ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜರಾಗಿದ್ದ ದಿ.ನರಸಿಂಹರಾಜು ಅವರ ಹಿರಿಯ ಪುತ್ರಿ ಧರ್ಮವತಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಧರ್ಮವತಿ ಅವರಿಗೆ ಅವರಿಗೆ 71 ವರ್ಷ ವಯಸ್ಸಾಗಿತ್ತು.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಧರ್ಮವತಿ ಕೊನೆಯುಸಿರೆಳೆದಿದ್ದಾರೆ. ಸಂಜೆ ಹೆಬ್ಬಾಳ ಚಿತಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಈ ಬಗ್ಗೆ ಧರ್ಮವತಿ ಅವರ ಮಗ ಅರವಿಂದ್ ಮಾಹಿತಿ ನೀಡಿದ್ದಾರೆ.
ಧರ್ಮವತಿ ಅವರಿಗೆ ಇಬ್ಬರು ಮಕ್ಕಳಿದ್ದು, ದೊಡ್ಡ ಮಗ ಅರವಿಂದ್ ಹಾಗು ಕಿರಿಯ ಮಗ ಅವಿನಾಶ್ ನರಸಿಂಹರಾಜು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅರವಿಂದ್ ಹಲವು ಸಿನಿಮಾಗಳ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶವನ್ನೂ ಮಾಡಿದ್ದಾರೆ. ಅವಿನಾಶ್ 'ಜುಗಾರಿ', 'ಲಾಸ್ಟ್ ಬಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ!