ETV Bharat / entertainment

ದಾಖಲೆಗಳೆಲ್ಲ ಧೂಳಿಪಟ.. ಕಾಂತಾರ - ಕರ್ನಾಟಕದಲ್ಲಿ ಅತೀ ಹೆಚ್ಚು ಜನ ವೀಕ್ಷಿಸಲ್ಪಟ್ಟ ಚಿತ್ರ - ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ

ಕಾಂತಾರ ಕನ್ನಡವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಟ್ರೆಂಡಿಂಗ್​ನಲ್ಲಿರುವ ಚಿತ್ರ. ಈಗಾಗಲೇ ಗಳಿಕೆ, ಐಎಂಡಿಬಿ, ಬುಕ್ ಮೈ ಶೋ ರೇಟಿಂಗ್​ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಇದೀಗ ಮತ್ತೊಂದು ರೆಕಾರ್ಡ್ ಮಾಡಿದೆ.

ಕಾಂತಾರ
ಕಾಂತಾರ
author img

By

Published : Oct 24, 2022, 4:03 PM IST

Updated : Oct 24, 2022, 4:37 PM IST

ರಿಷಭ್ ಶೆಟ್ಟಿ ಅಭಿನಯದ ಕಾಂತಾರ ರಿಲೀಸ್ ಆಗಿ 25 ದಿನಗಳಾದ್ರೂ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕನ್ನಡದಲ್ಲಷ್ಟೇ ಅಲ್ಲ, ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಕನ್ನಡದ ಅಪ್ಪಟ ಜನಪದ ಕಥೆಯಾದ ಕಾಂತಾರ ಜನರ ಮನ ಗೆಲ್ಲುವ ಜೊತೆಗೆ ಬಾಕ್ಸ್ ಆಫೀಸ್​ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಹಲವು ದಾಖಲೆ ನಿರ್ಮಿಸಿರುವ ಕಾಂತಾರ ಇದೀಗ ಮತ್ತೊಂದು ಹೊಸ ರೆಕಾರ್ಡ್ ಬರೆದಿದೆ.

ಹೌದು, ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಲ್ಪಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾ ಪ್ರಿಯರು ಕಾಂತಾರ ವೀಕ್ಷಿಸಿರುವುದು ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ.

ಕಾಂತಾರ ಚಿತ್ರ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಯೇ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. 'ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ' ಎಂದು ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದೆ.

(ಓದಿ: 'ವಾವ್ ರಿಷಬ್ ಶೆಟ್ಟಿ, ಹ್ಯಾಟ್ಸ್ ಆಫ್​! ಸಿನಿಮಾ ಅಂದ್ರೆ ಕಾಂತಾರ)

ರಾಜಕುಮಾರ, ಕೆಜಿಎಫ್ ದಾಖಲೆ ಬ್ರೇಕ್: ಈ ಮುನ್ನ ಹೊಂಬಾಳೆ ನಿರ್ಮಿಸಿದ್ದ ರಾಜಕುಮಾರ, ಕೆಜಿಎಫ್ ಚಾಪ್ಟರ್ 1, 2 ಚಿತ್ರಗಳು ರಾಜ್ಯದಲ್ಲಿ ದಾಖಲೆ ಬರೆದಿದ್ದವು. 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದ ರಾಜಕುಮಾರ ಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿದ್ದರು. 2018 ರಲ್ಲಿ ಹೊಂಬಾಳೆ ನಿರ್ಮಿಸಿದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್ 1 ಬಿಡುಗಡೆಯಾಯಿತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಬಾಕ್ಸ್ ಆಫೀಸ್​​ನಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಿಸಿತ್ತು. ಆ ಮೂಲಕ ಹೊಂಬಾಳೆ ಬ್ಯಾನರ್​​ನ ಹಿಂದಿನ ದಾಖಲೆಯನ್ನು ‘ಕೆಜಿಎಫ್ 1 ‘ ಬ್ರೇಕ್ ಮಾಡಿತ್ತು.

2022 ರಲ್ಲಿ ಬಿಡುಗಡೆಯಾದ ಮಗದೊಂದು ಚಿತ್ರ ‘ಕೆಜಿಎಫ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರ ಬಾಲಿವುಡ್ ಎಲ್ಲ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿತ್ತು. ದೇಶದ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಕರ್ನಾಟಕದಲ್ಲಿ 72 ಲಕ್ಷ ಸಿನಿರಸಿಕರು ಈ ಚಿತ್ರ ವೀಕ್ಷಿಸಿದ್ದು ಕೂಡ ದಾಖಲೆಯಾಗಿ ಉಳಿದಿದೆ.

ಹೊಂಬಾಳೆ ಬ್ಯಾನರ್​​ನ ಚಿತ್ರಗಳು ಸ್ಥಾಪಿಸಿದ ದಾಖಲೆಗಳನ್ನು ಅವರದೇ ಸಂಸ್ಥೆಯ ನಿರ್ಮಾಣದ ಚಿತ್ರಗಳು ಮುರಿಯುತ್ತಾ ನೂತನ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸುತ್ತಾ ಬಂದಿವೆ.
ಇದೀಗ ಕಾಂತಾರ ಚಲನಚಿತ್ರ ಆ ಸಾಲಿಗೆ ಸೇರುವ ಮೂಲಕ ಹೊಂಬಾಳೆ ಸಂಸ್ಥೆಗೆ ಗರಿಮೆ ಮೂಡಿಸಿದೆ. ಮುಂದಿನ ವಾರಗಳಲ್ಲಿ ಒಂದು ಕೋಟಿ ಸಿನಿಮಾ ಪ್ರಿಯರು ವೀಕ್ಷಿಸಿ ಮಗದೊಂದು ದಾಖಲೆ ನಿರ್ಮಿಸುವ ಕಡೆಗೆ 'ಕಾಂತಾರ' ಸಾಗುತ್ತಿದೆ.

ರಿಷಭ್ ಶೆಟ್ಟಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಚಿತ್ರದಲ್ಲಿ ಮಿಂಚಿ, ಪ್ಯಾನ್ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಸದ್ಯ ಎಲ್ಲೆಡೆ ರಿಷಭ್ ನಟನೆಗೆ ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಸಾಮಾನ್ಯ ಪ್ರೇಕ್ಷಕರಷ್ಟೇ ಅಲ್ಲದೇ ಎಲ್ಲ ಇಂಡಸ್ಟ್ರೀಯ ದಿಗ್ಗಜರೂ ಕೂಡ ಕಾಂತಾರ ಶಿವನ ಪಾತ್ರಧಾರಿ ರಿಷಭ್​ಗೆ ಬಹುಪರಾಕ್​ ಹೇಳುತ್ತಿದ್ದಾರೆ.

ಕರ್ನಾಟಕದ ಹೊಂಬಾಳೆ ಸಂಸ್ಥೆಯೇ ಈ ದಾಖಲೆಯ ಚಿತ್ರಗಳು ನಿರ್ಮಿಸಿ ಜಗತ್ತಿನಾದ್ಯಂತ ಸಿನಿ ರಸಿಕರಿಗೆ ಉಣಬಡಿಸುತ್ತಿರುವುದು ಹೆಮ್ಮೆಯ ಸಂಗತಿ.

(ಓದಿ: 'ಓ...' ಎನ್ನುವುದು ಬರೀ ಶಬ್ದವಲ್ಲ, ಅದೊಂದು ನಂಬಿಕೆ; ಅಪಹಾಸ್ಯ ಮಾಡದಂತೆ ರಿಷಬ್ ಶೆಟ್ಟಿ ಮನವಿ)

Last Updated : Oct 24, 2022, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.