ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿಖಾನ್ ಬಾಲಿವುಡ್ನ ಫೇಮಸ್ ಜೋಡಿಗಳಲ್ಲೊಂದು. ಇಂದು ಸೈಫ್ ಅಲಿಖಾನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
52ನೇ ಹುಬ್ಬಹಬ್ಬದ ಸಂಭ್ರಮಕ್ಕೆ ಪತ್ನಿ ಕರೀನಾ ಕಪೂರ್ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಕರೀನಾ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಸೈಫ್ ಅಲಿಖಾನ್ ಸಖತ್ತಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
![Kareena Kapoor wished Saif Ali Khan for his birthday](https://etvbharatimages.akamaized.net/etvbharat/prod-images/16114899_news.png)
''ಜಗತ್ತಿನ ಅತ್ಯುತ್ತಮ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು, ನೀವು ಈ ಕ್ರೇಜಿ ಸವಾರಿಯನ್ನು ಸಖತ್ ಕ್ರೇಜಿಯರ್ ಆಗಿಯೇ ಮಾಡಿದ್ದೀರಿ, ದೇವರೇ ನಾನು ಬೇರೆ ಯಾವುದೇ ಮಾರ್ಗವನ್ನು ಬಯಸುವುದಿಲ್ಲ, ಅದಕ್ಕೆ ಈ ಚಿತ್ರಗಳೇ ಪುರಾವೆ, ಪೌಟ್ (Pout) ಕ್ರಿಯೆಯಲ್ಲಿ ನೀವೇ ಅತ್ಯುತ್ತಮ, ಐ ಲವ್ ಯು ಮೈ ಜಾನ್'' ಎಂದು ಬರೆದು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಕರೀನಾ ಕಪೂರ್ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಂತೆ ಚಿತ್ರರಂಗದವರು ಸೈಫ್ ಅಲಿಖಾನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ ಡೆಬಿನಾ ಬೊನ್ನರ್ಜಿ ದಂಪತಿ