ನಟ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 10' ಬಹುತೇಕ ಫಿನಾಲೆ ಹಂತಕ್ಕೆ ತಲುಪಿದೆ. ಈಗಾಗಲೇ 13 ವಾರಗಳು ಪೂರ್ಣಗೊಂಡಿದ್ದು, 14ನೇ ವಾರದ ಎಪಿಸೋಡ್ಗಳು ಪ್ರಸಾರವಾಗುತ್ತಿವೆ. ಕಳೆದ ವಾರಾಂತ್ಯ ಮೈಕಲ್ ದೊಡ್ಮನೆಯಿಂದ ಹೊರ ನಡೆದಿದ್ದಾರೆ. ಹದಿನಾಲ್ಕನೇ ವಾರ ಕೂಡ ವಾದ ವಿವಾದಗಳಿಂದಲೇ ಆರಂಭಗೊಂಡಿದ್ದು, ವಿನಯ್ ಪ್ರತಾಪ್ ನಡುವಿನ ವಾಗ್ಯುದ್ಧ ಮುಂದುವರಿದಿದೆ. ನಿನ್ನೆಯ ಮಾತಿನ ಚಕಮಕಿಯ ಪರಿಣಾಮ ಇಂದಿನ ನಾಮಿನೇಶನ್ ಮೇಲೂ ಬೀರಿದೆ. ಇದರ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ.
ಹೌದು ಪಾಪ್ಯುಲರ್ ಶೋ ಕನ್ನಡ ಬಿಗ್ ಬಾಸ್ ಸೀಸನ್ 10ರ ಫೈನಲ್ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ. ಈ ಹಂತದಲ್ಲಿ ಮನೆಯೊಳಗೆ ಸ್ಪರ್ಧಿಗಳ ಪೈಪೋಟಿ, ಮಾತಿನ ಚಕಮಕಿ ಜೋರಾಗೇ ನಡೆಯುತ್ತಿದೆ. ವಾರದ ಆರಂಭದಲ್ಲಿ ಎಂದಿನಂತೆ ನಾಮಿನೇಷನ್ ಚಟುವಟಿಕೆ ನಡೆದಿದೆ. ಅದರ ಝಲಕ್ ಕಲರ್ಸ್ ಕನ್ನಡ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ. ''ನಾಮಿನೇಶನ್ ಬಿಸಿ!'' ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಮನೆಯಲ್ಲಿರುವ ಪ್ರತೀ ಸ್ಪರ್ಧಿಗಳ ಮೈ ಮೇಲೆ ಹೃದಯಾಕಾರದ ಬೋರ್ಡ್ ಅನ್ನು ನೇತುಹಾಕಲಾಗಿದೆ. ಕ್ಯಾಪ್ಟನ್ ಸಂಗೀತಾ ಹೊರತುಪಡಿಸಿ ಎಲ್ಲಾ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು. ಇದೇ ನಾಮಿನೇಶನ್ ಪ್ರಕ್ರಿಯೆ.
ಈ ಚಟುವಟಿಕೆಯಲ್ಲಿ ಕಾರ್ತಿಕ್ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ತನಿಷಾರವರು ನಮ್ರತಾ ಅವರ ಹೆಸರು ಹೇಳಿದ್ದಾರೆ. ನಿನ್ನೆಯ ವಿನಯ್ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ನಾಮಿನೇಶನ್ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಇಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಎಲ್ಲಿವರೆಗೆ ಅವರ ನಾಲಿಗೆಗೆ ಲಗಾಮ್ ಬೀಳಲ್ವೋ ಅಲ್ಲಿವರೆಗೆ ಅವರು ಈ ಮನೆಯಲ್ಲಿರಲು ಅರ್ಹತೆ ಇಲ್ಲ ಎಂದು ಪ್ರತಾಪ್ ಅವರು ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ.
-
ನಾಮಿನೇಶನ್ ಬಿಸಿ!
— Colors Kannada (@ColorsKannada) January 9, 2024 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/J8Fqi6knka
">ನಾಮಿನೇಶನ್ ಬಿಸಿ!
— Colors Kannada (@ColorsKannada) January 9, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/J8Fqi6knkaನಾಮಿನೇಶನ್ ಬಿಸಿ!
— Colors Kannada (@ColorsKannada) January 9, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/J8Fqi6knka
ಇದನ್ನೂ ಓದಿ: 'ಬಿಗ್ ಬಾಸ್ ಸೀಸನ್ 10ರಲ್ಲಿ ಬೆಂಕಿ ಬಂತು': ತನಿಷಾಗಾಗಿ ಹಾಡು, ಅಭಿಮಾನಿ ಬಳಗ
ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು. ಬಿಗ್ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.
ಇದನ್ನೂ ಓದಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಪ್ರಕರಣ: ಚಿಕಿತ್ಸೆ ಫಲಿಸದೇ ಗದಗದಲ್ಲಿ ಮತ್ತೋರ್ವ ಅಭಿಮಾನಿ ಸಾವು