ETV Bharat / entertainment

ಕನ್ನಡ ಬಿಗ್​ ಬಾಸ್​: ಹಳ್ಳಿಮನೆಯಲ್ಲಿ ಹೊತ್ತಿಕೊಂಡಿದೆ ಮಾತಿನ ಕಿಚ್ಚು - Bigg Boss

Kannada Bigg Boss: ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​​ ಕನ್ನಡದ ಪ್ರೋಮೋ ಅನಾವರಣಗೊಂಡಿದೆ.

Kannada Bigg Boss
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Nov 1, 2023, 1:31 PM IST

'ಬಿಗ್​ ಬಾಸ್​' ಕನ್ನಡದ ಜನಪ್ರಿಯ ರಿಯಾಲಿಟಿ ಶೋ. ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಪ್ರೇಕ್ಷಕರು ಇದ್ದಾರೆ. ''ಬಿಗ್‌ ಬಾಸ್‌'' ಸೀಸನ್ 10 ರ ನಾಲ್ಕನೇ ವಾರ ಈ ಹಿಂದೆ ಇದ್ದಷ್ಟು ಶಾಂತಿವಾಗಿಲ್ಲ. ಜಿದ್ದಾಜಿದ್ದಿಯೊಂದಿಗೆ ಮೊದಲ ದಿನ ಆರಂಭಗೊಂಡಿದ್ದು, ಇಂದೂ ಕೂಡ ಕಾವೇರಿದಂತಿದೆ. ಟಾಸ್ಕ್​ ವಿಚಾರವಾಗಿ ಮನೆ ಮಂದಿಯ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಕಿರುಚಾಟ, ನೂಕಾಟ - ತಳ್ಳಾಟ ಸಹಜವಾಗಿಬಿಟ್ಟಿದೆ. 'ವಿನಯ್ - ಕಾರ್ತಿಕ್ ನಡುವೆ ಹೆಚ್ಚಾಗ್ತಿದ್ಯಾ ದುಶ್ಮನಿ?' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್​​ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

'ತಳ್ಳೋದು ಪಳ್ಳೋದು ಮಾಡಿದ್ರೆ ತೆಗ್ದು ಕಪಾಳಕ್ಕೆ ಬಾರಿಸ್ಬೇಕು'

'ಏ ಲೂಸರ್'

'ಬಾಯಿ ಮುಚ್ಕೊಂಡ್ ಆಡು'

'ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ?'

'ಕಿತ್ತೋದೋಳು'

'ನೀನ್ ಕಿತ್ತೋದೋಳು'

'ಮರ್ಯಾದೆ ಇಲ್ದಿರೋ ನಿನ್ನಂಥೋಳ ಹತ್ರ ಏನ್ ಮಾತು?'

'ಬಾರೋ'

'ಹೋಗಲೇ ಗಂಡಸಿನ ಥರ ಆಡು, ಬಳೆ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ'

ಅಬ್ಬಬ್ಬಾ! ಇವೆಲ್ಲ ಯಾವುದೋ ಬೀದಿ ಜಗಳದ ತುಣುಕುಗಳಲ್ಲ. ಕನ್ನದ ಖ್ಯಾತ ಕಾರ್ಯಕ್ರಮ ಬಿಗ್‌ ಬಾಸ್‌ ಮನೆಯೊಳಗೆ ರೂಪುಗೊಂಡಿರುವ ಹಳ್ಳಿ ಟಾಸ್ಕ್‌ನಲ್ಲಿ ಕೇಳಿ ಬಂದ ಮಾತುಗಳು. ಈ ಚಕಮಕಿಯ ತುಣುಕುಗಳು ಜಿಯೋ ಸಿನಿಮಾ, ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಾಣಿಸಿಕೊಂಡಿವೆ.

ನವೆಂಬರ್‍ 1 ರ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಗ್‌ ಬಾಸ್‌, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟ ಟಾಸ್ಕ್‌ ಕೊಟ್ಟಿದ್ದಾರೆ. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ಪ್ರತ್ಯೇಕಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಇಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್‌ ಆರಂಭಗೊಂಡಿತ್ತು.

ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಮಾತಿನ ಖುಷಿಯೊಂದಿಗೇನೆ ದಿನ ಆರಂಭಗೊಂಡಿತ್ತು. ಸ್ಪರ್ಧಿಗಳೆಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದ್ರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿಯ್ತೋ, ಒಲೆಯೊಳಗಿನ ಬೆಂಕಿ ಕಿಡಿ ಕೂಡ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.

ಇದನ್ನೂ ಓದಿ: ಬಿಗ್ ಬಾಸ್‌ ಕನ್ನಡ: ಟಿಶ್ಯೂ ಮೇಲೆ ಇಶಾನಿ ರ‍್ಯಾಪ್ ಲಿರಿಕ್ಸ್!

ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ, ವಿನಯ್‌ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈ-ಕೈ ಮಿಲಾಯಿಸುವ ಮಟ್ಟಕ್ಕೂ ಹೋದಂತೆ ಪ್ರೋಮೋದಲ್ಲಿ ತೋರಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ 2023: ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರಿಂದ​ ನಾಡಿನ ಜನತೆಗೆ ಶುಭಾಶಯ

ಹೀಗೆ ಜಗಳದ ಕಿಡಿ ಹೊತ್ತಿಕೊಂಡ ಸಂದರ್ಭ ಯಾವುದು? ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡಲು ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ಕನ್ನಡ ನೇರಪ್ರಸಾರವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆಯ ನೇರ ಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.