ETV Bharat / entertainment

ಜಪಾನ್‌ನಲ್ಲಿ 'ತಲೈವಿ' ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್ - ನವಾಜುದ್ದೀನ್ ಸಿದ್ದಿಕಿ

ಜಪಾನ್‌ನಲ್ಲಿ ನಡೆದ ಒಸಾಕಾ ತಮಿಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ತಲೈವಿ' ಸಿನಿಮಾಕ್ಕಾಗಿ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್

author img

By

Published : May 22, 2023, 5:56 PM IST

ಮುಂಬೈ : ಬಾಲಿವುಡ್‌ನ 'ಧಕಡ್' ನಟಿ ಕಂಗನಾ ರಣಾವತ್ ಜಪಾನ್‌ನಲ್ಲಿ ನಡೆದ ಒಸಾಕಾ ತಮಿಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ‘ತಲೈವಿ’ ಸಿನಿಮಾಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಗೌರವಕ್ಕೆ ನಟಿ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಕಂಗನಾ ರನೌತ್, 'ಈ ಗೌರವಕ್ಕೆ ಧನ್ಯವಾದಗಳು. ತಲೈವಿ ನಿಜವಾಗಿಯೂ ನನ್ನ ಹೃದಯದ ಭಾಗ. ಈ ಪ್ರಶಸ್ತಿಗೆ ತುಂಬಾ ಧನ್ಯವಾದಗಳು. ಒಸಾಕಾ ತಮಿಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಭಾನುವಾರ ವಿಜೇತರ ಪಟ್ಟಿಯನ್ನು ಹಂಚಿಕೊಂಡಿದೆ. ಇದರಲ್ಲಿ ದಕ್ಷಿಣ ಚಿತ್ರ 'ಮಾಸ್ಟರ್'ಗಾಗಿ ಟಾಲಿವುಡ್ ಸ್ಟಾರ್ ವಿಜಯ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ನೀಡಲಾಯಿತು.

ತಲೈವಿ' 2021 ಸಿನಿಮಾ ಜಯಲಲಿತಾ ಅವರ ಜೀವನಚರಿತ್ರೆ ಆಧಾರಿತ ಚಲನಚಿತ್ರವಾಗಿದ್ದು, ನಟಿ-ರಾಜಕಾರಣಿಯಾಗಿದ್ದ ಜಯಲಲಿತಾ (ಕಂಗನಾ ರಣಾವತ್ ನಟಿಸಿದ್ದಾರೆ), ಸುಪ್ರಸಿದ್ಧ ಎಂ ಜಿ ರಾಮಚಂದ್ರನ್ (ಅರವಿಂದ ಸ್ವಾಮಿ ನಿರ್ವಹಿಸಿದ್ದಾರೆ) ಅವರೊಂದಿಗಿನ ಸಂಬಂಧ ಮತ್ತು ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರ ಬಗ್ಗೆ ಸಿನಿಮಾ ಚಿತ್ರಿತವಾಗಿದೆ.

20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ನಟಿ: ಚಿತ್ರಕ್ಕಾಗಿ ಕಂಗನಾ ಅತ್ಯುತ್ತಮವಾದುದನ್ನು ನೀಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತ, ಅವರು ತಮ್ಮ ಪಾತ್ರವನ್ನು ನೈಜವಾಗಿಸಲು ಶ್ರಮಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ಕೇವಲ 6 ತಿಂಗಳಲ್ಲಿ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್
ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್

ಸಿನಿಮಾದ ಹಲವು ದೃಶ್ಯಗಳು ನಿಜಘಟನೆಯಿಂದ ಪ್ರೇರಿತಗೊಂಡು ಯಥಾವತ್ತಾಗಿ ಚಿತ್ರಿಸಲಾಗಿದೆ. ಎಂಜಿಆರ್ ಮೃತಪಟ್ಟಾಗ ಅವರ ತಲೆಯ ಬಳಿ ಜಯಲಲಿತಾ ದುಃಖತಪ್ತರಾಗಿ ನಿಂತಿದ್ದ ವಿಡಿಯೋ ಕ್ಲಿಪ್ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಹಾಗೆಯೇ ಅವರ ಬದುಕಿನ ವಿವಿಧ ಘಟ್ಟಗಳ ವಿಡಿಯೋಗಳು ಕೂಡಾ ಸಿಗುತ್ತವೆ. ಸಿನಿಮಾದ ಕೆಲ ದೃಶ್ಯಗಳು ಆ ಕ್ಲಿಪ್​ಗಳನ್ನು ನೆನಪಿಸುತ್ತವೆ. ಅಲ್ಲದೆ ಜಯಲಲಿತಾ ಉಡುತ್ತಿದ್ದ ದಿರಿಸುಗಳನ್ನು ಅವರ ಹಳೆಯ ಭಾವಚಿತ್ರಗಳಿಂದ ತಿಳಿದುಕೊಂಡು ಅದರಂತೆಯೇ ರೂಪಿಸಲಾಗಿದೆ. ಒಟ್ಟಿನಲ್ಲಿ ಅಂದಿನ ಕಾಲಘಟ್ಟ ಮತ್ತು ಜಯಲಲಿತಾ ಅವರನ್ನು ಜನರು ಕಂಡಂತೆಯೇ ಚಿತ್ರಿಸಲು ನಿರ್ದೇಶಕ ಎಲ್ ವಿಜಯ್ ಪ್ರಯತ್ನ ಪಟ್ಟಿರುವುದು ತಿಳಿದುಬರುತ್ತದೆ.

ವಿವಾದಾತ್ಮಕ ಸಂಗತಿಯನ್ನು ಚಿತ್ರಿಸಲಾಗಿಲ್ಲ: ಚಿತ್ರದಲ್ಲಿ ಕಂಡುಬರುವ ಇನ್ನೊಂದು ಅಂಶವೆಂದರೆ ಚಿತ್ರ ವಿವಾದಾತ್ಮಕ ಸಂಗತಿಗಳನ್ನು ಮುಟ್ಟಲು ಹೋಗದೆ ಉಳಿದುಕೊಂಡಿದೆ. ಜಯಲಲಿತಾ - ಎಂಜಿಆರ್, ಜಯಾ- ಶಶಿಕಲಾ ನಡುವಿನ ಸಂಬಂಧ, ಜಯ ಮತ್ತು ಎಂಜಿಆರ್ ಪತ್ನಿ ಮಧು ನಡುವಿನ ಸಂಬಂಧ ಹೀಗೆ ಮುಂತಾದ ವಿಚಾರಗಳನ್ನು ಹೆಚ್ಚು ಕೆದಕಿಲ್ಲ.

ಕಂಗನಾ ರಣಾವತ್ ಅವರು 'ತೇಜಸ್', 'ಎಮರ್ಜೆನ್ಸಿ', 'ಚಂದ್ರಮುಖಿ 2', 'ಮಣಿಕರ್ಣಿಕಾ 2' ನಂತಹ ಇತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜಸ್​ನಲ್ಲಿ ಕಂಗನಾ ಏರ್ ಫೋರ್ಸ್ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ನವಾಜುದ್ದೀನ್ ಸಿದ್ದಿಕಿ ಅಭಿನಯದ 'ಟಿಕು ವೆಡ್ಸ್ ಶೇರು' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Jr.ಎನ್​ಟಿಆರ್​ ಸಿಂಹಾದ್ರಿ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಕಾಣಿಸಿಕೊಂಡ ಬೆಂಕಿ: ಪ್ರೇಕ್ಷಕರು ಸುರಕ್ಷಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.