ETV Bharat / entertainment

ಕಮಲ್​ ಕೊಂಡಾಡಿದ ಅಮಿತಾಭ್​: ನಟ ಹಾಸನ್​ ನೆಗೆಟಿವ್​ ರೋಲ್​ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ? - ಕಮಲ್​ ಹಾಸನ್ ​​ಪ್ರಾಜೆಕ್ಟ್ ಕೆ

ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್​​ಗೆ ವರ್ಚುಯಲ್​ ಆಗಿ ಸೇರಿಕೊಂಡ ಹಿರಿಯ ನಟ ಅಮಿತಾಭ್​ ಬಚ್ಚನ್​​ ಅವರು ಕಾಲಿವುಡ್​ ಸೂಪರ್​ ಸ್ಟಾರ್ ಕಮಲ್ ಹಾಸನ್ ಬಗ್ಗೆ ಗುಣಗಾನ ಮಾಡಿದ್ದಾರೆ.

Kamal Haasan negative role in project K
ನೆಗೆಟಿವ್​ ರೋಲ್​ನಲ್ಲಿ ಕಮಲ್​ ಹಾಸನ್
author img

By

Published : Jul 21, 2023, 4:03 PM IST

ಭಾರತದ ಬಹುನಿರೀಕ್ಷಿತ ಸಿನಿಮಾ 'ಪ್ರಾಜೆಕ್ಟ್ ಕೆ' ನ ಫಸ್ಟ್ ಗ್ಲಿಂಪ್ಸ್ ಈಗಾಗಲೇ ಅನಾವರಣಗೊಂಡು ಸಖತ್​ ಸದ್ದು ಮಾಡುತ್ತಿದೆ. 'ಕಲ್ಕಿ 2898 ಎಡಿ' ('Kalki 2898 AD') ಸಿನಿಮಾದ ಫೈನಲ್​ ಟೈಟಲ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ. ನಾಗ್​ ಅಶ್ವಿನ್​​ ನಿರ್ದೇಶನದ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​, ಬಾಲಿವುಡ್​ ಪ್ರತಿಭೆ ದೀಪಿಕಾ ಪಡುಕೋಣೆ, ಬಿಗ್​ ಬಿ ಅಮಿತಾಭ್​ ಬಚ್ಚನ್​​, ಕಾಲಿವುಡ್​ ಸೂಪರ್​ ಸ್ಟಾರ್ ಕಮಲ್ ಹಾಸನ್ ಮತ್ತು ಬಾಲಿವುಡ್​ ಫಿಟ್ನೆಸ್ ಐಕಾನ್​​ ದಿಶಾ ಪಟಾನಿ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ​

ಸೌತ್​ ಸೂಪರ್​ ಸ್ಟಾರ್ ಕಮಲ್ ಹಾಸನ್ ಅವರು ಇತ್ತೀಚೆಗೆ ಚಿತ್ರತಂಡ ಸೇರಿದ್ದಾರೆ. ಸ್ಯಾನ್​ ಡಿಯಾಗೋದಲ್ಲಿ ನಡೆಯುತ್ತಿರುವ ಕಾಮಿಕ್​ ಕಾನ್​ ಈವೆಂಟ್​ನಲ್ಲಿಯೂ ನಟ ಕಮಲ್​ ಹಾಸನ್​ ಭಾಗವಹಿಸಿದ್ದರು. ಆದ್ರೆ ಚಿತ್ರದಲ್ಲಿ ನೆಗೆಟಿವ್​ ಪಾತ್ರವನ್ನು ನಿರ್ವಹಿಸಲು ಕಮಲ್ ಒಪ್ಪಿಕೊಂಡಿದ್ದಾರೆ. ಇದರ ಹಿಂದಿನ ಕಾರಣವನ್ನು ಕೂಡ ಸೂಪರ್​ ಸ್ಟಾರ್​​ ಬಹಿರಂಗಪಡಿಸಿದ್ದಾರೆ.

ನೆಗೆಟಿವ್ ರೋಲ್​ ಪ್ರಮುಖ ಪಾತ್ರ: ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ನಲ್ಲಿ ಪ್ರಾಜೆಕ್ಟ್ ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್ ಮತ್ತು ಟೈಟಲ್​ ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಕಮಲ್ ಅವರು ನಾಗ್​​ ಅಶ್ವಿನ್ ಅವರ ಚಿತ್ರದಲ್ಲಿ ನಟಿಸಲು ಏಕೆ ಒಪ್ಪಿಕೊಂಡರು ಎಂಬುದರ ಕುರಿತು ಮಾತನಾಡಿದರು. "ನಾನು ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ, ನಾನು ಇದೇ ರೀತಿಯ ಸಿನಿಮಾದಿಂದ ಬಂದಿದ್ದೇನೆ. ನೆಗೆಟಿವ್ ಇಲ್ಲದೇ, ಯಾವುದೇ ಪಾಸಿಟಿವ್​ ಇಲ್ಲ. ಹಾಗಾಗಿ, ಚಿತ್ರದಲ್ಲಿ ನಕಾರಾತ್ಮಕ ಪಾತ್ರ ಪ್ರಮುಖ ಪಾತ್ರವಾಗಿದೆ" ಎಂದು ತಿಳಿಸಿದರು. ಕಲ್ಕಿ 2898 ಎಡಿ ಚಿತ್ರದಲ್ಲಿ ಕಮಲ್​ ಮಾತ್ರವಲ್ಲದೇ ಅಮಿತಾಭ್​​ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಇದನ್ನೂ ಓದಿ: Project K First Glimpse: 'ಕಲ್ಕಿ 2898 ಎಡಿ' ಟೈಟಲ್​ನೊಂದಿಗೆ ಪ್ರಾಜೆಕ್ಟ್ ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್‌

ಕಮಲ್​ ಕೊಂಡಾಡಿದ ಅಮಿತಾಭ್​: ಇನ್ನೂ ಕಾಮಿಕ್​ ಕಾನ್​ ಈವೆಂಟ್​ಗೆ ವರ್ಚುವಲ್​ ಆಗಿ ಸೇರಿಕೊಂಡ ಹಿರಿಯ ನಟ ಅಮಿತಾಭ್​ ಬಚ್ಚನ್​​, ಕಮಲ್ ಹಾಸನ್​​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಾರತೀಯ ಪ್ರೇಕ್ಷಕರು ಚಿತ್ರರಂಗಕ್ಕೆ ತರುವ ಶಕ್ತಿ ಮತ್ತು ಅವರ ಪ್ರೀತಿ ಹೇಗೆ ತಾರೆಯರನ್ನು ಸೃಷ್ಟಿಸುತ್ತದೆ ಎಂಬ ವಿಚಾರಕ್ಕೆ ಕಮಲ್​​ ಹಾಸನ್ ಅವರು ಮನ್ನಣೆ ನೀಡುತ್ತಾರೆ. "ಸಾಧಾರಣ ಕಮಲ್ ಆಗಿರುವುದನ್ನು ನಿಲ್ಲಿಸಿ, ನೀವು ನಮ್ಮೆಲ್ಲರಿಗಿಂತ ತುಂಬಾ ದೊಡ್ಡವರು" ಎಂದು ಅಮಿತಾಭ್​ ಬಚ್ಚನ್​​ ಹೇಳಿದರು.

ಇದನ್ನೂ ಓದಿ: ನರೇಂದ್ರ ಮೋದಿ ಬಯೋಪಿಕ್​​: ಮೋದಿ ಪಾತ್ರದಲ್ಲಿ ಅಮಿತಾಭ್​ ಬಚ್ಚನ್ ಅಭಿನಯ?

ಇನ್ನೂ, ಕಮಲ್ ಹಾಸನ್ ಅವರು ಬಿಗ್ ಬಿ ಅಭಿನಯದ ಶೋಲೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ದಿನಗಳ ಬಗ್ಗೆಯೂ ಮಾತನಾಡಿದ್ದಾರೆ. ಸುಮಾರು ನಾಲ್ಕು ದಶಕಗಳ ನಂತರ ಬಿಗ್ ಬಿ ಮತ್ತು ಕಮಲ್ ಸಿನಿಮಾವೊಂದರಲ್ಲಿ ಮತ್ತೆ ಒಂದಾಗಿದ್ದಾರೆ. ಈ ಜೋಡಿ 1985 ರಲ್ಲಿ ಗೆರಾಫ್ತಾರ್ ನಲ್ಲಿ ಸ್ಕ್ರೀನ್​ ಶೇರ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.