ETV Bharat / entertainment

ಕಂಗನಾ ರಣಾವತ್​ ನಟನೆಯ 'ತೇಜಸ್'​ ಬಿಡುಗಡೆ; ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ - ಈಟಿವಿ ಭಾರತ ಕನ್ನಡ

ಸರ್ವೇಶ್ ಮೇವಾರಾ ನಿರ್ದೇಶನದ, ಕಂಗನಾ ರಣಾವತ್​ ನಟನೆಯ 'ತೇಜಸ್​' ಸಿನಿಮಾ ಇಂದು ತೆರೆ ಕಂಡಿದೆ.

Tejas X review, box office day 1: Kangana Ranaut starrer gets lukewarm response, likely to fare below expectations on opening day
ಕಂಗನಾ ರಣಾವತ್​ ನಟನೆಯ 'ತೇಜಸ್'​ ಬಿಡುಗಡೆ; ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ
author img

By ETV Bharat Karnataka Team

Published : Oct 27, 2023, 6:45 PM IST

ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಯ 'ತೇಜಸ್​' ಸಿನಿಮಾ ಇಂದು ಅದ್ಧೂರಿಯಾಗಿ ತೆರೆ ಕಂಡಿದೆ. ಇತ್ತೀಚೆಗಷ್ಟೇ ಅವರ 'ಚಂದ್ರಮುಖಿ 2' ಚಿತ್ರ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಇದೀಗ 'ತೇಜಸ್'​ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ.

  • #TejasReview - A Delightful Patriot.

    One of the best movie of #KanganaRanaut career , her Acting , her dialogues , her Emotion , her expression is totally mind-blowing

    Direction is top level , Storyline is simply brilliant.

    A Must watch ⭐⭐⭐⭐#Tejas #KanganaRanaut

    — Gaurav singh (@GauravS_vission) October 27, 2023 " class="align-text-top noRightClick twitterSection" data=" ">

ಪ್ರೇಕ್ಷಕರು ಹೇಳಿದ್ದೇನು?: 'ತೇಜಸ್​' ಸಿನಿಮಾ ಎಕ್ಸ್​ನಲ್ಲಿ ಬಗೆ ಬಗೆಯ ಕಮೆಂಟ್​ಗಳನ್ನು ಸ್ವೀಕರಿಸಿದೆ. ಗಂಭೀರವಾಗಿ ಹೇಳಬೇಕಾದ ಕಥೆಯನ್ನು ಹಾಸ್ಯರೂಪದಲ್ಲಿ ಹೇಳಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಕಾರಾತ್ಮಕ ಕಮೆಂಟ್​ಗಳ ಮಧ್ಯೆಯೂ ಆ್ಯಕ್ಷನ್​ ಸೀಕ್ವೆನ್ಸ್ ಹಾಗೂ ದೇಶಪ್ರೇಮವನ್ನು ಸಾರಿದ್ದಕ್ಕಾಗಿ ಚಿತ್ರವು ಪ್ರಶಂಸೆಯನ್ನು ಕೂಡ ಪಡೆದುಕೊಂಡಿದೆ ಎಂಬುದು ಗಮನಾರ್ಹ ವಿಚಾರ. ಕಂಗನಾ ರಣಾವತ್​ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದಲ್ಲಿ ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್​ ಜೀವ ತುಂಬಿದ್ದಾರೆ. ತಮ್ಮ ಕೋಚ್ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ ಅತ್ಯಂತ ಧೈರ್ಯಶಾಲಿ, ಫೈಟರ್ ಪೈಲಟ್ ಎಂದು ಕಂಗನಾರನ್ನು ಪರಿಚಯಿಸಲಾಗಿದೆ. ತೇಜಸ್‌ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಗೂಢಾಚಾರನನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸೆರೆ ಹಿಡಿದು ಹಿಂಸಿಸಿದ ಹಿನ್ನೆಲೆ, ಘಟನೆ ತೀವ್ರ ಸ್ವರೂಪ ಪಡೆಯುತ್ತದೆ. ಗೂಢಾಚಾರಿಯನ್ನು ರಕ್ಷಿಸಲು ತನಗೆ ಅವಕಾಶ ನೀಡುವಂತೆ ತೇಜಸ್ ತಮ್ಮ ಹಿರಿಯರಲ್ಲಿ ವಿನಂತಿಸುತ್ತಾರೆ. ಹೀಗೆ ಸಿನಿಮಾ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌, ಡೈಲಾಗ್ಸ್​ ಮೂಲಕ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ರಕ್ಷಣಾ ಸಚಿವರು, ವಾಯುಪಡೆ ಅಧಿಕಾರಿಗಳಿಗೆ 'ತೇಜಸ್'​ ವಿಶೇಷ ಪ್ರದರ್ಶನ ಆಯೋಜಿಸಿದ್ದ ಕಂಗನಾ ರಣಾವತ್​

ಚಿತ್ರತಂಡ: ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್​ ಭಾರತೀಯ ಯುದ್ಧ ವಿಮಾನಗಳ ಅದ್ಭುತ ವೈಮಾನಿಕ ದೃಶ್ಯಗಳನ್ನು ಒಳಗೊಂಡಿತ್ತು. ರೋನಿ ಅವರ ಆರ್‌ಎಸ್‌ವಿಪಿ ಬ್ಯಾನರ್ ನಿರ್ಮಾಣದ ಈ ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ. 40 ಕೋಟಿ ಬಜೆಟ್​ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ನಟ ಅನ್ಶುಲ್ ಚೌಹಾಣ್​, ವರುಣ್​ ಮಿತ್ರಾ, ವೀಣಾ ನಾಯರ್​, ಮಿರ್ಕೋ ಕ್ವೈನಿ, ರೋಹೆದ್​ ಖಾನ್​ ಹಾಗೂ ಅನುಜ್​ ಖುರಾನಾ​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಪಿ.ವಾಸು ನಿರ್ದೇಶನದ ಕಂಗನಾ ರಣಾವತ್​ ಅಭಿನಯದ ಚಂದ್ರಮುಖಿ 2 ಸಿನಿಮಾ ಬಿಡುಗಡೆಯಾಗಿತ್ತು. ತಮಿಳಿನ ಹಾರರ್​ ಕಾಮಿಡಿ ಸಿನಿಮಾ ಚಂದ್ರಮುಖಿಯ ಭಾಗ 2 ಇದಾಗಿದೆ. ಇದರಲ್ಲಿ ನಟ ರಜನಿಕಾಂತ್​ ಹಾಗೂ ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಚಂದ್ರಮುಖಿ 2 ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ರಾಜನ ಆಸ್ಥಾನದಲ್ಲಿ ತನ್ನ ಸೌಂದರ್ಯ ಹಾಗೂ ನೃತ್ಯ ಕೌಶಲ್ಯಗಳಿಗೆ ಹೆಸರುವಾಸಿಯಾದ ನರ್ತಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಆಧುನಿಕ ರಾವಣರನ್ನು ಸೋಲಿಸುವವರನ್ನು ಭೇಟಿಯಾದೆ': ಇಸ್ರೇಲ್ ರಾಯಭಾರಿ ಭೇಟಿ ಮಾಡಿದ ನಟಿ ಕಂಗನಾ ರಣಾವತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.