ETV Bharat / entertainment

'Love..ಲಿ' ಮೂಡ್​​ನಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್‌ ವಸಿಷ್ಠ ಸಿಂಹ - ಲವ್​ ಲಿ ಸಿನಿಮಾ ಲೇಟೆಸ್ಟ್​ ಅಪ್ಡೇಟ್​​

ವಸಿಷ್ಠ ಸಿಂಹ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ರೆಡಿಯಾಗಿದ್ದಾರೆ. ಈ ಸಿನಿಮಾಗೆ 'Love..ಲಿ' ಎಂಬ ಟೈಟಲ್ ಇಡಲಾಗಿದೆ..

Love li Movie poster reveal
ವಸಿಷ್ಟ ಸಿಂಹ ಅಭಿನಯದ ಲವ್​ ಲಿ ಚಿತ್ರದ ಪೋಸ್ಟರ್ ರಿವೀಲ್
author img

By

Published : Apr 22, 2022, 9:52 AM IST

ಕನ್ನಡ ಚಿತ್ರರಂಗದಲ್ಲಿ ಕಂಚಿನ ಕಂಠದ ಜೊತೆ ವಿಭಿನ್ನ ಸಿನಿಮಾಗಳ ಮೂಲಕ ಬೇಡಿಕೆ ಹೊಂದಿರುವ ನಟ‌ ವಸಿಷ್ಠ ಸಿಂಹ. ಸದ್ಯ ಕನ್ನಡದ ಜತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಖಳನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟ ವಸಿಷ್ಠ ಸಿಂಹ, ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸುತ್ತಿದ್ದಾರೆ.

Love li movie team
Love..ಲಿ ಚಿತ್ರ ತಂಡ

ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ 'ಕಾಲಚಕ್ರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜತೆಗೆ 'ಚಿಟ್ಟೆ ತಲ್ವಾರ್ ಪೇಟೆ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅಲ್ಲದೇ ಇದೀಗ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ರೆಡಿಯಾಗಿದ್ದಾರೆ. ಈ ಸಿನಿಮಾಗೆ 'Love..ಲಿ' ಎಂಬ ಟೈಟಲ್ ಇಡಲಾಗಿದೆ.

ನಿನ್ನೆ (ಗುರುವಾರ) ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್​​ನಲ್ಲಿ ಚಿಟ್ಟಿ ಮಿಂಚಿದ್ದಾರೆ.

Love li movie team
Love..ಲಿ ಚಿತ್ರ ತಂಡ

ಇದನ್ನೂ ಓದಿ: ನ್ಯೂಯಾರ್ಕ್-ಪ್ಯಾರಿಸ್ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆಲ್ಲುವತ್ತ 'ಕಾಲಚಕ್ರ'

'Love..ಲಿ' ಸಿನಿಮಾ ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದೆ. ರೋಮ್ಯಾನ್ಸ್-ಲವ್ ಸ್ಟೋರಿ ಜತೆಗೆ ರೌಡಿಸಂ ಸೇರಿದಂತೆ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

Love li movie team
Love..ಲಿ ಚಿತ್ರ ತಂಡ

ಮೇ 4ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯದಲ್ಲಿಯೇ ಉಳಿದ ಕಲಾ ಬಳಗವನ್ನು ಚಿತ್ರತಂಡ ಪರಿಚಯಿಸಲಿದೆ. ವಸಿಷ್ಠ ಸಿಂಹ ಬತ್ತಳಿಕೆಯಲ್ಲಿ ಸಾಕಷ್ಟು ಪ್ರಾಜೆಕ್ಟ್​​ಗಳಿವೆ. ಹೆಡ್ ಬುಷ್, ಸಿಂಬಾ, ಓದೆಲಾ ರೈಲ್ವೆ ಸ್ಟೇಷನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಸಿಷ್ಠ ಸಿಂಹ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 'ಹೆಡ್​​ ಬುಷ್' ಅಡ್ಡದಲ್ಲಿ ವಸಿಷ್ಠ ಸಿಂಹ, ಶೃತಿ ಹರಿಹರನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.