮೂಲದ ಪಾಪರಾಜಿಯೋರ್ವರು ಕಾರ್ತಿಕ್ ಆರ್ಯನ್ ಅವರು ಸಾರಾ ಅವರ ಮನೆ ಪ್ರವೇಶಿಸುತ್ತಿರುವ ದೃಶ್ಯವನ್ನು ತಮ್ಮ ಸೆರೆಹಿಡಿದಿದ್ದಾರೆ. ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು-ನೆಟ್ಟಿಗರು ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ.

ಕಾರ್ತಿಕ್ ಆರ್ಯನ್​ ಹಳದಿ ಕುರ್ತಾ, ಬಿಳಿ ಪೈಜಾಮ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ನಟನ ಕ್ಲೀನ್ ಶೇವ್ ಲುಕ್​ ಅದೆಷ್ಟೋ ಯುವತಿಯರ ಮನಕದ್ದಿದೆ. ನಟಿಯ ಮನೆಯ ಹೊರಗೆ ನಿಂತಿದ್ದ ಪಾಪರಾಜಿಗಳ ಕ್ಯಾಮರಾಗಳಿಗೆ ನಟ ನಗುಮೊಗದ ಪೋಸ್ ನೀಡಿದರು.

ಸಾರಾ ಕಾರ್ತಿಕ್ ಜೋಡಿ ಇಮ್ತಿಯಾಜ್ ಅಲಿ ಅವರ ಲವ್ ಆಜ್ ಕಲ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಂದರ್ಭವೇ ಡೇಟಿಂಗ್​ನಲ್ಲಿದ್ದಾರೆಂದು ವದಂತಿಗಳು ಹರಡಿತ್ತು. ಆದಾಗ್ಯೂ ಕೆಲ ದಿನಗಳಲ್ಲೇ ಬೇರ್ಪಟ್ಟರು ಎಂದೂ ಕೂಡ ಹೇಳಲಾಗಿದೆ. ಕಾಫಿ ವಿಥ್ ಕರಣ್ ಸೀಸನ್ 8ರ ಮೂರನೇ ಸಂಚಿಕೆಯಲ್ಲಿ ಸಾರಾ ಅಲಿ ಖಾನ್​ ಮತ್ತು ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ನಿನ್ನೆ ಈ ಶೋ ಒಟಿಟಿಯಲ್ಲಿ ಹೊರಬಿದ್ದಿದೆ. ಚಾಟ್​ ಶೋನಲ್ಲಿ ಸಾರಾ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಹಿಂದಿನ ಸಂಬಂಧಗಳು, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕಾ ಜೋಡಿ? ಕುತೂಹಲಕ್ಕೆ ಕಾರಣವಾದ ಈ ವಿಡಿಯೋ

ಕಾರ್ತಿಕ್ ಆರ್ಯನ್​ ಅವರು ಕಬೀರ್ ಖಾನ್ ನಿರ್ದೇಶನದ ಚಂದು ಚಾಂಪಿಯನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2024ರ ಜೂನ್ 14 ರಂದು ತೆರೆಗಪ್ಪಳಿಸಲಿದೆ. ಕಾರ್ತಿಕ್-ಕಬೀರ್ ಖಾನ್ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು. ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಕ್ಯಾಪ್ಟನ್ ಇಂಡಿಯಾ ಮತ್ತು ನಿರ್ದೇಶಕ ಅನುರಾಗ್ ಬಸು ಅವರ ಬಹುನಿರೀಕ್ಷಿತ ಆಶಿಕಿ 3ನಲ್ಲಿ ಕೂಡ ಅಭಿನಯಿಸಲಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ಅಪ್ ವದಂತಿ​: ಸಾರಾ ಅಲಿ ಖಾನ್ ಹೇಳಿದ್ದಿಷ್ಟು!

ಸಾರಾ ಅಲಿ ಖಾನ್​ ಅವರು ಅನುರಾಗ್ ಬಸು ಅವರ ಮೆಟ್ರೋ ಇನ್​ ದಿನೋದಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದಲ್ಲದೇ, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸಿನಿಮಾಗಳಲ್ಲಿ ನಟಿ ಪಾತ್ರ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.