ETV Bharat / entertainment

ವಿನೋದ್ ಪ್ರಭಾಕರ್ 'ಫೈಟರ್' ಸಿನಿಮಾಗೆ ಕನ್ನಡಪರ ಹೋರಾಟಗಾರರ ಸಾಥ್​: ರಿಲೀಸ್ ಡೇಟ್ ಅನೌನ್ಸ್ - Vinod Prabhakar Fighter movie

Fighter release date announced: ಕನ್ನಡದ ಬಹುನಿರೀಕ್ಷಿತ 'ಫೈಟರ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

Fighter movie
'ಫೈಟರ್' ಸಿನಿಮಾ
author img

By ETV Bharat Karnataka Team

Published : Sep 23, 2023, 9:43 AM IST

ಸ್ಯಾಂಡಲ್​​​ವುಡ್​ನಲ್ಲಿ ಸದ್ಯ ಹಾಡುಗಳು ಹಾಗು ಟೀಸರ್​ನಿಂದಲೇ ಸಖತ್​​ ಸೌಂಡ್ ಮಾಡುತ್ತಿರುವ ಸಿನಿಮಾ 'ಫೈಟರ್'. ಕನ್ನಡ ಚಿತ್ರರಂಗದಲ್ಲಿ ಮರಿ ಟೈಗರ್ ಎಂದು ಗುರುತಿಸಿಕೊಂಡಿರುವ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರ ಬಹತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಸಹಜವಾಗಿ ಚಿತ್ರತಂಡ ಅಥವಾ ಸೆಲೆಬ್ರಿಟಿಗಳ ಕೈಯಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್​​ ಮಾಡಿಸಲಾಗುತ್ತದೆ. ಆದರೆ ಫೈಟರ್ ಚಿತ್ರತಂಡವು ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ಮಾನವಹಕ್ಕು ಮಹಿಳಾ ಅಧ್ಯಕ್ಷರು ಸೇರಿದಂತೆ ಅನೇಕ ಚಳುವಳಿ ಹೋರಾಟಗಾರರಿಂದ ಫೈಟರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ವಿಶೇಷವಾಗಿತ್ತು .

Fighter movie
'ಫೈಟರ್' ರಿಲೀಸ್ ಡೇಟ್ ಅನೌನ್ಸ್ ಈವೆಂಟ್​

ನೂತನ್ ಉಮೇಶ್ ನಿರ್ದೇಶನದ ಫೈಟರ್ ಚಿತ್ರ ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರರು ಅನೌನ್ಸ್​​ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್, ರಮೇಶ್ ಗೌಡ (ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ), ಕೆ.ಸಿ ಮೂರ್ತಿ (ಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ), ವೆಂಕಟ್ ಸ್ವಾಮಿ (ಸಮತಾ ಸೈನಿಕ ದಳ), ಶಿವಾನಂದ ಶೆಟ್ಟಿ(ಕ.ರ.ವೇ ಬೆಂಗಳೂರು), ಭಾರತಿ ನಾಯಕ್ (ಹ್ಯೂಮನ್ ರೈಟ್ಸ್ ಮಹಿಳಾ ಅಧ್ಯಕ್ಷರು), ಕೆ.ಕೆ. ಮೋಹನ್ (ನಾಡ ಸೇನಾನಿ ಕೆಂಪೇಗೌಡ ಟ್ರಸ್ಟ್), ಮಲ್ಲಿಕಾರ್ಜುನ, ವಿಜಯಕುಮಾರ್, ಸೋಮಶೇಖರ್, ರವಿಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ "ಫೈಟರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಮೊದಲು ಮಾತನಾಡಿದ ನಟ ವಿನೋದ್ ಪ್ರಭಾಕರ್, ಫೈಟರ್ ಚಿತ್ರದಲ್ಲಿ ನಾನು ರೈತರ ಪರ ಹೋರಾಟಗಾರನ‌ ಪಾತ್ರ ನಿರ್ವಹಿಸಿದ್ದೇನೆ. ಇಂದು ಕನ್ನಡಪರ ಇರುವ ಹಲವು ಸಂಘಟನೆಗಳು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದು, ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: RRR ಖ್ಯಾತಿಯ ಕೀರವಾಣಿ ಜೊತೆ ಅನುಪಮ್​​​​ ಖೇರ್: ಸಂಗೀತಾಭ್ಯಾಸದ ಸ್ಪೆಷಲ್​ ವಿಡಿಯೋ

ಬಳಿಕ ನಿರ್ದೇಶಕ ನೂತನ್​​ ಉಮೇಶ್ ಮಾತನಾಡಿ, ನಿಜವಾದ ಫೈಟರ್​ಗಳೆಂದರೆ ನಮ್ಮ ನಾಡು, ನುಡಿ, ಜಲ, ಸಂಸ್ಕೃತಿ, ದೇಶಕ್ಕಾಗಿ ಹೋರಾಡಿದ ಹೋರಾಟಗಾರರು. ಹಾಗಾಗಿ ನಾವು ನಮ್ಮ ಹೋರಾಟಗಾರರಿಂದ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿಸಲು ತೀರ್ಮಾನಿಸಿದೆವು ಎಂದು ಮಾಹಿತಿ ಹಂಚಿಕೊಂಡರು.

Fighter movie release date
'ಫೈಟರ್' ರಿಲೀಸ್ ಡೇಟ್ ಅನೌನ್ಸ್

ಇದನ್ನೂ ಓದಿ: ಸೀರೆಯುಟ್ಟು ಬಾತ್​​ ಟಬ್​ನಲ್ಲಿ ಕುಳಿತ ಚಾರ್ಲಿ ಚೆಲುವೆ: ಮನಮೋಹಕ ನೋಟ ಬೀರಿದ ಸಂಗೀತಾ ಶೃಂಗೇರಿ

ನಮ್ಮ ಚಿತ್ರ ಅಕ್ಟೋಬರ್ 6ರಂದು ಬಿಡುಗಡೆ ಆಗುತ್ತಿದೆ. ಇಷ್ಟು ಜನ ಹೋರಾಟಗಾರರು ಬಂದು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ಬಹಳ ಸಂತೋಷವಾಗಿದೆ ಎಂದು ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ತಿಳಿಸಿದರು. ಈ ಸಂದರ್ಭದಲ್ಲಿ ನಾಯಕಿ ಲೇಖಾಚಂದ್ರ ಸಹ ಉಪಸ್ಥಿತರಿದ್ದರು. ಹಾಡುಗಳು ಹಾಗೂ ಟೀಸರ್​​ನಿಂದ ಪ್ರೇಕ್ಷಕರ ಗಮನ ಸೆಳೆದಿರುವ ಫೈಟರ್ ಚಿತ್ರ ವಿನೋದ್ ಪ್ರಭಾಕರ್ ಅವರಿಗೆ ಒಳ್ಳೆ ಹೆಸರು ತಂದು ಕೊಡಲಿದೆ ಎಂಬುದು ಚಿತ್ರತಂಡ ಮತ್ತು ಅಭಿಮಾನಿಗಳ ವಿಶ್ವಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.