ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಬಿಗ್ ಬಾಸ್' ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಇದೀಗ ಮತ್ತೆ ಬಂದಿದೆ. ಬಿಗ್ ಬಾಸ್ 10ನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ. ನಿನ್ನೆ ಕಿಚ್ಚನ ಹುಟ್ಟುಹಬ್ಬದಂದು ಹೊಸ ಸೀಸನ್ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಸೀಸನ್ಗಿಂತ ಈ ಬಾರಿಯ ಬಿಗ್ ಬಾಸ್ ಸಂಥಿಂಗ್ ಸ್ಪೆಷಲ್ ಆಗಿರಲಿದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಈ ಬಾರಿ ಸಂಥಿಂಗ್ ಸ್ಪೆಷಲ್.. ಹೌದು, ಬಿಗ್ ಬಾಸ್ ಸೀಸನ್ 10ರ ಪ್ರೋಮೋ ಕುತೂಹಲ ಮೂಡಿಸಿದೆ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಮರಾಗಳನ್ನಿಟ್ಟು ಸ್ಪರ್ಧಿಗಳ ಚಲನ ವಲನ, ಅವರ ಮಾತುಗಳನ್ನು ಈವರೆಗೆ ಪ್ರೇಕ್ಷಕರಿಗೆ ತೋರಿಸಲಾಗುತ್ತಿತ್ತು. ಎಲ್ಲಾ ಸೀಸನ್ಗಳ ಪ್ರೋಮೋಗಳು ಕೂಡ ಹೀಗೆಯೇ ಇರುತ್ತಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ಪ್ರೋಮೋ ತುಸು ಭಿನ್ನವಾಗಿದೆ. ಈ ಬಾರಿ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಆಗಿರಲಿದೆ. ಪ್ರೋಮೋದಲ್ಲಿ ಮನೆಯೊಳಗಿನ ಕ್ಯಾಮರಾದ ಬದಲಿಗೆ ರಸ್ತೆಯಲ್ಲಿನ ಕ್ಯಾಮರಾಗಳನ್ನು ತೋರಿಸಲಾಗಿದೆ.
-
ಈ ಬಾರಿಯ ಬಿಗ್ಬಾಸ್ something special!!!
— Colors Kannada (@ColorsKannada) September 2, 2023 " class="align-text-top noRightClick twitterSection" data="
ನಿಮಗಿಷ್ಟ ಆಗುವ ಸ್ಪೆಷಲ್ ಏನು? ಕಮೆಂಟ್ ಮಾಡಿ!#BiggBossKannada #BBK10 #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/WfORUvnKFE
">ಈ ಬಾರಿಯ ಬಿಗ್ಬಾಸ್ something special!!!
— Colors Kannada (@ColorsKannada) September 2, 2023
ನಿಮಗಿಷ್ಟ ಆಗುವ ಸ್ಪೆಷಲ್ ಏನು? ಕಮೆಂಟ್ ಮಾಡಿ!#BiggBossKannada #BBK10 #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/WfORUvnKFEಈ ಬಾರಿಯ ಬಿಗ್ಬಾಸ್ something special!!!
— Colors Kannada (@ColorsKannada) September 2, 2023
ನಿಮಗಿಷ್ಟ ಆಗುವ ಸ್ಪೆಷಲ್ ಏನು? ಕಮೆಂಟ್ ಮಾಡಿ!#BiggBossKannada #BBK10 #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/WfORUvnKFE
ರಸ್ತೆಯಲ್ಲಿ ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋವನ್ನು ಕೊಂಚ ಡಿಫರೆಂಟ್ ಆಗಿಯೇ ತೋರಿಸಲಾಗಿದೆ. ಅಲ್ಲದೇ ಪ್ರೋಮೋದ ಹಿನ್ನಲೆ ಧ್ವನಿಯಲ್ಲಿ, "ನಮಸ್ತೆ ಕರ್ನಾಟಕ. ಹೇಗಿದ್ದೀರಾ? ನನ್ನ ಮಿಸ್ ಮಾಡ್ಕೊಂಡ್ರಾ? ಇಟ್ಟ ನೋಟ ಗಟ್ಟಿಯಾಗಿದೆ. ಆಟ ಮತ್ತೆ ಶುರುವಾಗ್ತಿದೆ. ಆದ್ರೆ ಈ ಬಾರಿ ಸಂಥಿಂಗ್ ಸ್ಪೆಷಲ್" ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: BBOTT2: ಎಲ್ವಿಶ್ ಯಾದವ್ಗೆ 'ಬಿಗ್ ಬಾಸ್' ಪಟ್ಟ.. ಶೋ ಗೆದ್ದ ಮೊದಲ 'ವೈಲ್ಡ್ ಕಾರ್ಡ್' ಸ್ಪರ್ಧಿ
ಪ್ರೋಮೋದಲ್ಲಿ ಕಿಚ್ಚ ಇಲ್ಲ..! ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಇಲ್ಲ. ಅವರನ್ನು ತೋರಿಸಲಾಗಿಲ್ಲ. ಆದರೆ ಮೊದಲನೇ ಸೀಸನ್ನಿಂದಲೂ ಸುದೀಪ್ ಒಬ್ಬರೇ ಬಿಗ್ ಬಾಸ್ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಕಿಚ್ಚ ಅಲ್ಲದೇ ಮತ್ಯಾರು ಬಿಗ್ ಬಾಸ್ ನಿರೂಪಣೆ ಮಾಡಲಾರರು ಎನ್ನುವಂತೆ ಆಗಿದೆ. ಅಷ್ಟರ ಮಟ್ಟಿಗೆ ಜನರು ಸುದೀಪ್ ಅವರ ನಿರೂಪಣೆಯನ್ನೇ ಬಯಸುತ್ತಾರೆ. ಹಾಗಾಗಿ ಈ ಬಾರಿ ಸುದೀಪ್ ಅವರೇ ನಿರೂಪಣೆ ಮಾಡಬಹುದು ಎಂದು ಊಹಿಸಲಾಗಿದೆ. ಈ ಬಗ್ಗೆ ಯಾವುದೇ ಸುಳಿವನ್ನು ಆಯೋಜಕರು ಬಿಟ್ಟುಕೊಟ್ಟಿಲ್ಲ.
ಕೇವಲ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಲಿದೆ ಎಂಬ ಮಾಹಿತಿಯನ್ನು ಮಾತ್ರ ಪ್ರೋಮೋದಲ್ಲಿ ನೀಡಲಾಗಿದೆ. ಜೊತೆಗೆ ಕಳೆದ ಎಲ್ಲಾ ಸೀಸನ್ಗಿಂತ ಈ ಬಾರಿ ಸಂಥಿಂಗ್ ಸ್ಪೆಷಲ್ ಆಗಿರಲಿದೆ ಎಂದು ತಿಳಿಸಿದೆ. ಇದರ ಹೊರತಾಗಿ ಯಾವುದೇ ಮಾಹಿತಿಯನ್ನು ತಯಾರಕರು ನೀಡಿಲ್ಲ. ಜೊತೆಗೆ ಈ ಬಾರಿ ಬಿಗ್ ಬಾಸ್ ಓಟಿಟಿಯನ್ನು ಕೈ ಬಿಡಲಾಗಿದೆಯೇ? ಎಂಬ ಅನುಮಾನ ದಟ್ಟವಾಗಿದೆ. ಕಳೆದ ಬಾರಿ ಬಿಗ್ ಬಾಸ್ ಓಟಿಟಿಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಆದರೆ ಈ ಬಾರಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗಲಿದೆಯಾ? ಅಥವಾ ಕೇವಲ ದೂರದರ್ಶನದಲ್ಲಿ ಮಾತ್ರವೇ? ಎಂಬ ಪ್ರಶ್ನೆ ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಶಾರುಖ್ 'ಜವಾನ್' ಭರ್ಜರಿ ಓಪನಿಂಗ್ ನಿರೀಕ್ಷೆ; ಫಸ್ಟ್ ಡೇ ಶೋಗೆ ಮಾರಾಟವಾದ ಟಿಕೆಟ್ಗಳೆಷ್ಟು?!