ಮುಂಬೈ: ನಿರ್ದೇಶಿಸಿ, ನಟಿಸುತ್ತಿರುವ ತಮ್ಮ ಮುಂಬರುವ ಸಿನಿಮಾ 'ಎಮೆರ್ಜೆನ್ಸಿ' ಯಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಬುಧವಾರ ಸಿಆರ್ಪಿಎಫ್ ಯೋಧರೊಂದಿಗೆ ದಸರಾ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸಿಆರ್ಪಿಎಫ್ ಯೋಧರೊಂದಿಗೆ ದಸರಾ ಶಾಸ್ತ್ರ, ಪೂಜೆ, ಆಯುಧಗಳನ್ನು ಪೂಜಿಸುವ ಹಿಂದೂ ಸಂಪ್ರದಾಯದ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ಜೊತೆ "ದೇಶ್ ಕಿ ಜೋ ರಕ್ಷಾ ಕರತೇ ಹೈಂ, ಈಶ್ವರ ಉನ್ಕೆ ರಕ್ಷಾ ಕರೇ (ನಮ್ಮ ರಾಷ್ಟ್ರವನ್ನು ರಕ್ಷಿಸುವವರನ್ನು ಸರ್ವಶಕ್ತನು ಕಾಪಾಡಲಿ)" ಎಂದು ಬರೆದಿದ್ದಾರೆ.
"ಧರ್ಮ್ ಸೇ ಆಪ್ ಚಾಹೆ ಜೋ ಭಿ ಹೋ ಲೇಕಿನ್ ಜೋ ಕರ್ಮ್ ಸೆ ಕ್ಷತ್ರಿಯ ಹೈ ಉನ್ಹೇ ವಿಜಯದಶಮಿ ಪೇ ಸಿರ್ಫ್ ಏಕ್ ಸಂದೇಶ್, ವಿಜಯಭಾವ (ಒಬ್ಬ ಯಾವುದೇ ಧರ್ಮವನ್ನು ಅನುಸರಿಸಬಹುದು, ಆದರೆ ಕಾರ್ಯದಿಂದ ಕ್ಷತ್ರಿಯರಾಗಿರುವವರಿಗೆ ನನ್ನದೊಂದು ಸಂದೇಶ, ನೀವು ಜೀವನದಲ್ಲಿ ಎಲ್ಲವನ್ನು ಗೆಲ್ಲುವಂತಾಗಲಿ) ಎಂದು ಇನ್ನಷ್ಟು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಕಂಠದಲ್ಲಿ ಮೂಡಿ ಬಂತು ದೇವಿ ಸಂಗೀತ