ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರಂದು ಮತೆ ಎಣಿಕೆ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಕಾಂತಾರ ಖ್ಯಾತಿಯ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಮಸ್ತ ಜನತೆಯಲ್ಲಿ ಕೇಳಿಕೊಂಡಿದ್ದರು. ಇದೀಗ ಅವರ ರಾಜಕೀಯ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ನಡೆಯುತ್ತಿದೆ.
-
ಸುಮ್ನನೆ ಇರಿ ಮರ್ರೆ 😂 ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ 😅 ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ 🙏
— Rishab Shetty (@shetty_rishab) April 1, 2023 " class="align-text-top noRightClick twitterSection" data="
">ಸುಮ್ನನೆ ಇರಿ ಮರ್ರೆ 😂 ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ 😅 ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ 🙏
— Rishab Shetty (@shetty_rishab) April 1, 2023ಸುಮ್ನನೆ ಇರಿ ಮರ್ರೆ 😂 ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ 😅 ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ 🙏
— Rishab Shetty (@shetty_rishab) April 1, 2023
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಡಿವೈನ್ ಸ್ಟಾರ್?: ಕಾಂತಾರ ಎಂಬ ಯಶಸ್ವಿ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರುವ ಕನ್ನಡದ ನಟ ಇದೀಗ ಕಾಂತಾರ 2 ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಥೆ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಡಿವೈನ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದ್ರೆ ಇದನ್ನು ನಟ ರಿಷಬ್ ಶೆಟ್ಟಿ ಅಲ್ಲಗಳೆದಿದ್ದಾರೆ.
ರಿಷಬ್ ರಾಜಕೀಯಕ್ಕೆ ಎಂಟ್ರಿ #April 1st: ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, 'ರಿಷಬ್ ರಾಜಕೀಯಕ್ಕೆ ಎಂಟ್ರಿ, ಇವತ್ತಿನ ಸುದ್ದಿ, ರಿಷಬ್ ಶೆಟ್ಟಿ, April 1st' ಎಂದು ಟ್ವೀಟ್ ಮಾಡಿದ್ದರು. ಕೆಲ ಹೊತ್ತು ಈ ಟ್ವೀಟ್ ಭಾರೀ ಸಂಚಲನ ಸೃಷ್ಟಿಸಿತ್ತು. ನಿಜವಾಗಿಯೂ ರಿಷಬ್ ಅವರು ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡುತ್ತಾರಾ? ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ? ಎಂಬ ಪ್ರಶ್ನೆಗಳು ಜೋರಾಗಿಯೇ ಕೇಳಿಬಂದಿತ್ತು .
ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು: ಆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಾಂತಾರ ಸ್ಟಾರ್, 'ಸುಮ್ನನೆ ಇರಿ ಮಾರ್ರೆ, ಸುಳ್ಳು ಸುದ್ದಿ #April 1st ಹೀಗೆ ಹೇಳಿ, ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿದ್ದಾರೆ, ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಮತಚಲಾವಣೆಗೆ ಮನವಿ: ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಕೊಟ್ಟಿದ್ದರು. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದರು. ನಮ್ಮ ಉತ್ತಮ ಬದುಕಿಗಾಗಿ ಪ್ರತಿಯೊಬ್ಬರೂ ವೋಟ್ ಮಾಡಿ ಎಂಬುದಾಗಿ ಸಾಮಾಜಿಕ ಸಂದೇಶ ಕೊಟ್ಟಿದ್ದರು.
ಇದನ್ನೂ ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಸಿನಿಮಾ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷಗಳನ್ನು ಒಳಗೊಂಡಿದೆ. ಕಳೆದ ಸೆಪ್ಟೆಂಬರ್ನಲ್ಲಿ ತೆರೆ ಕಂಡಿರುವ ಈ ಚಿತ್ರ ನಿರೀಕ್ಷೆಗೂ ಮೀರಿ ಸೂಪರ್ ಹಿಟ್ ಆಗಿತ್ತು. ಕನ್ನಡಕ್ಕೆ ಸೀಮಿತವಾಗಿದ್ದ ರಿಷಬ್ ಶೆಟ್ಟಿ ಜನಪ್ರಿಯತೆ ರಾಜ್ಯದಾಚೆಗೂ ಹಬ್ಬಿತು. ಸಿನಿಮಾ ಬಗ್ಗೆ ಕೇವಲ ಅಭಿಮಾನಿಗಳು, ಪ್ರೇಕ್ಷಕರು ಮಾತ್ರವಲ್ಲದೇ ಸ್ಟಾರ್ ನಟರು ಸಹ ಕೊಂಡಾಡಿದ್ದರು.
ಇದನ್ನೂ ಓದಿ: NMACC ಸಮಾರಂಭದಲ್ಲಿ ನೀತಾ ಅಂಬಾನಿ ನೃತ್ಯ: ಸೊಸೆಯ ಬೇಬಿ ಬಂಪ್ ಫೋಟೋ ವೈರಲ್