ETV Bharat / entertainment

ಕಾರ್ತಿಕ್ ಆರ್ಯನ್ ಅಭಿನಯದ ಶೆಹಜಾದ ಚಿತ್ರ ಕುರಿತು ಕರಣ್ ಜೋಹರ್ ಹೇಳಿದ್ದೇನು? - ಶೆಹಜಾದ ಕುರಿತು ಕರಣ್ ಜೋಹರ್ ಹೇಳಿದ್ದೇನು

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್ ಕೃತಿ ಸನೋನ್ ಅಭಿನಯದ ಶೆಹಜಾದ ಸಿನಿಮಾವು ಬರುವ ಫೆಬ್ರವರಿ 10 ರಂದು ಬಿಡುಗಡೆಗೆ ಸಜ್ಜಾಗಿದ್ದು, ನಿರ್ಮಾಪಕ ಕರಣ್ ಜೋಹರ್ ಚಿತ್ರ ತಂಡವನ್ನು ಹಾಡಿ ಹೊಗಳಿದ್ದಾರೆ.

Kartin Aaryan
ಕಾರ್ತಿಕ್ ಆರ್ಯನ್
author img

By

Published : Jan 14, 2023, 11:32 AM IST

ಮುಂಬೈ: ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯದ ಶೆಹಜಾದ ಚಿತ್ರದ ಟ್ರೈಲರ್ ಗುರುವಾರ ಅನಾವರಣಗೊಂಡಿದ್ದು, ಭಾರಿ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳಿಂದ ಹಿಡಿದು ಚಿತ್ರರಂಗದ ಬಹುತೇಕ ಮಂದಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇದೀಗ ಚಿತ್ರ ನಿರ್ಮಾಪಕ ಕರಣ್ ಜೋಹರ್ ಕೂಡ ಶೆಹಜಾದ ತಂಡವನ್ನು ಹಾಡಿ ಹೊಗಳಿದ್ದಾರೆ.

ಈ ಕುರಿತು ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಕರಣ್ "ಮಸಾಲೆ ಸೆ ಭರ್ಪೂರ್ ಔರ್ ಎಂಟರ್ಟೈನ್ಮೆಂಟ್ ಕಾ ಜಬರ್ದಸ್ತ್ ತಡ್ಕಾ! ಶೆಹಜಾದ ತಂಡಕ್ಕೆ ಅಭಿನಂದನೆಗಳು!" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಶೆಹಜಾದ ಸಿನಿಮಾವು ಅಭಿಮಾನಿಗಳಿಗೆ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಕರಣ್ ಅವರ ಈ ಪೋಸ್ಟ್ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದು, ಕಾರ್ತಿಕ್ ಜೊತೆಗಿನ ಕರಣ್ ಸ್ನೇಹವನ್ನು ತಿಳಿಸುತ್ತಿದೆ.

ಇತ್ತೀಚೆಗಷ್ಟೇ ಕರಣ್​ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್​ ನಿರ್ಮಾಣದ ದೋಸ್ತಾನ 2 ಸಿನಿಮಾದಿಂದ ನಟ ಕಾರ್ತಿಕ್​ ಹೊರಬಂದಿದ್ದರು. ಅವರಿಂದ ಪಡೆದಿದ್ದ ಹಣವನ್ನೂ ಹಿಂತಿರುಗಿಸಿದ್ದರು. ಅಂದಿನಿಂದ ಕಾರ್ತಿಕ್ ಮತ್ತು ಕರಣ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ. ಚಿತ್ರವನ್ನು ಮರುಕಾಸ್ಟ್ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿದೆ. ಆದ್ರೆ, ಈ ಬಗ್ಗೆ ಧರ್ಮ ಪ್ರೊಡಕ್ಷನ್ಸ್ ಆಗಲಿ ಅಥವಾ ಕಾರ್ತಿಕ್ ಆಗಲಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ತೆರೆ ಕಾಣಲು ಸಜ್ಜಾಗಿದೆ 'ಶೆಹಜಾದ್​'

ನಿರ್ದೇಶಕ ರೋಹಿತ್ ಧವನ್​​ರವರ ಶೆಹಜಾದ​ ಸಿನಿಮಾವನ್ನು ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾರ್ತಿಕ್ ನಿರ್ಮಾಪಕರಾಗಿ ಚೊಚ್ಚಲ ಪ್ರವೇಶ ಪಡೆದ ಈ ಚಿತ್ರ ಫೆಬ್ರವರಿ 10, 2023 ರಂದು ಬಿಡುಗಡೆಯಾಗಲಿದೆ. ಧವನ್ ನಿರ್ದೇಶನದ ಡಿಶೂಂ ಮತ್ತು ದೇಸಿ ಬಾಯ್ಸ್ ಚಿತ್ರಗಳಿಗೆ ಪ್ರೀತಂ ಸಂಗೀತ ಸಂಯೋಜನೆ ಮಾಡಿದ್ದರು. ಇದೀಗ ಈ ಚಿತ್ರಕ್ಕೂ ಅವರೇ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಕೃತಿ ಸನೋನ್, ಮನಿಶಾ ಕೊಯಿರಾಲಾ, ಪರೇಶ್ ರಾವಲ್, ರೋನಿತ್ ರಾಯ್ ಮತ್ತು ಸಚಿನ್ ಖೇಡೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ಮಾಪಕನಾದ ಕಾರ್ತಿಕ್​ ಆರ್ಯನ್: ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಚಿತ್ರರಂಗಕ್ಕೆ ಬಂದು ಹೆಚ್ಚು ಸಮಯವಾಗಿಲ್ಲ. ಹಾಗೆಯೇ ಅಭಿನಯಿಸಿದ ಚಿತ್ರಗಳ ಸಂಖ್ಯೆಯೂ ಹೆಚ್ಚೇನಿಲ್ಲ. ಇಲ್ಲಿಯವರೆಗೂ ನಟರಾಗಿದ್ದ ಆರ್ಯನ್​, ಇದೀಗ ಈ ಸಿನಿಮಾ ಮೂಲಕ ನಿರ್ಮಾಪಕರೂ ಆಗಿದ್ದಾರೆ.

ಅಲಾ ವೈಕುಂಠಪುರಮುಲೊ ರಿಮೇಕ್‌ : 'ಶೆಹಜಾದ ಚಿತ್ರವು ಆ್ಯಕ್ಷನ್‌ ಡ್ರಾಮಾ ಆಗಿದ್ದು, ಈ ಸಿನಿಮಾ 2020ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ‘ಅಲಾ ವೈಕುಂಠಪುರಮುಲೊ’ ರಿಮೇಕ್‌. ಸದ್ಯಕ್ಕೆ ಚಿತ್ರದ ಟೀಸರ್‌ ಮತ್ತು ಟ್ರೈಲರ್​ ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ನಟಿ ಕೃತಿ ಸನೋನ್ ಮತ್ತು ಕಾರ್ತಿಕ್ ಆರ್ಯನ್ ಅವರು ಶೆಹಜಾದ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯದ 'ಶೆಹಜಾದ್​'​​​ ಸಿನಿಮಾದ ಶೂಟಿಂಗ್​ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.