ನವದೆಹಲಿ: ಪ್ರಚೋದನಕಾರಿ ಪೋಸ್ಟ್ ಆರೋಪದ ಮೇರೆಗೆ ಶಾಶ್ವತವಾಗಿ ಟ್ವಿಟರ್ನಿಂದ ಬ್ಯಾನ್ ಆಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಬ್ಲ್ಯೂಟಿಕ್ ಪಡೆಯಲು 8 ಡಾಲರ್ ಶುಲ್ಕ ನೀಡಬೇಕು ಎಂಬ ಎಲೋನ್ ಮಸ್ಕ್ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಇದು ಉತ್ತಮ ನಿರ್ಣಯ. ಅಧಿಕೃತ ಟ್ವಿಟರ್ಗಾಗಿ ಆಧಾರ್ ಕಾರ್ಡ್ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ, ಟ್ವಿಟರ್ ಬ್ಲ್ಯೂಟಿಕ್ಗಾಗಿ ಹಣ ಪಾವತಿಸಬೇಕಾದ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಇದರಿಂದ ಅನಧಿಕೃತ ಖಾತೆಗಳು ರದ್ದಾಗಲಿವೆ. ಇವುಗಳಿಂದ ವಿನಾಕಾರಣ ತೊಂದರೆ ಅನುಭವಿಸಬೇಕಾಗಿದೆ. ಎಲ್ಲ ಅಧಿಕೃತ ಖಾತೆಗಳು ಬ್ಲ್ಯೂಟಿಕ್ ಪಡೆಯಬೇಕು. ಇದಕ್ಕೆ ಆಧಾರ್ ಕಾರ್ಡ್ ಪರಿಶೀಲನೆಯೂ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಟ್ವಿಟರ್ ಅತ್ಯುತ್ತಮ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದು ಬೌದ್ಧಿಕ ಮತ್ತು ಸೈದ್ಧಾಂತಿಕವಾಗಿ ನೆರವಾಗಲಿದೆ. ಇದರಲ್ಲಿ ಹಲವರು ಅನಧಿಕೃತ ಖಾತೆ ಹೊಂದಿದ್ದಾರೆ. ಯಾರನ್ನಾದರೂ ಹುಡುಕಬೇಕಾದರೆ, ಹಲವು ಖಾತೆಗಳು ತೆರೆದುಕೊಳ್ಳುತ್ತವೆ. ಹಣ ನೀಡಿ ಬ್ಲ್ಯೂಟಿಕ್ ಪಡೆಯಬೇಕು ಎಂದು ತಮ್ಮ ತಂದೆಯ ಖಾತೆ ಉದಾಹರಣೆ ನೀಡಿದ್ದಾರೆ.
ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯನ್ನು ಕಂಪನಿ ಶಾಶ್ವತವಾಗಿ ರದ್ದು ಮಾಡಿದೆ. ಇವರ ವಿರುದ್ಧ ಪ್ರಚೋದನಾತ್ಮಕ ಪೋಸ್ಟ್ ಮಾಡಿದ ಆರೋಪಗಳಿವೆ. ಟ್ವಿಟರ್ ಬ್ಲ್ಯೂಟಿಕ್ಗೆ ವಿಧಿಸಿದ ಶುಲ್ಕಕ್ಕೆ ಬೆಂಬಲ ನೀಡಿದ್ದ ನಟಿಯ ಖಾತೆಯನ್ನು ಮರು ಪಡೆಯುವಂತೆ ಅಭಿಮಾನಿಗಳು ಕೋರಿದ್ದಾರೆ.
ಓದಿ: ಶ್ರೀಕಾಕುಳಂ ಐಐಐಟಿಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಪೋಷಕರಿಗೆ ಮಾಹಿತಿ ನೀಡದ ಅಧಿಕಾರಿಗಳು