ETV Bharat / entertainment

'ಬಾಲಿವುಡ್​ ಬೆಬೊ'ಗಿಂದು ಜನ್ಮದಿನದ ಸಂಭ್ರಮ; ಕರೀನಾ ಕಪೂರ್​ ಮುಂಬರುವ ಸಿನಿಮಾಗಳಿವು.. - ಈಟಿವಿ ಭಾರತ ಕನ್ನಡ

ಇಂದು ಬಾಲಿವುಡ್​ ಬೆಬೊ ಕರೀನಾ ಕಪೂರ್​ ಜನ್ಮದಿನ. ನಟಿಯ ಮುಂದಿನ ಐದು ಪ್ರಮುಖ ಸಿನಿಮಾಗಳು ಇಲ್ಲಿವೆ.

Kareena Kapoor Khan birthday special Five upcoming films of the actor to watch out for
ಬಾಲಿವುಡ್​ ಬೇಬೋಗೆ ಜನ್ಮದಿನದ ಸಂಭ್ರಮ; ಕರೀನಾ ಕಪೂರ್​ ಮುಂಬರುವ ಸಿನಿಮಾಗಳಿವು..
author img

By ETV Bharat Karnataka Team

Published : Sep 21, 2023, 7:08 AM IST

ಬಾಲಿವುಡ್​ ನಟಿ ಕರೀನಾ ಕಪೂರ್​ಗೆ ಇಂದು ಜನ್ಮದಿನದ ಖುಶಿಯಲ್ಲಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ತಾರೆಗೀಗ 43 ವರ್ಷ ವಯಸ್ಸು!. ಹಾಲ್ಗೆನ್ನೆ ಚೆಲುವೆ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದರು. ಮಕ್ಕಳಾದ ಬಳಿಕ ಇವರ ಸಿನಿಮಾ ಸಂಖ್ಯೆ ಕಡಿಮೆ ಆಗಿದೆ. ಅಲ್ಲೊಂದು ಇಲ್ಲೊಂದೆಂಬಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ 23 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.

1980ರ ಸೆಪ್ಟೆಂಬರ್​ 21ರಂದು ಮುಂಬೈನಲ್ಲಿ ರಣದೀರ್​ ಕಪೂರ್​ ಮತ್ತು ಬಬಿತಾ ಕಪೂರ್​ ಪುತ್ರಿಯಾಗಿ ಜನಿಸಿದ ಕರೀನಾ ಕಪೂರ್​ 2000ರಲ್ಲಿ ಬಣ್ಣದ ಲೋಕ ಪ್ರವೇಶಿಸಿದರು. 'ರೆಫ್ಯೂಜಿ' ಅವರ ನಟನೆಯ ಮೊದಲ ಚಿತ್ರ. 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಸುಮಾರು 35 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ​, ಜಬ್​ ವಿ ಮೆಟ್​, ಕಭಿ ಖುಷಿ ಕಭಿ ಗಮ್​, ಲಾಲ್​ ಸಿಂಗ್​ ಚಡ್ಡಾ, ಭಜರಂಗಿ ಭಾಯ್​ಜಾನ್​, ಬಾಡಿಗಾರ್ಡ್​, ಕುರುಬಾನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ನಟ ಸೈಫ್ ಅಲಿ ಖಾನ್ ಅವರನ್ನು ವರಿಸಿದ ಇವರಿಗೆ ತೈಮೂರ್ ಮತ್ತು ಜೆಹ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ. ಕರೀನಾ ಮುಂಬರುವ ಸಿನಿಮಾಗಳು ಹೀಗಿವೆ.

ಜಾನೆ ಜಾನ್​: ಕರೀನಾ ಕಪೂರ್​ ಖಾನ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​​ ಜಾನೆ ಜಾನ್​​ (Jaane Jaan). ಇದರಲ್ಲಿ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಕೊಲೆ ಪ್ರಕರಣವನ್ನು ಬೆನ್ನಟ್ಟಿದವರ ನಡುವಿನ ಬುದ್ಧಿವಂತಿಕೆಯ ಯುದ್ಧವನ್ನು ಸಿನಿಮಾ ಪ್ರದರ್ಶಿಸಲಿದೆ. ಜಾನೆ ಜಾನ್ ಸಿನಿಮಾ ಕಥೆ ಒಂಟಿ ಮಹಿಳೆ ಮೇಲೆ ಕೇಂದ್ರೀಕೃತವಾಗಿದ್ದು, ನೆರೆಹೊರೆಯವರ ಸಹಾಯದಿಂದ ಗಂಡನ (ದೂರವಾದ) ಸಾವನ್ನು ಮುಚ್ಚಿಡಲು ಪ್ರಯತ್ನಿಸುವ ವಿಷಯಗಳು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸೆಪ್ಟೆಂಬರ್​​ 21 ರಿಂದ (ಇಂದಿನಿಂದ) ನೆಟ್​ಫ್ಲಿಕ್ಸ್‌ನಲ್ಲಿ ಜಾನೆ ಜಾನ್​ ಸಿನಿಮಾ ಲಭ್ಯ.

ದಿ ಕ್ರ್ಯೂ: ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅವರನ್ನೊಳಗೊಂಡ ಹಾಸ್ಯ ಚಲನಚಿತ್ರ 'ದಿ ಕ್ರ್ಯೂ'. ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಾಣದ ಸಿನಿಮಾ ಇದಾಗಿದೆ. ದಿ ಕ್ರ್ಯೂ ಎಂದರೆ 'ಸಿಬ್ಬಂದಿ' ಎಂದರ್ಥ. ಮಹಿಳಾ ಪ್ರಧಾನ ಚಿತ್ರ. ಮೂರು ತಲೆಮಾರಿನ ಮೂವರು ಜನಪ್ರಿಯ ನಟಿಯರನ್ನೊಳಗೊಂಡ ಚಿತ್ರ ವೈಮಾನಿಕ ಕ್ಷೇತ್ರದಲ್ಲಿ ನಡೆಯುವ ಕಥೆ ಹೇಳಲಿದೆ. ಇಲ್ಲಿನ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವ ಮೂವರು ಮಹಿಳೆಯರ (ಸಿಬ್ಬಂದಿ) ಕಥೆಯನ್ನು ಚಿತ್ರ ಅನಾವರಣಗೊಳಿಸಲಿದ್ದು, ಮೂವರು ನಟಿಯರಿಗೂ ವಿಭಿನ್ನ ಗ್ಲಾಮರಸ್​ ಪಾತ್ರವಿರಲಿದೆ. ಈ ವರ್ಷವೇ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಶುತೋಷ್​ ಗೋವಾರಿಕರ್​ರ ಹೆಸರಿಡದ ಸಿನಿಮಾ: ಬಾಲಿವುಡ್​ನ​ ಖ್ಯಾತ ನಿರ್ದೇಶಕ ಅಶುತೋಷ್​ ಗೋವಾರಿಕರ್​ ಅವರ ಮುಂದಿನ ಸಿನಿಮಾಗೆ ಕರೀನಾ ಕಪೂರ್​ ನಾಯಕಿ. ಮರಾಠಿ ಚಲನಚಿತ್ರ 'ಆಪ್ಲಾ ಮನುಸ್​'ನ ಹಿಂದಿ ರಿಮೇಕ್​ ಇದಾಗಿರಲಿದೆ. ಈ ಸಿನಿಮಾದ ಸಹ ನಟರ ಆಯ್ಕೆ ಹಾಗೂ ಸ್ಕ್ರಿಪ್ಟ್​ ಪೂರ್ಣಗೊಳಿಸುವಿಕೆಗಾಗಿ ಕರೀನಾ ಕಾಯುತ್ತಿದ್ದಾರೆ. ಬಳಿಕಷ್ಟೇ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಗಲಿದೆ.

ಸೆಲ್ಯೂಟ್​ (ರಾಕೇಶ್​ ಶರ್ಮಾ ಅವರ ಜೀವನಚರಿತ್ರೆ): 'ಸೆಲ್ಯೂಟ್'​ ಸಿನಿಮಾವು ಗಗನಯಾತ್ರಿ ರಾಕೇಶ್​ ಶರ್ಮಾ ಅವರ ಜೀವನವನ್ನು ಆಧರಿಸಿದೆ. ಶಾರುಖ್​ ಖಾನ್​ ಜೊತೆಗೆ ಕರೀನಾ ಕಪೂರ್​ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಕೆಲಸಗಳು ಅಂದುಕೊಂಡಂತೆ ನಡೆದರೆ, ಬಾಲಿವುಡ್​ನ ಜನಪ್ರಿಯ ಜೋಡಿ ಎಂಟು ವರ್ಷಗಳ ನಂತರ ದೊಡ್ಡ ಪರದೆಗೆ ಮರಳಲಿದೆ.

ಬಾಂಬೆ ಸಮುರಾಯ್​: ಬಾಲಿವುಡ್​ನ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಬಾಂಬೆ ಸಮುರಾಯ್​'. ಈ ಚಿತ್ರಕ್ಕೆ ಫರ್ಹಾನ್​ ಅಖ್ತರ್​ ಮತ್ತು ರಿತೇಶ್​ ಸಿಧ್ವಾನಿ ಬಂಡವಾಳ ಹೂಡಲಿದ್ದಾರೆ. ಕಲ್ಕಿ ಕೊಚ್ಲಿನ್​, ಅಭಯ್​ ಡಿಯೋಲ್​ ಮತ್ತು ಅಕ್ಷಯ್​ ಖನ್ನಾರಂತಹ ಸ್ಟಾರ್​ ತಾರೆಯರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫರ್ಹಾನ್​ ಅಖ್ತರ್​ ಮತ್ತು ಕರೀನಾ ಕಪೂರ್ ಜೋಡಿಯಾಗಿ ತೆರೆ ಮೇಲೆ ಮಿಂಚಲಿದ್ದಾರೆ.

ಇದನ್ನೂ ಓದಿ: ಬರ್ತ್​ಡೇ ಸಲುವಾಗಿ ಪತಿ ಮತ್ತು ಮಕ್ಕಳೊಂದಿಗೆ ವಿಹಾರಕ್ಕೆ ತೆರಳಿದ ಕರೀನಾ ಕಪೂರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.